Breaking News

ಬೆಳಿಗ್ಗೆ ಯಿಂದ ಹುಡುಕಿದರೂ ಸಿಗದ ಚಿರತೆ..

Spread the love

ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನಕ್ಕೆ ನುಗ್ಗಿದ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲ್ ಶಿಬಿರದಿಂದ ನಗರ ತಲುಪಿರುವ ಅರ್ಜುನ(20) ಮತ್ತು ಆಲೆ(14) ಬೆಳಗ್ಗೆ ವಿಶ್ರಾಂತಿ ಪಡೆದವು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಕಾರ್ಯಾಚರಣೆ ಆರಂಭವಾಯಿತು.

ಮೈದಾನದ ಸುತ್ತಲೂ ಬಲೆ ಅಳವಡಿಸಲಾಗಿದೆ‌. ಸುತ್ತಲಿನ ಪ್ರದೇಶದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಕ್ರಮ ವಹಿಸಲಾಗಿದೆ.

ಆ.5ರಂದು ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯೂ 20 ದಿನಗಳಿಂದ ನಡೆಸಿದ ಪ್ರಯತ್ನ ಇಲ್ಲಿಯವರೆಗೆ ಸಫಲವಾಗಿಲ್ಲ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ