Breaking News

ಸಿದ್ದರಾಮಯ್ಯ 2 ಕ್ಷೇತ್ರದಲ್ಲಿ ಸ್ಪರ್ಧಿಸಲಿ: ಹರಿದಾಡುತ್ತಿದೆ ದೇವರ ಸೂಚನೆ ವಿಡಿಯೊ

Spread the love

ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂದು ಮಳವಳ್ಳಿ ತಾಲ್ಲೂಕು ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕಮ್ಮ ತಾಯಿ ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಈಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಆದಿನಾಡು ಚಿಕ್ಕಮ್ಮ ತಾಯಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ದೇವರ ದರ್ಶನ ಪಡೆಯುವ ವೇಳೆ ಆರ್ಚಕ ಟಿ.ಲಿಂಗಣ್ಣ ಅವರ ಮೈಮೇಲೆ ಚಿಕ್ಕಮ್ಮ ತಾಯಿ ಆಹ್ವಾನಗೊಂಡು ಹಲವು ಕಿವಿಮಾತುಗಳನ್ನು ಹೇಳಿದೆ.

‘ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ, ಒಂದು ಕಡೆ ಬಾಹುಬಲ ಚಾಚಿದ್ರೆ ಅಗುವುದಿಲ್ಲ, ಬಾಹುಬಲ ಎರಡು ಕಡೆ ಚಾಚಬೇಕು. ಒಂದೇ ಕಡೆ ಚಾಚಿದ್ರೆ ತಪ್ಪಾಗುತ್ತದೆ. ಅರ್ಥ ಆಯಿತ್ತೇನಪ್ಪ ನಿನಗೆ’ ಎಂದು ಯತ್ರೀಂದ್ರ ಸಿದ್ದರಾಮಯ್ಯ ಅವರನ್ನು ದೇವರು ಪ್ರಶ್ನಿಸಿದೆ.

‘ಎರಡು ಕಡೆ ಬಾಹುಬಲ ಚಾಚಿದ್ರೆ ಗೆಲ್ಲಿಸಿಕೊಂಡು ಬರುವೆ, ನಾನು ನಿಮ್ಮ ಮನೆ ದೇವರು ಎನ್ನುವುದು ತಿಳಿದಿದೆಯೇ ನಿನಗೆ? ಇಲ್ಲಿಗೆ ಬಂದು ಹೋಗುವಂತೆ ಹೇಳು’ಎಂದು ದೇವರು ಸೂಚನೆ ನೀಡಿದೆ.

ಆದಿನಾಡು ಚಿಕ್ಕಮ್ಮ ತಾಯಿ ಸಿದ್ದರಾಮಯ್ಯ ಅವರ ಮನೆಯ ಮೂಲ ದೇವರು ಆಗಿದ್ದು ಅವರು ದೇವರ ಸೂಚನೆ ಪಾಲಿಸುತ್ತಾರಾ ಎಂಬು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ