Home / Uncategorized / ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.

ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.

Spread the love

ಬೆಂಗಳೂರು: ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.

ಇಂದು ಸ್ಯಾಂಡಲ್‍ವುಡ್‍ನ ಕಿಚ್ಚ, ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಪ್ರಿಯಾ ಸುದೀಪ್ 19ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಮದುವೆ ವಾರ್ಷಿಕೋತ್ಸಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

ತಮ್ಮ ಮದುವೆ ವಾರ್ಷಿಕೋತ್ಸಕ್ಕೆ ತಮ್ಮ ಪತ್ನಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಸುದೀಪ್ ಅವರು, ನಾನು ನನ್ನ ಜೀವನದ ಅರ್ಧಭಾಗಕ್ಕೂ ಹೆಚ್ಚಿನ ಕಾಲದಿಂದ ನಿನ್ನನ್ನು ಬಲ್ಲೆ. ಈ 19ನೇ ಮದುವೆ ವಾರ್ಷಿಕೋತ್ಸವದಂದು ನೀನು ನನಗೆ ಸ್ನೇಹಿತೆಯಾಗಿ ಜೊತೆಗೆ ಇದಿದ್ದಕ್ಕೆ ಧನ್ಯವಾದ. ಓರ್ವ ಒಳ್ಳೆಯ ಸ್ನೇಹಿತೆಯನ್ನು ಹುಡುಕುವುದು ಕಷ್ಟ. ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ. ಯಾವಗಲೂ ಒಳ್ಳೆಯದನ್ನೇ ಕೋರುತ್ತೇನೆ. ತುಂಬು ಹೃದಯದ ಪ್ರೀತಿ ಪ್ರಿಯ. ಹ್ಯಾಪಿ 19 ಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಅವರ ಟ್ವೀಟಿಗೆ ಮಡದಿ ಪ್ರಿಯಾ ಅವರು ಟ್ವಿಟ್ಟರ್ ಮೂಲಕವೇ ಉತ್ತರ ನೀಡಿದ್ದು, ನಿಮ್ಮ ಸಾಮಥ್ರ್ಯಕ್ಕೂ ಮೀರಿ ನಮ್ಮನ್ನು ಖುಷಿಯಾಗಿಡಲು ಪ್ರಯತ್ನ ಮಾಡುತ್ತಿರುವ ಡಾರ್ಲಿಂಗ್ ಪತಿಗೆ ಧನ್ಯವಾದಗಳು. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಹ್ಯಾಪಿ 19 ನಮಗೆ ಎಂದು ಬರೆದುಕೊಂಡಿದ್ದಾರೆ. ಚಂದನವನದ ನಟ-ನಟಿಯರು ಕಿಚ್ಚ ಮತ್ತು ಪ್ರಿಯಾ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದಾರೆ.

ಕಿಚ್ಚದ ಮದುವೆ ವಾರ್ಷಿಕೋತ್ಸಕ್ಕೆ ವಿಶ್ ಮಾಡಿರುವ ಬಾಲಿವುಡ್ ಹೀರೋ ರಿತೇಶ್ ದೇಶ್‍ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ, ಸುಂದರವಾದ ವ್ಯಕ್ತಿಗಳಾದ ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮಿಬ್ಬರ ನಡುವೆ ಇರುವ ಸಂಬಂಧ ಹಲವರಿಗೆ ಸ್ಫೂರ್ತಿಯಾಗಿದೆ. ನಿಮಗೆ ದೇವರ ಒಳ್ಳೆಯದನ್ನು ಮಾಡಲಿ. ಜೊತೆಗೆ ಹೇರಳವಾದ ಪ್ರೀತಿ ನಿಮ್ಮಬ್ಬರಿಗೆ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು 2001ರ ಅಕ್ಟೋಬರ್ 18ರಂದು ವಿವಾಹವಾಗಿದ್ದರು. ಇವರಿಗೆ 2004ರಲ್ಲಿ ಒಂದು ಹೆಣ್ಣುಮಗು ಜನಿಸಿತ್ತು. ಇಂದಿಗೆ ಈ ಜೋಡಿ ಮದುವೆಯಾಗಿ 19 ವರ್ಷಗಳಾಗಿವೆ. ಸದ್ಯ ಕಿಚ್ಚ ಸುದೀಪ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದು, ಅವರ ನಟನೆಯ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ಸುದೀಪ್ ಅವರು ಫ್ಯಾಂಟಮ್ ಚಿತ್ರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ