Breaking News

140 ಕೋಟಿ ಬಾಚಿದ ‘ಆದಿಪುರುಷ್​’: ಮೊದಲ ದಿನವೇ 100 ಕೋಟಿ ಗಡಿ ದಾಟಿದ ಪ್ರಭಾಸ್​​ರ ಸಿನಿಮಾ

Spread the love

ಬಾಹುಬಲಿ 2, ಸಾಹೋ ಸಿನಿಮಾ ನಂತರ ‘ಆದಿಪುರುಷ್’ ಮೊದಲ ದಿನವೇ 100 ಕೋಟಿ ರೂ. ಗಡಿ ದಾಟಿದ ಪ್ರಭಾಸ್​​ ಅಭಿನಯದ ಮೂರನೇ ಸಿನಿಮಾವಾಗಿದೆ.

ದಕ್ಷಿಣ ಸಿನಿ ರಂಗದ ಪ್ರಭಾಸ್ ಮತ್ತು ಬಾಲಿವುಡ್​ ಬಹುಬೇಡಿಕೆ ನಟಿ ಕೃತಿ ಸನೋನ್ ಅಭಿನಯದ ಪೌರಾಣಿಕ ಚಲನಚಿತ್ರ ಆದಿಪುರುಷ್ ಜೂನ್ 16ರಂದು (ನಿನ್ನೆ, ಶುಕ್ರವಾರ) ಅದ್ಧೂರಿಯಾಗಿ ತೆರೆ ಕಂಡಿದೆ.

ಮಿಶ್ರ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆ ಕಂಡ ಆದಿಪುರುಷ್ ಮೊದಲ ದಿನವೇ ಸರಿಸುಮಾರು 130 – 140 ಕೋಟಿ ರೂ. ಸಂಪಾದಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಭಿಮಾನಿಗಳ ಶ್ಲಾಘನೆ ಮತ್ತು ಮಿಶ್ರ ವಿಮರ್ಶೆಗಳ ನಡುವೆಯೂ ದೊಡ್ಡ ಪರದೆಯಲ್ಲಿ ಸಖತ್​ ಸದ್ದು ಮಾಡುತ್ತಿದೆ. ಅಭಿಮಾನಿಗಳು ಪ್ರಭಾಸ್ ಅವರನ್ನು ಭಗವಾನ್ ಶ್ರೀ ರಾಮನ ರೂಪದಲ್ಲಿ ಕಾಣಲು ಉತ್ಸುಕರಾಗಿದ್ದರು. ಚಿತ್ರವು ರಾಮಾಯಣ ಆಧರಿಸಿರುವುದರಿಂದ ಸಿನಿ ಪ್ರಿಯರನ್ನು ಸೆಳೆದಿರುವುದು ಎಷ್ಟು ಸತ್ಯವೋ, ಗ್ರಾಫಿಕ್​ ವಿಚಾರವಾಗಿ ಟ್ರೋಲ್​ಗೆ ಒಳಗಾಗಿರೋದು ಕೂಡ ಅಷ್ಟೇ ನಿಜ. ಕಳಪೆ ವಿಮರ್ಶೆಗಳ ಹೊರತಾಗಿಯೂ, ಆರಂಭಿಕ ಮಾಹಿತಿ ಪ್ರಕಾರ, ಮೊದಲ ದಿನದಂದೇ ಆದಿಪುರುಷ್ ಬಾಕ್ಸ್ ಆಫೀಸ್​ನಲ್ಲಿ ಗುಡುಗಿದೆ.

ಸಿನಿ ಟ್ರೇಡ್ ವರದಿಗಳ ಪ್ರಕಾರ, ಆದಿಪುರುಷ್ ಮೊದಲ ದಿನ ಕೇವಲ ಹಿಂದಿ ಆವೃತ್ತಿಯೊಂದರಲ್ಲೇ​​ ಸಂಗ್ರಹಿಸಿದ ಹಣ ಸುಮಾರು 36-38 ಕೋಟಿ ರೂ.ಗಳು. ಇತರ ಭಾಷೆಗಳು ಸೇರಿದಂತೆ ಭಾರತದಲ್ಲಿ ಸುಮಾರು 90 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಸಾಗರೋತ್ತರ ವ್ಯವಹಾರದ ಮಾಹಿತಿ ಇನ್ನು ಬರಬೇಕಿದೆಯಷ್ಟೇ. ಓಂ ರಾವುತ್‌ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ ಒಟ್ಟು 140 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡುವ ಸಾಧ್ಯತೆಯಿದೆ ಎಂದು ವ್ಯವಹಾರ ಪಂಡಿತರು ಅಂದಾಜಿಸಿದ್ದಾರೆ. ಬಾಹುಬಲಿ 2, ಸಾಹೋ ನಂತರ ‘ಆದಿಪುರುಷ್’ ಮೊದಲ ದಿನವೇ 100 ಕೋಟಿ ರೂ. ಗಡಿ ದಾಟಿದ ಪ್ರಭಾಸ್​​ನ ಮೂರನೇ ಸಿನಿಮಾ ಆಗಿದೆ.


Spread the love

About Laxminews 24x7

Check Also

ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ

Spread the love ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಜಾಗೃತ ಫಾತಿಮಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ