Breaking News

ಮುನಿರತ್ನ, ಭೈರತಿ ಬಸವರಾಜ್ ಹಾಗೂ ಸೋಮಶೇಖರ್ ಮಾನಗೆಟ್ಟವರು,:ಸಿದ್ದರಾಮಯ್ಯ 

Spread the love

ಬೆಂಗಳೂರು: ಮುನಿರತ್ನ, ಭೈರತಿ ಬಸವರಾಜ್ ಹಾಗೂ ಸೋಮಶೇಖರ್ ಮಾನಗೆಟ್ಟವರು, ಲಜ್ಜೆಗೆಟ್ಟವರು ಅಂತಾ ವಿರೋಧ ಪಕ್ಷದ  ನಾಯಕ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದ್ದಾರೆ.

ರಾಜರಾಜೇಶ್ವರಿ ಕ್ಷೇತ್ರದಲ್ಲಿ  ಇಂದು ಕಾಂಗ್ರೆಸ್ ಅಭ್ಯರ್ಥಿ  ಕುಸುಮಾ ಪರ ಪ್ರಚಾರದ ವೇಳೆ ಮಾತನಾಡಿದ ಅವರು,  ಮುನಿರತ್ನ ರಾಜಕೀಯದಲ್ಲಿರಲು ನಾಲಾಯಕ್. ಮುನಿರತ್ನ ಕ್ಷೇತ್ರ ಅಭಿವೃದ್ಧಿ ಮಾಡಿದ್ದು ಯಾರು ಕೊಟ್ಟ ಹಣದಿಂದ..? ನಾನು ಸಿಎಂ ಆಗಿದ್ದಾಗ ಕೊಟ್ಟ ಹಣದಿಂದ.ಇದೊಂದೇ ಕ್ಷೇತ್ರಕ್ಕೆ ನಾನು ಎರಡು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇನೆ. ಈಗ ನಮಗೆಲ್ಲ ಬೆನ್ನಿಗೆ ಚೂರಿ ಹಾಕಿ , ಮೋಸ ಮಾಡಿ ಬಿಜೆಪಿಗೆ ಹೋಗಿ ಅಭ್ಯರ್ಥಿ ಆಗಿದ್ದಾರೆ. ಅವರಿಗೆ ಯಾರೂ ಮತ ಕೊಡಬೇಡಿ  ಎಂದು ಕಿಡಿಕಾರಿದರು.

ನಾನು ಸಿಎಂ ಆಗಿದ್ದಾಗ ಪ್ರತಿಯೊಬ್ಬರಿಗೆ ಏಳು ಕೆಜಿ ಅಕ್ಕಿ ಕೊಡ್ತಿದ್ದೆ. ಈ ಯಡಿಯೂರಪ್ಪ ಬಂದ ಮೇಲೆ ಐದು ಕೆಜಿಗೆ ಇಳಿಸಿದ್ದಾರೆ.  ಜನರಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಿರುವ  ಈ ಯಡಿಯೂರಪ್ಪ ಏನು ಅವರಪ್ಪನ ಮನೆಯಿಂದ ತಂದು ಕೊಡ್ತಾರಾ? ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಬಂದರೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಕೊಡ್ತೀವಿ, ನಾವು ಕೂಡ ನಮ್ಮಪ್ಪನ ಮನೆಯಿಂದ ತಂದು ಕೊಡಲ್ಲ ಇದು ನಿಮ್ಮ ಹಣ, ಕೆರೆಯ ನೀರು ಕೆರೆಗೆ ಚೆಲ್ಲಿ ಅಷ್ಟನ್ನೇ ನಾವು ಮಾಡೋದು ಎಂದಿದ್ದಾರೆ.


Spread the love

About Laxminews 24x7

Check Also

ಎಐ ಬಳಸಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್ – ಮೂವರು ಅರೆಸ್ಟ್

Spread the loveಬೆಂಗಳೂರು: ಕಾಂತಾರದ  ಕನಕವತಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್‌ನಲ್ಲಿ ಸೈಬರ್ ಕ್ರೈಂ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ