ಬೆಂಗಳೂರು: ಕಳೆದ ಆರು ವರ್ಷಗಳಿಂದ ರೈತರ ಮೇಲೆ ಪ್ರಧಾನಿ ಮೋದಿಯವರ ವಕ್ರದೃಷ್ಟಿ ಬಿದ್ದಿರಲಿಲ್ಲ. ಹೀಗಾಗಿ ರೈತರ ಆದಾಯ ಕಡಿಮೆ ಆಗಿರಲಿಲ್ಲ ಎಂದು ಶಾಸಕ ಕೃಷ್ಣಭೈರೇಗೌಡ ಹೇಳಿದ್ದಾರೆ.
ನಗರದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈಗ ಅಂಬಾನಿ ಮತ್ತು ಅದಾನಿ ಮಾತ್ರ ಶ್ರೀಮಂತರಾದ್ರು. ದೇಶ ಹಿಂದೆ ಬಿದ್ರೆ ಅಂಬಾನಿ ಮಾತ್ರ ಪ್ರಪಂಚದಲ್ಲಿಯೇ ಐದನೇ ಶ್ರೀಮಂತರಾದ್ರು. ಬಿಜೆಪಿ ಇದೇ ರೀತಿ ಮುಂದುವರಿಯಲು ಬಿಟ್ರೆ ದೇಶ ಅಧೋಗತಿಗೆ ಹೋಗುತ್ತೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಕಿತ್ತು ಒಗೆಯುವವರೆಗೂ ಸುಮ್ಮನೆ ಕೂರಬಾರದು ಎಂದು ವಾಗ್ದಾಳಿ ನಡೆಸಿದರು.
ಅಂಬಾನಿ ಪ್ರಪಂಚದ ಐದನೇ ಶ್ರೀಮಂತ ಆಗಿದ್ದಾರೆ. ದೇಶ ಕೆಳಗೆ ಹೋಗಿದೆ, ಇವರು ಮೇಲೆ ಹೋಗುತ್ತಿದ್ದಾರೆ. ದೇಶದಲ್ಲಿ ಏರ್ ಪೊರ್ಟ್ ಗಳನ್ನು ಅದಾನಿಗೆ ನೀಡುತ್ತಿದ್ದಾರೆ. ಇವರ ಕೆಂಗಣ್ಣಿಗೆ ರೈತರಿ ಕಂಡಿರಲಿಲ್ಲ, ಈಗ ಇವರ ಕೆಂಗಣ್ಣಗೆ ಗುರಿ ಮಾಡುತ್ತಿದ್ದಾರೆ. ಅಂಬಾನಿ , ಅದಾನಿಗೆ ಇವರುಗಳು ಎಲ್ಲವನ್ನೂ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ರುಕಾಂಗ್ರೆಸ್ ಧರ್ಮ ಜನರ ಸಮಸ್ಯೆಗಳಲ್ಲಿ ಭಾಗಿಯಾಗುವುದು. ಸಮಸ್ಯೆಗಳನ್ನು ನಾವು ಹೊರಗೆ, ವಿಧಾನಸಭೆಯಲ್ಲಿ ಮಾತಾಡಿದ್ದೇವೆ. ಇವರನ್ನು ತೆಗೆಯದಿದ್ದರೆ ರೈತರು ಉಳಿಯಲ್ಲ, ಕಾರ್ಮಿಕರೂ ಉಳಿಯಲ್ಲ. ಬರಿ ಅದಾನಿ, ಅಂಬಾನಿ ಉಳಿಯುತ್ತಾರೆ. ನಾವು ಚುನಾವಣೆ ಬಂದಾಗ ತಯಾರಿ ಮಾಡುವುದಲ್ಲ ಈಗಿನಿಂದಲೇ ಹೋರಾಟ ಮಾಡಬೇಕು. ಬರೀ ಸಮಸ್ಯೆಗೆ ಪರಿಹಾರ ಬಿಜೆಪಿಯನ್ನು ಕಿತ್ತೊಗೆಯುವುದು. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಕೆಲಸ ಮಾಡಬೇಕು ಎಂದರು.