ಪೊಲೀಸ್ ಇಲಾಖೆ ಎಂದರೆ ಬಿಡುವಿಲ್ಲದ ಹಾಗೂ ಒತ್ತಡದ ಕೆಲಸ ಅನ್ನುವುದು ಎಲ್ಲರಿಗೂ ಗೊತ್ತು.ಆದ್ರೆ, ಇಂತಹ ಕೆಲಸಗಳ ನಡುವೆಯೂ ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐಯೊಬ್ಬರು ಯುವ ಸಮುದಾಯಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.ಅವರ ಕಾರ್ಯಕ್ಕೆ ಪೊಲೀಸ್ ಇಲಾಖೆ ಡಿಜಿಪಿ ಪ್ರವೀಣ ಸೂದ್,ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಲೋಕುಮಾರ್ ಟ್ವಿಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಹಾಗಾದರೆ ಘಟಪ್ರಭಾ ಸಿಪಿಐ ವರ್ಲ್ಡ್ ರಿಕಾರ್ಡ್
ಕಟ್ಟು ಮಸ್ತಾದ ದೇಹ. ದೇಹಕ್ಕೆ ತಕ್ಕಂತೆ ಹೈಟು. ಸರ್ಕಾರಿ ಕೆಲಸವೇ ದೇವರ ಕೆಲಸ ಅಂತಾ ಮೈಗೂಡಿಸಿಕೊಂಡಿರುವ ಇವರು ಶ್ರೀಶೈಲ್ ಬ್ಯಾಕೋಡ್ ಅಂತಾ. ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐಯಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಶೈಲ್ ಬ್ಯಾಕೋಡ ಮೂಲತಃ ಬಾಗಲಕೋಟೆ ಜಿಲ್ಲೆಯ ಈಗಿನ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವರು. ಸದಾ ಉತ್ಸಾಹಿಯಾಗಿರುವ ಶ್ರೀಶೈಲ್ ಬ್ಯಾಕೋಡ ಕಳೆದ ಹದಿನೈದು ವರ್ಷಗಳಿಂದ 2007ರಿಂದ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆಗಿರುವ ಛಾಪನ್ನು ಮೂಡಿಸಿದ್ದಾರೆ. ಕಳ್ಳಕಾಕರಿಗೆ ಸಿಂಹಸ್ವಪ್ನವಾಗಿ ತಾನು ಮಾಡಿದ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿಕೊಂಡಿದ್ದರು. ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲಸ ಮಾಡಿ ಇದೀಗ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಕೊಲ್ಲಾಪುರದಲ್ಲಿ ನಡೆದ ವಿಶಿಷ್ಟ ಕ್ರೀಡೆ-ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ (ಈಜು, ಸೈಕಲ್, ಓಟ) ಸ್ಪರ್ಧೆಯಲ್ಲಿ ಹಾಪ್ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ.