Breaking News

ಜೀವಂತ ನಾಗರಹಾವಿಗೆ ಹಾಲೆರೆದು ನಾಗರಪಂಚಮಿ ಆಚರಣೆ

Spread the love

ಹಾವೇರಿ: ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ಜೀವಂತ ನಾಗರಹಾವಿಗೆ ಹಾಲೆರೆಯುವ ಮೂಲಕ ನಾಗರಪಂಚಮಿ ಆಚರಣೆ ನಡೆಯಿತು.

ಆಡೂರು ಪಕ್ಕದ ಗ್ರಾಮದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಉರಗಪ್ರೇಮಿ ಕೃಷ್ಣರೆಡ್ಡಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಕೃಷ್ಣರೆಡ್ಡಿ ನಾಗರಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲು ಹೋದಾಗ ಆಡೂರು ಗ್ರಾಮದ ಮಹಿಳೆಯರು ನಾಗರಪಂಚಮಿ ಆಚರಿಸುತ್ತಿದ್ದರು.

ತಮ್ಮ ಮುಂದೆ ಜೀವಂತ ಹಾವು ಹಿಡಿದು ಹೋಗುತ್ತಿದ್ದ ಅವರಿಗೆ ಸ್ವಲ್ಪ ಹೊತ್ತು ಹಾವು ಬಿಡುವಂತೆ ತಿಳಿಸಿದ್ದಾರೆ. ನಾಗರಹಾವು ನೆಲದ ಮೇಲೆ ಹರಿದಾಡುತ್ತಿದ್ದಂತೆ ಮಹಿಳೆಯರು ಹಾಲು ಸುರಿದು ಜೀವಂತ ನಾಗಪ್ಪಗೆ ಪೂಜೆ ಸಲ್ಲಿಸಿದರು.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ