Breaking News

ಕೊರೊನಾ 3ನೇ ಅಲೆ ತಡೆಯಲು ಸಾಧ್ಯವಿಲ್ಲ: ಆರೋಗ್ಯ ಸಚಿವ ಕೆ.ಸುಧಾಕರ್

Spread the love

ಕೊರೊನಾ ಮೂರನೇ ಅಲೆ ಬಂದಿದ್ದು, ಇದನ್ನು ತಡೆಯಲು ಸಾಧ್ಯವಿಲ್ಲ. ಅಲೆಯ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 3ನೇ ಅಲೆ ಒಮ್ಮೆಲೆ ತಡೆಯಲು ಸಾಧ್ಯವಿಲ್ಲ.

ದಿನೇದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಒಮ್ಮೆಲೆ ತಡೆಯಲು ಆಗುವುದಿಲ್ಲ ಎಂದರು.

ಒಂದು ದೇಶ, ಒಂದು ರಾಜ್ಯದಲ್ಲಿ ಲಸಿಕೆ ಪಡೆದರೆ ಕೊರೊನಾ ತಡೆಯಲು ಸಾಧ್ಯವಿಲ್ಲ. ವಿಶ್ವದ ಎಲ್ಲರೂ ಲಸಿಕೆ ಪಡೆದಾಗ ಮಾತ್ರ ತಡೆಯಲು ಸಾಧ್ಯ. ಎರಡೂ ಡೋಜ್ ಲಸಿಕೆ ಪಡೆದಿದ್ದರೆ ಅದರ ಪ್ರಭಾವ ಕಡಿಮೆ ಇರುತ್ತದೆ. ಲಸಿಕೆ ಪಡೆಯದಿದ್ದರೆ ತುಂಬಾ ಕಷ್ಟ. ಜೀವಕ್ಕೆ ಹಾನಿ ಆಗಬಹುದು ಎಂದು ಅವರು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ