Breaking News

ಫಲಕದಲ್ಲಿ ಕಾಮಗಾರಿ ಸಿಸಿ ರಸ್ತೆ ಮಾಯ ಕಳಪೆ ಚರಂಡಿ ಕಾಮಗಾರಿ ಪಂಚಾಯತರಾಜ ಇಂಜಿನಿಯರಿಂಗನ ಬ್ರಹ್ಮಾಂಡ ಭ್ರಷ್ಟಾಚಾರ

Spread the love

ಬೆಳಗಾವಿ: ಫಲಕದಲ್ಲಿ ಕಾಮಗಾರಿ ಸಿಸಿ ರಸ್ತೆ ಮಾಯ ಕಳಪೆ ಚರಂಡಿ ಕಾಮಗಾರಿ ಪಂಚಾಯತರಾಜ ಇಂಜಿನಿಯರಿಂಗನ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಗಾವಿ ನಗರದ ಕಂಗ್ರಾಳಿ ಕೆ ಎಚ್ ಗ್ರಾಮ ಪಂಚಾಯತ ವ್ಯಾಪ್ತಿಯ ವಾರ್ಡ ನಂಬರ್ 12 ರ ಆಶ್ರಯ ಕಾಲೋನಿ ಸಾರಥಿ ನಗರದಲ್ಲಿ ಕಳಪೆ ಚರಂಡಿ ಕಾಮಗಾರಿ ಮಾಡಿದ್ದು ಬಿಟ್ಟರೆ ಬೇರೆ ಯಾವೂದೇ ಸಿಸಿ ರಸ್ತೆ ಮಾಡದೆ ಕಾಮಗಾರಿ ನಡೆಯದೆ ನಿನ್ನೇ ತಡರಾತ್ರಿ ರಾತ್ರೊ ರಾತ್ರಿ ಈ ಬೋರ್ಡು ಹಾಕಿ ಬಿಲ್ ತೆಗೆದುಕೊಳ್ಳಲು ಕಾಮಗಾರಿ ಫಲಕ ಅಳವಡಿಸಿದ್ದಾರೆ.

ಎಂದು ಸ್ಥಳೀಯರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ‌.ಬೆಳಿಗ್ಗೆ ಎದ್ದು ನೋಡಿದ ಕಾಲೊನಿಯ ಜನ ದಿಗ್ಬ್ರಾಂತರಾಗಿದ್ದಾರೆ‌.ಶಾಸಕಿ ಲಕ್ಮ್ಷಿ ಹೆಬ್ಬಾಳ್ಕರ ಭಾವಚಿತ್ರ ಅಳವಡಿಸಿ ಈ ರೀತಿ ನಾಮಫಲಕ ಅಳವಡಿಸಲಾಗಿದೆ .ಫಲಕದಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯವಾದ ದಿನಾಂಕ ನಿಗದಿ ಮಾಡಿದ್ದಾರೆ.

ಈ ರೀತಿ ಸರ್ಕಾರಕ್ಕೆ ಮೋಸ ಮಾಡಿದ ಆ ಅಧಿಕಾರಿಗಳೋ ಅಥವಾ ಗುತ್ತಿಗೆದಾರನೋ ಎಂದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.ಇನ್ನೂ ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮವಾಗಿ ಕಾಮಗಾರಿ ಮುಕ್ತಾಯಗೊಂಡ ಬಗ್ಗೆ ಇನ್ನೂ ಇಂತಹ ಅನೇಕ ಫಲಕಗಳು ನಿಮ್ಮ ನಗರದಲ್ಲಿ ನಿಮಗೆ ಗೊತ್ತಿಲ್ಲಂದಂತೆ ಕಾಣಬರುತ್ತವೆ ಹುಷಾರ್.

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಗ್ರ ಅಭಿವ್ರದ್ದಿಗೆ ಸರ್ಕಾರ ಬೆಳಗಾವಿಯಲ್ಲಿ ರಾಜ್ಯದ ಹಾಗೂ ಜನರ ಸಮಸ್ಯೆ ಬಗೆಹರಿಸಲು ಮುಂದಾಗಿದೆ ಆದರೆ ಬೆಳಗಾವಿ ಯಲ್ಲೆ ಈ ರೀತಿ ಕಣ್ಣಾ ಮುಚ್ಚಾಲೆ ಆಟ ಸಾರಥಿ ನಗರದಲ್ಲಿ ಬೆಳಕಿಗೆ ಬಂದಿದೆ‌‌‌.ಈ ನಿಟ್ಟಿನಲ್ಲಿ ಸಮಗ್ರ ಚರ್ಚೆಗೆ ಈ ವಿಷಯ ಗ್ರಾಸವಗುತ್ತಾ ಎಂದು ಕಾದುನೋಡಬೇಕಿದೆ‌.

ಇನ್ನೂ ಸ್ಥಳಿಯ ಜನರು ಈ ವಿಷಯದ ಬಗ್ಗೆ ಕಳಪೆ ಚರಂಡಿ ಬಗ್ಗೆ ಅಧಿಕಾರಿಗಳಿಗೆ ದೂರು ಕೊಟ್ಟರು ಕ್ಯಾರೆ ಎನ್ನದೆ ಮನಸ್ಸಿಗೆ ಬಂದಂತೆ ಕಾಮಗಾರಿ ಮಾಡಿದ್ದಾರೆ‌.ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತೆವೆಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ