Breaking News

ಬೆಳಗಾವಿಯಲ್ಲಿ ಮಳೆಗೆ ಮನೆ ಕುಸಿತ.. ತಾಯಿ ಮಗು ಬಲಿಯಾದ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ

Spread the love

ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿತ ಆಗಿ ತಾಯಿ ಮಗು ಮೃತಪಟ್ಟಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ ಮಹಾಂತೇಶ ಮಠದ ಅವರು ಹತ್ತು ಲಕ್ಷ ರೂ. ಪರಿಹಾರ ವಿತರಿಸಿದರು.

ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದ ಮಹಾದೇವ ಎಂಬುವವರ ಮನೆ ಕುಸಿದು ಮಗ ಪ್ರಜ್ವಲ್ ಮಹಾದೇವ ಬಾಗಿಲದ (5) ಹಾಗೂ ಪತ್ನಿ ಯಲ್ಲವ್ವ ಮಹಾದೇವ ಬಾಗಿಲದ (40) ಸ್ಥಳದಲ್ಲೇ ಮೃತಪಟ್ಟಿದ್ದರು. ಇದೇ ಕುಟುಂಬದ ಉದ್ದವ್ವ ಹಾಗೂ ರೂಪಾ ಎಂಬುವವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ತ್ವರಿತವಾಗಿ ಸ್ಪಂದಿಸಿದ ಯರಗಟ್ಟಿ ತಾಲೂಕಾಡಳಿತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಜೊತೆಗೆ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿತ್ತು. ಸದ್ಯ ಮೃತ ಕುಟುಂಬದ ಸಂಬಂಧಿಕರಿಗೆ ತಾಲೂಕು ಆಡಳಿತದ ವತಿಯಿಂದ ಯರಗಟ್ಟಿ ತಹಶಿಲ್ದಾರ್ ಮಹಾಂತೇಶ ಮಠದ ಹತ್ತು ಲಕ್ಷ ರೂ. ಪರಿಹಾರ ನೀಡಿದ್ದಾರೆ


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ