ಕೊಚ್ಚಿ: ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ದೌರ್ಜನ್ಯ, ಮೋಸ ಪ್ರಕರಣಗಳು ಬೆಳೆಯುತ್ತಲೇ ಸಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಇಡೀ ಜಗತ್ತನ್ನು ಎಷ್ಟು ಹತ್ತಿರ ಮಾಡುತ್ತಿದೆಯೋ, ಅಷ್ಟೇ ಅಪಾಯಕಾರಿಯಾಗಿಯೂ ಗುರುತಿಸ್ಪಡುತ್ತಿದೆ, ಸೈಬರ್ ಕ್ರೈಂಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಬೇಕು. ಏಕೆಂದರೆ, ವೇಷ ಮರೆಸಿಕೊಂಡು ವಂಚಿಸುವ ಬಹುತೇಕರಿದ್ದಾರೆ. ಒಮ್ಮೆ ಯಾಮಾರಿದಾರೆ ಏನಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಕೇರಳ ಮೂಲದ ಮಹಿಳೆಯೊಬ್ಬಳು ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್ಗೆ ಕರೆಸಿಕೊಂಡು, ತನ್ನ ಮೂವರು ಫ್ರೆಂಡ್ಸ್ ಜೊತೆ ಸೇರಿ, ಯುವಕನ ಮೊಬೈಲ್ ಫೋನ್, ಹಣ ಮತ್ತು ಒಡವೆಯನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಕೊಟ್ಟಾಯಂನ ವೈಕ್ಕೊಮ್ ನಿವಾಸಿ. ಈತ ಹನಿಟ್ರ್ಯಾಪ್ನ ಸಂತ್ರಸ್ತನಾಗಿದ್ದಾನೆ. ಸಂತ್ರಸ್ತ ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.