Breaking News

ಕಾಲಕ್ಕೆ ತಕ್ಕಂತೆ ಆರೋಪ ಮಾಡ್ತಾರೆ ಹೆಚ್.​ಡಿ.ಕೆ; ಜಗದೀಶ್ ಶೆಟ್ಟರ್

Spread the love

ಯಾದಗಿರಿ: ಕಾಲಕ್ಕೆ ತಕ್ಕಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪ ಮಾಡ್ತಿದ್ದು, ಇದಕ್ಕೆ ಅರ್ಥವಿಲ್ಲ. ಅವರ ಸರ್ಕಾರ ಡ್ರಗ್ಸ್​ ಮಾಫಿಯಾದಿಂದ ಉರುಳಿದೆ ಎಂದು ಅಂದೇ ಹೇಳಬೇಕಿತ್ತಲ್ಲ, ಇವಾಗ ನೆನಪಾಯ್ತಾ ಅವ್ರಿಗೆ ಎಂದು ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.

ಜಿಲ್ಲೆಯ ಕಡೆಚುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಬಣ ಮತ್ತು ಕಾಂಗ್ರೆಸ್​ನ ಕೆಲ ಗುಂಪುಗಳು ತಂತ್ರಗಾರಿಕೆ ಮಾಡುವ ಮೂಲಕ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ಮಾಡಿದ್ದರು ಎಂದು ಕುಮಾರಸ್ವಾಮಿ ಆರೋಪಿ

ಈಗ ಡ್ರಗ್ಸ್​ ಮಾಫಿಯಾದ ಹಣದಿಂದ ತನ್ನ ಸರ್ಕಾರ ಉರುಳಿದೆ ಎಂದು ಆಪಾದನೆ ಮಾಡ್ತಿದ್ದಾರೆ. ಮುಂದೆ ಮತ್ತೊಂದಕ್ಕೆ, ಹೀಗೆ ಕಾಲಕ್ಕೆ ತಕ್ಕಂತೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಈ ಹಿಂದೆ ಹೆಚ್​ಡಿಕೆ ಮುಖ್ಯಮಂತ್ರಿ ಆಗಿದ್ದಾಗ ಇಂಟಲಿಜೆನ್ಸಿಯಿಂದ ಮಾಹಿತಿ ಗೊತ್ತಿರಬೇಕಿತ್ತಲ್ಲ, ಆವಾಗ ಡ್ರಗ್ಸ್​ ಮಾಫಿಯಾ ಇರಲಿಲ್ಲವಾ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.

ಯಾವುದೇ ಮುಲಾಜಿಲ್ಲದೆ ನಮ್ಮ ಸರ್ಕಾರ ಹಾಗೂ ಗೃಹ ಇಲಾಖೆ ಡ್ರಗ್ಸ್​ ಮಾಫಿಯಾ ಹತ್ತಿಕ್ಕುವ ಪ್ರಯತ್ನ ಮಾಡುತ್ತೆ. ಇದರಲ್ಲಿ ದೊಡ್ಡವರಿರಲಿ, ಸಣ್ಣವರಿರಲಿ ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಸಿದ್ದರು. ಈಗ ಡ್ರಗ್ಸ್​​ ಮಾಫಿಯಾದಿಂದ ತಮ್ಮ ಸರ್ಕಾರ ಬಿತ್ತು ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

 


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ