ಬೆಂಗಳೂರು: ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ʼಗಂಧದ ಗುಡಿʼ ಓಟಿಟಿ ಪ್ರಿಮಿಯರ್ ಗೆ ದಿನಾಂಕ ನಿಗದಿಯಾಗಿದೆ.
ಕರ್ನಾಟಕದ ವನ್ಯಜೀವನ ಯಾನವನ್ನು ಸುಂದರವಾಗಿ ಕಟ್ಟಿಕೊಟ್ಟ ʼಗಂಧದ ಗುಡಿʼ ಯಲ್ಲಿ ಅಮೋಘ ವರ್ಷ, ಅಪ್ಪು ಅವರ ಪ್ರವಾಸಿ ಪಯಣದ ಕನಸಿಗೆ ಜೊತೆಯಾಗಿದ್ದರು.
ʼಗಂಧದ ಗುಡಿʼ ಯಲ್ಲಿ ಅಪ್ಪು ಕರುನಾಡಿನ ಪ್ರಾಣಿ ಸಂಕುಲದ ಪರಿಸರದಲ್ಲಿ ಸರಳವಾಗಿ ಸಂಚರಿಸಿದ್ದರು. ಥಿಯೇಟರ್ ನಲ್ಲಿ 2022 ರ ಅಕ್ಟೋಬರ್ 28 ಬಿಡುಗಡೆಯಾದ ಸಾಕ್ಷ್ಯಚಿತ್ರಕ್ಕೆ ಅದ್ದೂರಿ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಶಾಲಾ ಮಕ್ಕಳಿಗಾಗಿ ಟಿಕೆಟ್ ದರದಲ್ಲಿ ವಿನಾಯಿತಿಯನ್ನು ನೀಡಲಾಗಿತ್ತು. ಅಪ್ಪು ಅವರ ಕನಸನ್ನು ಕರುನಾಡಿನೆಲ್ಲೆಡೆ ಪಸರಿಸಲು ಅವರ ಪತ್ನಿ ಅಶ್ವಿನಿ ಅವರು ಶ್ರಮಿಸಿದ್ದರು.
ಇದೀದ ʼಗಂಧದ ಗುಡಿʼ ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಪ್ರಿಮಿಯರ್ ಆಗಲು ಸಿದ್ದವಾಗಿದೆ. ಇದೇ ಮಾರ್ಚ್ 17 ರಿಂದ ಓಟಿಟಿಯಲ್ಲಿ ಸಾಕ್ಷ್ಯ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಅದೇ ದಿನ ಅಪ್ಪು ಅವರ 48ನೇ ಹುಟ್ಟುಹಬ್ಬವೂ ಇದೆ.
ಓಟಿಟಿ ಪ್ರಿಮಿಯರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಿಆರ್ ಕೆ ಆಡಿಯೋ ಪೋಸ್ಟ್ ಹಂಚಿಕೊಂಡಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಈ ಅನೌನ್ಸ್ ಮೆಂಟ್ ರಿವೀಲ್ ಆಗಿರುವುದು ವಿಶೇಷ.
Laxmi News 24×7