Breaking News

ತುಮಕೂರಿನ ಲಾಡ್ಜ್​ನಲ್ಲಿ ಹೆಂಡ್ತಿ ಕಾಲನ್ನೇ ಕತ್ತರಿಸಿದ ಗಂಡ! ಬಳಿಕ ನಡೆಯಿತು ಮತ್ತೊಂದು ನಾಟಕ

Spread the love

ತುಮಕೂರು: ಇಲ್ಲೊಬ್ಬ ಲಾಡ್ಜ್​ನಲ್ಲಿ ತನ್ನ ಪತ್ನಿಯ ಕಾಲನ್ನೇ ಕತ್ತರಿಸಿದ್ದಾನೆ. ಬಳಿಕ ಲಾಡ್ಜ್​ ಮಾಲೀಕರ ಬಳಿ ಬಂದು ‘ಹೆಂಡತಿಯ ಕಾಲು ಕತ್ತರಿಸಿದ್ದೇನೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು. ನಾಲ್ವರು ಹುಡುಗರನ್ನು ಕಳುಹಿಸಿ’ ಎಂದಿದ್ದಾನೆ.

ಅಷ್ಟೇ ಅಲ್ಲ, ತನ್ನ ಹೊಟ್ಟೆಗೆ ತಾನೇ ಚಾಕುವಿನಿಂದ ಇರಿದುಕೊಂಡಿದ್ದಾನೆ…

ಇಂತಹ ಅಮಾನುಷ ಘಟನೆ ತುಮಕೂರಿನ ಅಶೋಕ ಲಾಡ್ಜ್ ಆಯಂಡ್ ಹೋಟೆಲ್​ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಗಂಡನಿಂದ ಹಲ್ಲೆಗೆ ಒಳಗಾದಾಕೆ ಹೆಸರು ಅನಿತಾ. ಈಕೆಯ ಗಂಡ ಬಾಬು ಆರೋಪಿ. ನಾಲ್ಕು ವರ್ಷದ ಹಿಂದೆ ಮಧುಗಿರಿ ಮೂಲದ ಅನಿತಾಳನ್ನು ಗದಗ ಮೂಲದ ಬಾಬು ಮದುವೆ ಆಗಿದ್ದ. ಇಂದು(ಬುಧವಾರ) ಬೆಳಗ್ಗೆ 6 ಗಂಟೆಗೆ ಅಶೋಕ್​ ಲಾಡ್ಜ್​ಗೆ ಬಂದ ದಂಪತಿ ರೂಂ ಪಡೆದಿದ್ದರು.

ಕೊಲೆ ಮಾಡುವ ಉದ್ದೇಶದಿಂದಲೇ ಲಾಡ್ಜ್​ಗೆ ಹೆಂಡತಿಯನ್ನು ಕರೆದುಕೊಂಡು ಬಂದಿದ್ದ ಬಾಬು, ಬ್ಯಾಗ್​ನಲ್ಲಿ ಮಚ್ಚನ್ನೂ ತಂದಿದ್ದ. ಈ ಬಗ್ಗೆ ಅರಿವಿರದ ಪತ್ನಿ ಖುಷಿಯಿಂದಲೇ ಬಂದಿದ್ದಳು. ಕೆಲವೇ ಕ್ಷಣದಲ್ಲಿ ಮಚ್ಚಿನಿಂದ ಪತ್ನಿಯ ಕಾಲನ್ನು ಕತ್ತರಿ, ಬಳಿಕ ತನ್ನ ಹೊಟ್ಟೆಗೆ ಚಾಕು ಚುಚ್ಚಿಕೊಂಡಿದ್ದಾನೆ. ಈ ಘಟನೆ ಸಂಬಂಧ ಕೂಡಲೇಹೋಟೆಲ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ತದಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆರೋಪಿ ಬಾಬುನನ್ನು ಬಂಧಿಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಕಾಲನ್ನು ಕತ್ತರಿಸಿದ್ದರ ಉದ್ದೇಶ? ಯಾವ ಕಾರಣಕ್ಕೆ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ