Breaking News

9 ದಿನ ಚಪ್ಪಲಿಗೆ ಗೂಡ್ ಬೈ ಹೇಳಿದ ಅಂಜಲಿ ನಿಂಬಾಳ್ಕರ್..!

Spread the love

ಖಾನಾಪೂರ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನವರಾತ್ರಿ ನಿಮಿತ್ಯ ಆದಿಶಕ್ತಿಯನ್ನು ಜಪಿಸಲು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಇಂದಿನಿಂದ 9 ಉಪವಾಸ ವೃತ ಕೈಗೊಂಡು, ಕಾಲಿನಲ್ಲಿ ಚಪ್ಪಲಿ ಧರಿಸದೇ ತಮ್ಮ ವೃತವನ್ನು ಆರಂಭಿಸಿದ್ದಾರೆ.

ನವರಾತ್ರಿಯ 9 ದಿನ ಆದಿಶಕ್ತಿ, ಜಗನ್ಮಾತೆಯನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದ್ರೆ ದೇವಿ ಬೇಡಿದ್ದನ್ನು ಕೊಡುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಖಾನಾಪೂರ ತಾಲೂಕಿನ ಜನತೆಯ ಶಾಂತಿ ನೆಮ್ಮದಿ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಿಂದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಕಾಲಿನಲ್ಲಿ ಚಪ್ಪಲಿಗಳನ್ನು ಧರಿಸದೆ, ನವರಾತ್ರಿಯ ಸಮಯದಲ್ಲಿ ಉಪವಾಸ ವೃತ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ವೃತವನ್ನು ಆರಂಭಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಂಜಲಿ ನಿಂಬಾಳ್ಕರ್ ಖಾನಾಪೂರ ತಾಲೂಕಿನ ಪ್ರತಿ ವ್ಯಕ್ತಿಗೆ ಸುಖ ಶಾಂತಿ ನೆಮ್ಮದಿಯನ್ನು ಆ ದೇವಿ ನೀಡುವಂತೆ ಸಂಕಲ್ಪ ಮಾಡಿ ಇಂದಿನಿಂದ ವೃತ ಆರಂಭಿಸಿದ್ದೇನೆ. ದೇವಿ ನಮ್ಮ ಬೇಡಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಈ ಉಪವಾಸ ವೃತಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು. ಇಂತಹ ಶಾಸಕರನ್ನು ಪಡೆದ ನಾವೇ ಧನ್ಯ ಎನ್ನುತ್ತಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ