Breaking News

ಉದ್ಧವ್ ಠಾಕ್ರೆ ಕುಟುಂಬದಿಂದ ಕೈಜಾರಿದ ಶಿವಸೇನೆ; ಸಿಎಂ ಶಿಂಧೆ ಬಣ ಮೇಲುಗೈ

Spread the love

ನವದೆಹಲಿ ಶೀವಸೇನೆಯ ಬಿಲ್ಲು ಮತ್ತು ಬಾಣ ಚಿಹ್ನೆಯ ನಿಜವಾದ ವಾರಸುದಾರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸುವ ಮೂಲಕ ಬಾಳಾ ಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆ ಪಕ್ಷ ಠಾಕ್ರೆ ಕುಟುಂಬದಿಂದ ಅಧಿಕೃತವಾಗಿ ಕೈಜಾರಿದಂತಾಗಿದೆ.

 

ಬಾಳಾ ಸಾಹೇಬ್ ಠಾಕ್ರೆ ರಾಜಕೀಯ ಬಳುವಳಿ ಮುಂದುವರಿಸುವ ಜವಾಬ್ದಾರಿ ಹೊತ್ತರೂ ಬಿಜೆಪಿ ಜತೆ ಮುನಿಸಿಕೊಂಡು ಕಾಂಗ್ರೆಸ್-ಎನ್​ಸಿಪಿ ಜತೆ ಮೈತ್ರಿ ಮಾಡಿಕೊಂಡು ಸಿಎಂ ಕುರ್ಚಿಗೇರಿದ್ದ ಉದ್ಧವ್ ಠಾಕ್ರೆ, ಎರಡೇ ವರ್ಷದಲ್ಲಿ ಸರ್ಕಾರವನ್ನು ಕಳೆದುಕೊಳ್ಳುವ ಜತೆಗೆ ಈಗ ಶಿವಸೇನೆ ಪಕ್ಷದ ಚಿಹ್ನೆಯನ್ನೂ ಕಳೆದು ಕೊಂಡಿದ್ದಾರೆ.

ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ ಎಂದು ಉದ್ಧವ್ ಹೇಳಿದ್ದರೂ, ಸುಪ್ರೀಂಕೋರ್ಟ್ ವಿಚಾರಣೆ ಯಲ್ಲಿ ಚುನಾವಣಾ ಆಯೋಗ ನೀಡುವ ಅಭಿಪ್ರಾಯ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನುವುದು ವಾಸ್ತವ. ಹೀಗಾಗಿ, ಉದ್ಧವ್ ಠಾಕ್ರೆಗೆ ಪಾಲಿಗಿದು ದೊಡ್ಡ ರಾಜಕೀಯ ಹಿನ್ನಡೆಯೇ ಸರಿ. ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಒಳಗೊಂಡ ಮಹಾ ಅಘಾಡಿ (ಮಹಾಮೈತ್ರಿ) ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ ಶಿಂಧೆ, ಬಿಜೆಪಿಯ ವ್ಯವಸ್ಥಿತ ಕಾರ್ಯಾಚರಣೆಯ ಭಾಗವಾಗಿ ಕಳೆದ ಜೂನ್ ತಿಂಗಳಲ್ಲಿ ಸರ್ಕಾರದಿಂದ ಹೊರಬಂದು ತಮ್ಮ ನೇತೃತ್ವದ ಶಿವಸೇನೆ ಮೂಲಕ ಮಹಾ ಅಘಾಡಿ ಸರ್ಕಾರ ಪತನಗೊಳಿಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ