Breaking News

ಸುರಕ್ಷತೆ ವಹಿಸದೆ ಅಧಿಕಾರಿಗಳ ನಿರ್ಲಕ್ಷ್ಯ: ಬರಿಗೈನಿಂದಲೇ ಚರಂಡಿ ಸ್ವಚ್ಛಗೊಳಿಸಿದ ಪೌರ ಕಾರ್ಮಿಕರು

Spread the love

ಮಂಡ್ಯ: ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ಕೂ ಮುನ್ನ ಸುರಕ್ಷತೆ ವಹಿಸದೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿರುವ ಘಟನೆ ವರದಿಯಾಗಿದೆ. ಬರಿಗೈನಿಂದಲೇ ಪೌರ ಕಾರ್ಮಿಕರು ಚರಂಡಿ ಸ್ವಚ್ಛಗೊಳಿಸಿರುವ ಅಮಾನವೀಯ ದೃಶ್ಯ ಕಂಡುಬಂದಿದೆ.

ಮೊನ್ನೆ ನಡೆದ ಪೌರ ಕಾರ್ಮಿಕರ ದಿನಾಚರಣೆ ದಿನವೇ ಕಾರ್ಮಿಕರಿಗೆ ಅಗೌರವ ಸೂಚಿಸಿಲಾಗಿದೆ. ಗ್ಲೌಸ್, ಗಮ್ ಬೂಟ್ ಇಲ್ಲದೇ ಪೌರ ಕಾರ್ಮಿಕರು ಚರಂಡಿ ಸ್ವಚ್ಛ ಮಾಡಿದ್ದಾರೆ. ಪಿಡಿಓ ಅಧಿಕಾರಿ ಗ್ಲೌಸ್, ಬೂಟ್ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಸುರಕ್ಷತಾ ಕ್ರಮವಹಿಸಿ ಕಾರ್ಮಿಕರು ಕೆಲಸ ಮಾಡಬೇಕಂಬ ನಿಯಮವಿದ್ದರೂ ನಿರ್ಲಕ್ಷ್ಯ ತೋರಿದ ಬೇಲೂರು ಪಂಚಾಯತಿ ಪಿಡಿಓ ಸುರೇಶ್ ಅಮಾನವೀಯ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಬೇಜವಾಬ್ದಾರಿ ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹತ್ತಾರು ಮಂದಿ ಪೌರ ಕಾರ್ಮಿಕರು ಪೌರ ಕಾರ್ಮಿಕರ ದಿನಾಚರಣೆ ದಿನವೇ ಬೇಲೂರು ಗ್ರಾಮದಲ್ಲಿ ಬರಿಗೈಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ