Breaking News

ಹುಬ್ಬಳ್ಳಿ ಪಾಲಿಕೆ ಚುನಾವಣಾ ಪ್ರಚಾರದ ವೇಳೆ‌ ಸಚಿವ ಶ್ರೀರಾಮುಲುರವರಿಂದ ಕರೋನಾ ನಿಯಮ ಉಲ್ಲಂಘನೆ

Spread the love

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಪಾಲಿಕೆ ಚುನಾವಣಾ ಪ್ರಚಾರ ರಂಗೇರಿದೆ. ರಾಜಕಾರಣಿಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.ಆಡಳಿತ ಪಕ್ಷದ ಸಚಿವ ಶ್ರೀರಾಮುಲು ತಮ್ಮ ಚುನಾವಣಾ ಪ್ರಚಾರದ ವೇಳೆ ಕರೋನ ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಹುಬ್ಬಳ್ಳಿಯಲ್ಲಿ ನಡೆದ ಪಾಲಿಕೆ ಚುನಾವಣಾ ಪ್ರಚಾರದ ವೇಳೆ ತಮ್ಮ ಅಭ್ಯರ್ಥಿಯ ಪರ ಬೃಹತ್ ಪ್ರಚಾರದ ಸಭೆ ವೇಳೆ ಕಿಕ್ಕಿರಿದು ಜನ ಸೇರಿದ್ದರು.

ಕಾರ್ಯಕರ್ತರು ನಿಯಮ ಉಲ್ಲಂಘನೆ ಮಾಡಿ ಶ್ರೀರಾಮುಲುಗೆ ಬೃಹತ್ ಹೂವಿನ ಹಾರ ಹಾಕಿದ್ದಾರೆ.ನಿಯಮಗಳು ಕೇವಲ ಸಾಮಾನ್ಯ ಜನರಿಗಷ್ಟೇನಾ ? ರಾಜಕಾರಣಿಗಳಿಂದ ಕೊರೊನಾ ಹರಡುವುದಿಲ್ಲವಾ ? ಎಂಬ ಪ್ರಶ್ನೆ ಉದ್ಭವವಾಗಿದೆ. ಒಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಸಭೆ ನಡೆಸುತ್ತಾರೆ.ಇನ್ನೊಂದೆಡೆ ಬಿಜೆಪಿ ಸಚಿವರು ಕೊರೊನಾ ನಿಯಮ ಉಲ್ಲಂಘನೆ ಮಾಡ್ತಾರೆ. ಒಟ್ಟಿನಲ್ಲಿ ರಾಜಕಾರಣಿಗಳು ಏನೇ ಮಾಡಿದರೂ ಅವರ ವಿರುದ್ಧ ಯಾಕೆ ಕ್ರಮವಿಲ್ಲ ಎಂಬುದು ಸಾಮಾನ್ಯ ನಾಗರಿಕರ ಪ್ರಶ್ನೆ !


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ