Breaking News

ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಜನಸಾಗರ

Spread the love

ನಾಳೆ ಬೆಳಗಾದರೆ ಸಾಕು ಮನೆ ಮನಮನೆಗೆ ಗಣೇಶನ ಆಗಮನವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜನತೆ ಗಣೇಶ ಹಬ್ಬದ ಆಚರಣೆಗೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು

ಹೌದು ನಾಳೆ ಬೆಳಗಾಗುವುದಷ್ಟೇ ತಡ, ಮನೆ ಮನೆಗೆ ಗಣೇಶನ ಆಗಮನವಾಗುತ್ತದೆ. ಇನ್ನು ಬೆಳಗಾವಿ ಎಂದರೆ ಕೇಳಬೇಕೆ, ನಗರದಲ್ಲಿ ಗಣೇಶೋತ್ಸವ ಆಚರಣೆಗೆ ತನ್ನದೇ ಆದ ವಿಶೇಷ ಮಹತ್ವವಿದೆ.

ಹಾಗಾಗಿ ಗಣೇಶೋತ್ಸವ ಆಚರಣೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿ ನಗರದ ಮಾರ್ಕೆಟ್‍ನಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು.

ಈ ವೇಳೆ ಜನತೆ ಗಣೇಶೋತ್ಸವಕ್ಕೆ ಬೇಕಾದ ಹೂವು, ಹಣ್ಣು, ಹಾರ, ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳುವಲ್ಲಿ ಬ್ಯೂಸಿಯಾಗಿದ್ದರು. ಈ ವೇಳೆ ಮಾರುಕಟ್ಟೆಯಲ್ಲಿ ಹೂವು ಹಾಗೂ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು.

ಇನ್ನು ವ್ಯಾಪಾರಸ್ಥರೂ ಕೂಡ ಹಬ್ಬದ ಹಿನ್ನೆಲೆಯಲ್ಲಿ ಯಥೇಚ್ಚ ಪ್ರಮಾಣದಲ್ಲಿ ಹಣ್ಣು ಹಾಗೂ ಹೂವನ್ನು ಮಾರ್ಕೆಟ್‍ಗೆ ತಂದಿದ್ದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ