Breaking News

ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಪ್ರಾಣಉಳಿಸಿದ್ ರೈತ

Spread the love

ಗದಗ : ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಪ್ರಾಣ ರೈತರೊಬ್ಬರು ಉಳಿಸಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬಾವಿಯ ಪೊದೆಯಲ್ಲಿ ಬೆಕ್ಕು ಸಿಲುಕಿಕೊಂಡಿತ್ತು. ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಧ್ವನಿ ಕೇಳಿ ರೈತ ಮಹಾಂತೇಶ ಬೆಕ್ಕನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ಮೂರು ದಿನಗಳಿಂದ ಬಾವಿಯಲ್ಲಿ ಬಿದ್ದಿರುವ ಬೆಕ್ಕು ಸಾವು ಬದಕಿನ ಮಧ್ಯೆ ಹೊರಾಟ ನಡೆಸುತ್ತಿತ್ತು. ಬಾವಿಯ ಒಳಗಿರುವ ಪೊದೆಗೆ ಬಂದು ತನ್ನ ಪ್ರಾಣ ಉಳಿಸಿಕೊಂಡಿತ್ತು. ಬಾವಿಯಿಂದ ಮೇಲೆ ಬರಲಾರದೇ ಬೆಕ್ಕು ನರಳಾಡುತ್ತಿತ್ತು.ರೈತ ಮಹಾಂತೇಶ್ ಪ್ರಾಣದ ಹಂಗು ತೊರೆದು ಬಾವಿ ಒಳಗೆ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾರೆ. ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಾಣಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿರುವ ರೈತ ಮಾಹಂತೇಶ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ