Breaking News

ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಡಾ.ಅಂಜಲಿ ನಿಂಬಾಳಕರ್

Spread the love

ಖಾನಾಪುರ: ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳಕರ ಗುರುವಾರ ಪಟ್ಟಣದ ಚೌರಾಶಿದೇವಿ ಮತ್ತು ತಾಲೂಕಿನ ಕಕ್ಕೇರಿ ಗ್ರಾಮದ ಬಿಷ್ಠಾದೇವಿ ದೇವಾಲಯಗಳಲ್ಲಿ ಉಭಯ ಶಕ್ತಿದೇವಿಯರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂಬರುವ ಚುನಾವಣೆಯ ಪ್ರಚಾರ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಕಕ್ಕೇರಿ ಗ್ರಾಮದ ಬಿಷ್ಠಾದೇವಿ ಆಲಯದ ಮುಂಭಾಗದಲ್ಲಿ ತಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಪಕ್ಷದ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ 5 ವರ್ಷಗಳಿಂದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಇಲ್ಲಿಯ ನಾಗರಿಕರಿಗೆ ಅನುಕೂಲ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಕ್ಷೇತ್ರದಾದ್ಯಂತ ಸಂಚರಿಸಿ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತು ಅವರ ಸಮಸ್ಯೆ, ಸಂಕಷ್ಟಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ಪ್ರಯತ್ನವನ್ನು ಮಾಡಿದ್ದೇನೆ. ಕ್ಷೇತ್ರದ ನಾಗರಿಕರಿಂದ ಕೇಳಿಬಂದ ಬೇಡಿಕೆಗಳನ್ನು ಸಕರ್ಾರಕ್ಕೆ ಗಮನಕ್ಕೆ ತಂದು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಜನರು ಸೂಚಸಿದ ಕೆಲಸವನ್ನು ಮಾಡಿತೋರಿಸಿದ್ದೇನೆ. ನನ್ನ ಈ ಐದು ವರ್ಷಗಳ ಜನಪರ ಕಾಮಗಾರಿಗಳೇ ನನ್ನನ್ನು ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಲು ಸಹಾಯಮಾಡಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

 


Spread the love

About Laxminews 24x7

Check Also

ಗಡಿ ವಿವಾದದಿಂದಾಗಿ ಮತ್ತೆ ಮಹಾರಾಷ್ಟ್ರ ಅಲರ್ಟ್

Spread the loveಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ