Breaking News

ನನ್ನ ವಿರುದ್ಧದ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾರೆ; ನವ್ಯಶ್ರೀ

Spread the love

ಬೆಳಗಾವಿ: ತಮ್ಮ ವಿರುದ್ಧದ ಬ್ಲಾಕ್ ಮೇಲ್ ಹಾಗೂ ವಂಚನೆ ಪ್ರಕರಣದ ಬಗ್ಗೆ ಹೊಸ ಬಾಂಬ್ ಸಿಡಿಸಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಇದರ ಹಿಂದೆ ಕಾಂಗ್ರೆಸ್ ಮಹಾನಾಯಕರೊಬ್ಬರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನವ್ಯಶ್ರೀ, ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬೆಂಬಿಸಲಾಯ್ತು.

ಆ ಸಂದರ್ಭದಲ್ಲಿ ನಾನು ವಿದೇಶದಲ್ಲಿದ್ದೆ. ವಾಪಸ್ ಭಾರತಕ್ಕೆ ಬಂದಾಗ ಈ ಬಗ್ಗೆ ಗೊತ್ತಾಯಿತು. ಪರಿಶೀಲನೆ ನಡೆಸಿ ದೂರು ಕೊಡಬೇಕು ಎನ್ನುವಷ್ಟರಲ್ಲಿ ರಾಜಕುಮಾರ ಟಾಕಳೆ ರಾತ್ರೋರಾತ್ರಿ ಬೆಳಗಾವಿ ಎಪಿಎಂಸಿ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ ಎಂದರು.

ರಾಜಕುಮಾರ್ ಟಾಕಳೆ ಹಾಗೂ ನಾನು 2020 ಮೇ ತಿಂಗಳಲ್ಲಿ ಬೆಂಗಳೂರಿನ ಕುಮಾರ ಕೃಪಾ ಪ್ರವಾಸಿ ಮಂದಿರದ ಹಿಂದಿರುವ ಗಣೇಶ ದೇವಸ್ಥಾನದಲ್ಲಿ ವಿವಾಹವಾಗಿದ್ದೆವೆ. ರಾಜಕುಮಾರ್ ಟಾಕಳೆ ನನ್ನ ಗಂಡ. ಆತನಿಂದ ನನಗೆ ಅನ್ಯಾಯವಾಗಿದೆ. ಈ ಹಿಂದೆ ನಾನು ಎರಡು‌ ಬಾರಿ ಬೆಳಗಾವಿ ‌ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಮೊದಲ ಪತ್ನಿ ಇದ್ದರೂ ರಾಜಕುಮಾರ್ ಟಾಕಳೆ ನನ್ನನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದ. ಅಶ್ಲೀಲ ವಿಡಿಯೋ ಚಿತ್ರಿಕರಣ ಮಾಡಿ ವೆಬ್ ಸೈಟ್ ಗೆ ಮಾರಾಟ ಮಾಡಿದ್ದಾನೆ. ಸಾರ್ವಜನಿಕ ಜೀವನದಲ್ಲಿ ನನ್ನ ಮಾನ ತಗೆದಿದ್ದಾನೆ. ಆತನ ವಿರುದ್ಧ ಈಗಾಗಲೇ ನಾನು ದೂರು ದಾಖಲಿಸಿದ್ದೇನೆ. ಕಮಿಷ್ನರ್ ಭೇಟಿಯಾಗಿ ನನಗೆ ನ್ಯಾಯ ಒದಗಿಸುವಂತೆ ಕೇಳಿದ್ದೇನೆ ಎಂದು ಹೇಳಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ರಾಷ್ಟ್ರೀಯ ನಾಯಕರ ಜತೆ ಇರುವ ಫೋಟೋ ಇಟ್ಟುಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ರಾಜಕುಮಾರ್ ಟಾಕಳೆ ಹಾಗೂ ನನ್ನ ನಡುವಿನ ಕಿತ್ತಾಟದ ಹಿಂದೆ ಕಾಂಗ್ರೆಸ್ ನ ಮಹಾನಾಯಕರೊಬ್ಬರಿದ್ದಾರೆ. ಅವರು ಟಾಕಳೆಯನ್ನು ದಾಳವನ್ನಾಗಿ ಮಾಡಿಕೊಂಡು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಇದೆಲ್ಲದರ ಹಿಂದೆ ಇರುವವರು ಚೆನ್ನಪಟ್ಟಣದ ಕಾಂಗ್ರೆಸ್ ಮಹಾನಾಯಕ. ಅವರು ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯೂ ಆಗಿದ್ದಾರೆ. ಅವರ ಜತೆ ಪತ್ರಿಕಾ ಸಂಪಾದಕರೊಬ್ಬರಿದ್ದಾರೆ. ಅವರ ಹೆಸರನ್ನು ನಾನು ಹೇಳಲ್ಲ. ತನಿಖೆ ಬಳಿಕ ಎಲ್ಲರ ಮುಖವಾಡ ಕಳಚಲಿದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ