Breaking News

ಬೋನಸ್ ನೀಡದ್ದಕ್ಕೆ ಗ್ರಾಮ ಪಂಚಾಯಿತಿಗೆ ಚಪ್ಪಲಿ ಹಾರ

Spread the love

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿಗೆ ಗಾಂಧಿ ಜಯಂತಿಯಂದೇ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಗಾಂಧಿ ಜಯಂತಿ ಆಚರಣೆ ಮಾಡಿ ಕಚೇರಿಗೆ ಬಾಗಿಲು ಹಾಕಿ ಹೋಗಲಾಗಿತ್ತು. ಸಿಬ್ಬಂದಿ ಮನೆಗೆ ಹೋದ ನಂತರ ಈ ಕೃತ್ಯ ಎಸಗಲಾಗಿದೆ.

ಈ ಬಗ್ಗೆ ದೇವನಹಳ್ಳಿ ತಾಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಸೂಚನೆ ಮೇರೆಗೆ ಪಿಡಿಒ ಶಿವರಾಜ್ ವಿಜಯಪುರ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಪ್ರತಿ ವರ್ಷ ದಸರಾ ಹಬ್ಬಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಬೋನಸ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಬೋನಸ್ ನೀಡಲು ಪಿಡಿಒ ನಿರಾಕರಿಸಿದ್ದಾರೆ.

ಈ ಕಾರಣಕ್ಕೆ ಸಿಬ್ಬಂದಿಗಳೇ ಆಕ್ರೋಶಗೊಂಡು ಈ ರೀತಿಯ ಕೃತ್ಯ ಮಾಡಲಾಗಿದೆ ಎಂಬ ಆರೋಪಿಗಳು ಕೇಳಿ ಬರುತ್ತಿವೆ. ಗ್ರಾಮಪಂಚಾಯತ್​ನಲ್ಲಿರುವ ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಮಾಡಲಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ