Breaking News

ಎಣ್ಣೆ ಮತ್ತಲ್ಲಿ ಅಡ್ಡಾದಿಡ್ಡಿ ಚಾಲನೆ; ಲಾರಿ ಡ್ರೈವರ್​​ನ ತಡೆದು ನಿಲ್ಲಿಸಿದ್ದೇ ದೊಡ್ಡ ಚಾಲೆಂಜ್

Spread the love

ಉಡುಪಿ: ಕುಡಿದ ಮತ್ತಲ್ಲಿ ಚಾಲಕನೋರ್ವ ಬೃಹತ್​ ಕಂಟೈನರ್​ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಆತಂಕ ಉಂಟು ಮಾಡಿದ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದಿದೆ.

 

 

ಏಣ್ಣೆ ಏಟಲ್ಲಿ ಗಾಡಿ ಹತ್ತಿದ ಚಾಲಕ ಯದ್ವಾತದ್ವ ಗಾಡಿ ಚಲಾಯಸಿದ್ದಾನೆ. ಅಷ್ಟೇ ಅಲ್ಲದೆ ಹೆದ್ದಾರಿಯಲ್ಲಿ ವೇಗ ತಡೆಗಾಗಿ ಅಳವಡಿಸಿದ ಬ್ಯಾರಿಕೇಡ್ ಎಳೆದೊಯ್ದ ಬಹು ದೂರ ಸಾಗಿದ್ದಾನೆ. ವಾಹನವನ್ನು ತಡೆಯಲು ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಹರಸಾಹಸ ಪಟ್ಟಿದ್ದು, ಕೊನೆಗೆ ಹೆಮ್ಮಾಡಿ ಬಳಿ ಕಂಟೈನರ್ ಗಾಜಿಗೆ ಕಲ್ಲೆಸೆದು ನಿಲ್ಲಿಸಿದ್ದಾರೆ.

 

ಮಧ್ಯದ ನಶೆಯಲ್ಲಿ ತೇಲಾಡುತ್ತಿದ್ದ ಚಾಲಕನನ್ನು ಕೆಳಗಿಳಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ಛತ್ತಿಸಗಢ್ ನೋಂದಣಿಯ ಕೊಂಟೈನರ್​ ಇದಾಗಿದ್ದು ಹುಲ್ಲು ಸಾಗಿಸುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ