Breaking News
Home / ಅಂತರಾಷ್ಟ್ರೀಯ / ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಗಂಡು ಮಕ್ಕಳನ್ನು ಹೆತ್ತ ಮಹಾತಾಯಿ

ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಗಂಡು ಮಕ್ಕಳನ್ನು ಹೆತ್ತ ಮಹಾತಾಯಿ

Spread the love

ವಾಷಿಂಗ್ಟನ್: ಗಂಡು ಮಗು ಬೇಕೆಂದು ಹೆಣ್ಣು ಮಗುವನ್ನು ಹೆತ್ತು ಕಾಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದಂಪತಿ ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಲ್ಲದೆ ಬರೋಬ್ಬರಿ ಮೂರು ದಶಕಗಳ ಬಳಿಕ ಇದೀಗ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ಈ ಘಟನೆ ನಡೆದಿದ್ದು, ಕಟೇರಿ ಶ್ವಾಂಡ್ಟ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟಿದ ಸಮಯದಲ್ಲಿ 3.4 ಕೆ.ಜಿ ತೂಕವಿದ್ದ ಮ್ಯಾಗಿ ಜಯ್ನೆಯನ್ನು 14 ಸಹೋದರರು ಸ್ವಾಗತಿಸಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಮ್ಯಾಗಿ ಜನಿಸಿದ್ದಾಳೆ.

ಕಟೇರಿ ಹಾಗೂ ಇವರ ಪತಿ ಜೇ ಇಬ್ಬರೂ 45 ವರ್ಷದವರಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಅತೀವ ಸಂತಸಪಟ್ಟಿದ್ದಾರೆ. ನಾವು ತುಂಬಾ ಸಂತೋಷವಾಗಿದ್ದೇವೆ. ಮ್ಯಾಗಿ ಜಯ್ನೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೆವು. ಈ ವರ್ಷ ನಮಗೆ ಹಲವು ಕಾರಣಗಳಿಂದಾಗಿ ತುಂಬಾ ನೆನಪಿನಲ್ಲಿ ಇರುತ್ತದೆ. ಆದರೆ ಮ್ಯಾಗಿ ನಮಗೆ ಬಹುದೊಡ್ಡ ಉಡುಗೊರೆ. ನಾವು ಇದನ್ನು ಊಹಿಸಿರಲಿಲ್ಲ ಎಂದು ಜೇ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಕುಟುಂಬ ಬೆಳೆದಿರುವ ಪರಿಯನ್ನು ದಂಪತಿ ಹಂಚಿಕೊಂಡಿದ್ದು, ಕುಟುಂಬವು 14 ಔಟ್‍ರೋರ್ಸ್‍ಮೆನ್ ಎಂಬ ಲೈವ್ ಸ್ಟ್ರೀಮಿಂಗ್ ಹೊಂದಿದೆ. ಇದನ್ನು ಅವರು ಮರುನಾಕರಣ ಮಾಡಲಿದ್ದಾರೆ. ಈ ಕುರಿತು ಮ್ಯಾಗಿಯ ಹಿರಿಯ ಅಣ್ಣ 28 ವರ್ಷದ ಟೈಲರ್ ಈ ಕುರಿತು ಮಾತನಾಡಿ, 14 ಮಕ್ಕಳು ಜನಿಸಿದ ಮೇಲೆ ಹೆಣ್ಣು ಮಗು ಜನಿಸುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ತಾಯಿ ಮತ್ತೆ ಪಿಂಕ್ ಉಡುಗೆ ತೊಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಟೈಲರ್ ಸಹ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೆತ್ತವರ ಜಮೀನಿನಿಂದ ಸುಮಾರು 20 ನಿಮಿಷಗಳ ದೂರದಲ್ಲಿ ಮನೆ ಖರೀದಿಸಿದ್ದಾರೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ