Breaking News

A.P.M.C. ಪೊಲೀಸರ ಕಾರ್ಯಾಚರಣೆ ಕುಖ್ಯಾತ ಅಂತರರಾಜ್ಯ ವಂಚಕರಬಂಧನ

Spread the love

ಬೆಳಗಾವಿ : ಎಪಿಎಮ್‌ಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರರಾಜ್ಯ ವಂಚಕರನ್ನು ಬಂಧಿಸಿದ್ದಾರೆ.
ಅವರಿಂದ ಒಟ್ಟು ರೂ.೬,೦೯,೦೦೦ ಮೌಲ್ಯದ ಬಂಗಾರ, ನಗದು & ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ದಿನಾಂಕ. ೨೯/೧೧/೨೦೨೨ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮುರಳಿಧರ
ಕಾಲನಿಯ ಸೋಮಲಿಂಗ ಅಮ್ಮಣಗಿರವರ ಎ.ಟಿ.ಎಮ್ ಕಾರ್ಡನ್ನು ಬದಲಾಯಿಸಿಕೊಂಡು ಅವರ
ಎ.ಟಿ.ಎಮ್ ಕಾರ್ಡಿಂದ ೪,೦೩,೭೮೯/- ರೂಗಳನ್ನು ತೆಗೆದುಕೊಂಡು ಮೋಸ ಮಾಡಿದ ಬಗ್ಗೆ
ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಪಿಐ ರಮೇಶ ಸಿ ಅವಜಿ ನೇತೃತ್ವದಲ್ಲಿ ಸಿಬ್ಬಂದಿಯ ತಂಡ ದಿನಾಂಕ: ೦೯-೦೩-೨೦೨೩ ರಂದು ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿದ್ದು ,
೧) ಅಮೋಲ್ ಭಗವನ್ ಶೆಂಡೆ, ಸಾ: ನೇಸರಿ, ತಾ: ಗಡಹಿಂಗ್ಲಿಜ್ ಜಿಲ್ಲಾ: ಕೊಲ್ಲಾಪೂರ
೨) ಶ್ರವಣ ಸತೀಶ ಮಿನಜಗಿ, ಸಾ:ನ ಕೇದಾಋನಾಥ ನಗರ, ಎಮ್‌ಐಡಿಸಿ ತಾ: ಜಿ: ಸೊಲ್ಲಾಪೂರ
ಇವರನ್ನು ಬಂಧಿಸಿ ಅವರಿಂದ ೧) ೧,೧೦,೦೦/- ರೂ ಮೌಲ್ಯದ ೨೦ ಗ್ರಾಂ ಬಂಗಾರದ
ಆಭರಣಗಳು, ೨) ನಗದು ಹಣ ೧.೩೯,೦೦೦/- ೩) ಒಟ್ಟು ರೂ.೩.೬೦.೦೦೦ ಮೌಲ್ಯದ ೦೨
ಮೋಟಾರ್ ಸೈಕಲ್ ಗಳು ಹೀಗೆ ಒಟ್ಟು ೬,೦೯,೦೦೦/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲಿ ಶ್ರಮಿಸಿದ ಪಿಐ ಎಪಿಎಂಸಿ
ಹಾಗೂ ಸಿಬ್ಬಂದಿಯ ತಂಡಕ್ಕೆ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ ಪ್ರದರ್ಶನ

Spread the love ಚೈನ್ನೈನ 16ನೇ ಐ.ಎ.ಪಿ.ಎಚ್.ಡಿ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿಕೆ ದಂತ ವಿಜ್ಞಾನ ವಿಭಾಗದ ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ