Breaking News

ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಎಸಿಬಿ ಬಲೆಗೆ

Spread the love

ಹಾವೇರಿ : ಅತಿವೃಷ್ಠಿಯಿಂದ ಬಿದ್ದ ಮನೆಗೆ ಬಿಲ್ ಮಂಜೂರು ಮಾಡಿಕೊಡಲು 80 ಸಾವಿರ ರೂ., ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾನಗಲ್ಲ ತಾಲೂಕಿನ ಸಮ್ಮಸಗಿ ಗ್ರಾ.ಪಂ ಪಿಡಿಒ ಹಾಗೂ ಮಧ್ಯವರ್ತಿಯನ್ನು ಎಸಿಬಿ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿರುವ ಘಟನೆ ನಡೆದಿದೆ.

 

ಸಮ್ಮಸಗಿ ಗ್ರಾ.ಪಂ ಪಿಡಿಒ ಕೃಷ್ಣಪ್ಪ ಆಲದಕಟ್ಟಿ, ಏಜೆಂಟ್ ಕುಬೇರಪ್ಪ ಗಾಡಿಹುಚ್ಚನವರ ಎಂಬುವರು 20 ಸಾವಿರ ರೂ., ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾನಗಲ್ಲ ತಾಲೂಕಿನ ಶೃಂಗೇರಿ ಗ್ರಾಮದ ಪರಸಪ್ಪ ಫಕ್ಕೀರಪ್ಪ ಗೊರನವರ ಎಂಬುವರ ಮನೆ ಅತಿವೃಷ್ಠಿಯಿಂದಾಗಿ ಬಿದ್ದಿತ್ತು. ಅದರ ಬಿಲ್ ಮಂಜೂರಾತಿಗೆ ಪಿಡಿಒ ಏಜೆಂಟರ ಮೂಲಕ 80 ಸಾವಿರ ರೂ., ಬೇಡಿಕೆ ಇಟ್ಟಿದ್ದಾರೆ.

ಮೊದಲ ಕಂತಿನಲ್ಲಿ 30 ಸಾವಿರ ರೂ., ಲಂಚ ಸ್ವೀಕರಿಸಿದ್ದಾರೆ. ಈಗ ಉಳಿದ ಹಣಕ್ಕೆ ಬೇಡಿಕೆ ಇಟ್ಟಾಗ ರೋಸಿ ಹೋಗಿರುವ ಫಲಾನುಭವಿ ಪರಸಪ್ಪ ಎಸಿಬಿಗೆ ದೂರು ದಾಖಲಿಸಿದ್ದಾರೆ. ಈಗ ಮತ್ತೆ 20ಸಾವಿರ ರೂ., ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ