Breaking News

ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಮಾಫಿ ಸಾಕ್ಷಿ ಪ್ರದೋಷ್‌ಗೆ ಹೈಕೋರ್ಟ್ ಅನುಮತಿ

Spread the love

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್‌ಗೆ ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಹೈಕೋರ್ಟ್ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿದ್ದು, ಇಪ್ಪತ್ತು ದಿನಗಳ ಕಾಲ ಪ್ರದೋಷ್ ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕೊಡುವಂತೆ ಕೋರಿದ್ದರು. ಇದಕ್ಕೆ ದರ್ಶನ್  ಪರ ವಕೀಲರು, ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅವಕಾಶ ನೀಡದಂತೆ ಮನವಿ ಮಾಡಿದ್ದರು. ಇಂದು ಎರಡು ಕಡೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ನ.7 ರಿಂದ ನ.12 ರವರೆಗೆ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ.

ಪ್ರತಿದಿನ ಬೆಳಗ್ಗೆ 8 ಗಂಟೆಗೆ ಜೈಲಿನಿಂದ ಕರೆತಂದು ಸಂಜೆ 6 ಗಂಟೆಗೆ ಜೈಲಿಗೆ ಕರೆದೊಯ್ಯಬೇಕು. ಜೈಲಿನಿಂದ ಕರೆತರುವಾಗ ನಗರ ಸಶಸ್ತ್ರ ರಿಸರ್ವ್ ಪೊಲೀಸ್ ಬೆಂಗಾವಲು ನೀಡಬೇಕು. ಪಿತೃಕಾರ್ಯಕ್ಕೆ ಬರುವ ವ್ಯಕ್ತಿಗಳ ಹೆಸರು, ಪಿತೃಕಾರ್ಯಕ್ಕೆ ಬರುವ ಪುರೋಹಿತರ ಹೆಸರನ್ನೂ ನೀಡಬೇಕು. ಕೇಸ್‌ಗೆ ಸಂಬಂಧಿಸಿದವರ ಭೇಟಿ, ಸಂಪರ್ಕಕ್ಕೆ ಅವಕಾಶ ನೀಡಬಾರದು ಅಂತಾ ಆದೇಶದಲ್ಲಿ ಉಲ್ಲೇಖ ‌ಮಾಡಿ ಅನುಮತಿ ನೀಡಲಾಗಿದೆ.


Spread the love

About Laxminews 24x7

Check Also

ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಬೆದರಿಕೆ – ಬೆಂಗಳೂರಿನ ಟೆಕ್ಕಿ ಬಂಧನ

Spread the loveಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್  ಹೆಸರಿನಲ್ಲಿ‌ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬೆಂಗಳೂರಿನ ಟೆಕ್ಕಿಯೊಬ್ಬನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ