Breaking News

ಬೆಂಗಳೂರಲ್ಲಿ ಅಹಿಂದ ಸಮಾವೇಶ ಮಾಡುತ್ತಿಲ್ಲ: ಯತೀಂದ್ರ ಸಿದ್ದರಾಮಯ್ಯ

Spread the love

ರಾಯಚೂರು: ಬೆಂಗಳೂರಲ್ಲಿ ಅಹಿಂದ ಸಮಾವೇಶ  ಮಾಡುತ್ತಿಲ್ಲ. ಹಿಂದುಳಿದ ವರ್ಗಗಳ ಒಕ್ಕೂಟದ ಸಮಾವೇಶ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ  ಹೇಳಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಕ್ಕೂಟದ ರಜತ ಮಹೋತ್ಸವ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ತಂದೆಯವರನ್ನ ಕರೆದಿದ್ದಾರೆ. ಹಾಗೇ ಹಿಂದುಳಿದ ವರ್ಗಗಳ ನಾಯಕರನ್ನ ಕರೆದಿದ್ದಾರೆ. ಬಿಜೆಪಿ ಪಾದಯಾತ್ರೆಗೆ ಟಕ್ಕರ್ ಕೊಡಲು ಅದನ್ನ ಮಾಡುತ್ತಿಲ್ಲ. ನಾವು ರಾಜಕೀಯ ಮಾಡುವುದಕ್ಕೆ ಪ್ರತಿಪಕ್ಷಗಳ ವಿರುದ್ಧ ನಾವು ಕಾರ್ಯಕ್ರಮ ಮಾಡುತ್ತಲೇ ಇರುತ್ತೇವೆ. ರಾಯಚೂರಿನಲ್ಲೂ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮಾಡೇ ಮಾಡ್ತಿವಿ ಎಂದರು.

ಇನ್ನು ಬಿಜೆಪಿ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದೊಂದು ವಿಫಲ ಪಾದಯಾತ್ರೆ. ಪ್ರಚಾರ ಗಿಟ್ಟಿಸಿಕೊಳ್ಳುವ ಪಾದಯಾತ್ರೆ ಮಾಡುತ್ತಿದ್ದಾರೆ. ಮೊದಲು ಪಾದಯಾತ್ರೆ ಉದ್ದೇಶ ಏನಿತ್ತು, ನಾಗೇಂದ್ರ ರಾಜಿನಾಮೆಗೆ ಪಾದಯಾತ್ರೆ ಅಂತ ಹೇಳಿದ್ರು. ಅವರ ಉದ್ದೇಶ ಈಡೇರಿದೆ. ನಾಗೇಂದ್ರ ರಾಜಿನಾಮೆ ಕೊಟ್ಟಿದ್ದಾರೆ. ಆದರೂ ಬೇಕು ಅಂತಾನೆ ರಾಜಕೀಯ ಮಾಡಲು ಇಲ್ಲಸಲ್ಲದ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಹೆಚ್ಚು ಜನಾಕೂಡ ಬರುತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜಿನಾಮೆ ಕೊಟ್ಟಿದ್ದಾರೆ. ವಿಶೇಷ ಅಧಿವೇಷನ ಕರೆದಿರೋದು ಬಿಜೆಪಿ ಪಾದಯಾತ್ರೆ ಇಂಪ್ಯಾಕ್ಟ್ ಅಲ್ಲ. ನಮ್ಮ ಸರ್ಕಾರ ಜನರಿಗೆ ಸ್ಪಂದಿಸುವ ಸರ್ಕಾರ, ಜನರ ಆಶಯದ ಪ್ರಕಾರ ನಡೆದುಕೊಳ್ಳುವ ಸರ್ಕಾರ ಎಂದು ನುಡಿದರು.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ