Breaking News

ಗುದದ್ವಾರಕ್ಕೆ ಏರ್‌ಬಿಟ್ಟು ಯುವಕ ದುರ್ಮರಣ!

Spread the love

ಬೆಂಗಳೂರು: ಇಬ್ಬರು ಸ್ನೇಹಿತರು ತಮಾಷೆ ಮಾಡುವ ಬರದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಾಹನ ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್‌ ಪ್ರೆಶರ್‌ ಮೆಶಿನ್‌ ಗಾಳಿಯು ಗುದದ್ವಾರದ ಮೂಲಕ ಕರಳಿಗಿ ನುಗ್ಗಿ ಯುವಕ ಸಾವಿಗೀಡಾಗಿದ್ದಾನೆ.ಅಶ್ವತ್ಥ ನಗರದ ಯೋಗೇಶ್‌ (23) ಮೃತ ದುರ್ದೈವಿ.

ಮಾರ್ಚ್‌ 25 ರಂದು ರಾತ್ರಿ ಯೋಗೇಶ್‌ ಗುದದ್ವಾರಕ್ಕೆ ಏರ್‌ಪ್ರೆಶರ್‌ ಗನ್‌ ಇಟ್ಟು ಸಾವಿಗೆ ಕಾರಣವಾದ ಆರೋಪದ ಮೇರೆಗೆ ಥಣಿಸಂದ್ರದ ಮುರುಳಿ (24) ಎಂಬುವನನ್ನು ಪೊಲೀಸರುಬಂಧಿಸಿದ್ದಾರೆ.

ಯೋಗೇಶ್ ಹಾಗೂ ಮುರುಳಿ ಹಲವು ವರ್ಷಗಳ ಸ್ನೇಹಿತರೆಂಬುದು ತನಿಖೆಯಿಂದ ಗೊತ್ತಾಗಿದೆ. ತಮಾಷೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿರುವುದಾಗಿ ಆರೋಪಿ ಮುರುಳಿ ಹೇಳಿಕೆ ನೀಡಿದ್ದಾನೆ.

ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ