Breaking News

ರೈತರ ತಲೆ ಒಡೆಯಿರಿ ಎಂದ ಅಧಿಕಾರಿ ವರ್ಗಾವಣೆ

Spread the love

ಪ್ರತಿಭಟನಾನಿರತ ರೈತರ ಮೇಲೆ ದಾಳಿ ಮಾಡಲು ಆದೇಶಿಸುತ್ತಾ ಕ್ಯಾಮೆರಾದಲ್ಲಿ ಸಿಕ್ಕಿಹಾಕಿಕೊಂಡ ಹರಿಯಾಣಾ ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ.

‘ರೈತರ ತಲೆಗಳನ್ನು ಒಡೆಯಿರಿ’ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶ ಕೊಟ್ಟ ಕರ್ನಲ್ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ ಆಯುಶ್ ಸಿನ್ಹಾರನ್ನು ಹರಿಯಾಣಾ ಸರ್ಕಾರದ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

“ಅದೇನೇ ಆಗಲಿ, ಯಾರೊಬ್ಬರೂ ಈ ಬ್ಯಾರಿಕೇಡ್‌ಗಳನ್ನು ದಾಟಕೂಡದು. ಸ್ಪಷ್ಟವಾಗಿ ಹೇಳುತ್ತೇನೆ, ಈ ಗೆರೆ ದಾಟಲು ನೋಡುವ ಮಂದಿಯ ತಲೆಗಳನ್ನು ಒಡೆಯಿರಿ. ನಾನು ಕರ್ತವ್ಯದಲ್ಲಿರುವ ಮ್ಯಾಜಿಸ್ಟ್ರೇಟ್, ಹಾಗೂ ನಾನು ನಿಮಗೆ ಈ ಸೂಚನೆಗಳನ್ನು ಲಿಖಿತವಾಗಿ ಕೊಡುತ್ತಿದ್ದೇನೆ. ನಿಮ್ಮ ಲಾಠಿಗಳಲ್ಲಿ ಅವರ ಮೇಲೆ ದಾಳಿ ಮಾಡಿ.. ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ. ಕಳೆದ ಎರಡು ದಿನಗಳಿಂದ ನಾವು ನಿದ್ರೆ ಮಾಡಿಲ್ಲ. ಆದರೆ ನೀವಿಲ್ಲಿಗೆ ಸ್ವಲ್ಪ ನಿದ್ರೆ ಮಾಡಿದ ಬಳಿಕ ಬಂದಿದ್ದೀರಿ. ಬೇಲಿ ದಾಟಿ ಯಾರೂ ಸಹ ನನ್ನನ್ನು ಭೇಟಿ ಮಾಡಕೂಡದು,” ಎಂದು ಸಿನ್ಹಾ ತಿಳಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಅಧಿಕಾರಿಯ ಪದಬಳಕೆ ತಪ್ಪು ಎಂದು ಒಪ್ಪಿಕೊಂಡ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್‌, “ಅವರು ಪ್ರತಿಭಟನೆ ಮಾಡಬೇಕೆಂದಿದ್ದರೆ, ಶಾಂತಿಯುತವಾಗಿ ಮಾಡಬೇಕಿತ್ತು. ಹೆದ್ದಾರಿಗಳನ್ನು ಬಂದ್ ಮಾಡಿ ಪೊಲೀಸರ ಮೇಲೆ ಕಲ್ಲು ತೂರಿದರೆ, ಪೊಲೀಸರು ಕಾನೂನು ಪಾಲನೆ ಮಾಡಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಘಟನೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದಿದ್ದಾರೆ.

ಮುಂಬರುವ ಪಾಲಿಕೆ ಚುನಾವಣೆಗಳ ಕುರಿತು ಮನೋಹರ್‌ಲಾಲ್‌ ಸರ್ಕಾರದ ಸಭೆಯೊಂದನ್ನು ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ನಾಂದಿಯಾಗಿ

 

 


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ