ಬೆಳಗಾವಿ ತಾಲೂಕಿನ ಸುಳಗಾ ಶಾಲೆಯ ಮಕ್ಕಳು ಕುದುರೆಮನೆಯ ಮಾರ್ಗವಾಗಿ ಬರುವ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸರಿಯಾದ ಬಸ್ ನಿಲ್ದಾಣಕ್ಕೆ ನಿಲ್ಲಿಸದೆ ಚಾಲಕ ಬಾರ್ ಅಂಗಡಿ ಮುಂದೆ ನಿಲ್ಲಿಸಿದ್ದಕ್ಕೆ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಎಂದಿನಂತೆ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಮರಳಿ ಸಾರಿಗೆ ಬಸ್ ನಲ್ಲಿ ಬರುವಾಗ ಸುಮಾರು 16 ವಿದ್ಯಾರ್ಥಿನಿಯರು ಸುಳಗಾಕ್ಕೆ ಇಳಿಸದೆ ಬಾರ್ ವೊಂದರ ಮುಂದೆ ನಿಲ್ಲಿಸಿ ನಾಳೆಯಿಂದ ಸುಳಗಾ ಸಾರಿಗೆ ಬಸ್ ನಲ್ಲಿ ಸಂಚರಿಸಬಾರದು ಎಂದು ಚಾಲಕ ವಿದ್ಯಾರ್ಥಿನಿಯರಿಗೆ ತಾಕೀತು ಮಾಡುತ್ತಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಕೂಡಲೇ ವಿದ್ಯಾರ್ಥಿಗಳು ಕಣ್ಣೀರಿಡುತ್ತಾ ಗ್ರಾಮಸ್ಥರಿಗೆ ವಿಷಯ ತಿಳಿಸುತ್ತಿದ್ದಂತೆ ಗ್ರಾಮಸ್ಥರು ಸೇರಿಕೊಂಡು ಸಾರಿಗೆ ಬಸ್ ನ ಚಾಲಕ ಹಾಗೂ ನಿರ್ವಾಹಕನಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.