Breaking News
Home / ರಾಜಕೀಯ / ಶೀಘ್ರವೇ ಈ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆಯಪ್ ಗಳ ಕಾರ್ಯ ಸ್ಥಗಿತ

ಶೀಘ್ರವೇ ಈ ಸ್ಮಾರ್ಟ್ ಫೋನ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆಯಪ್ ಗಳ ಕಾರ್ಯ ಸ್ಥಗಿತ

Spread the love

ನವದೆಹಲಿ : ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗೂಗಲ್ ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದ್ದು, ಶೀಘ್ರವೇ ಸ್ಮಾರ್ಟ್ ಫೋನ್ 2.3.7 ಮತ್ತು ಕಡಿಮೆ ವರ್ಷನ್ ಆಯಂಡ್ರಾಯ್ಡ್ ಮೊಬೈಲ್ ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆಯಪ್ ಗಳ ಕಾರ್ಯ ಸ್ಥಗಿತವಾಗಲಿದೆ.

 

ಸೆಪ್ಟೆಂಬರ್​ 27ರ ಆರಂಭದಿಂದ ಆಯಂಡ್ರಾಯ್ಡ್​ 2.3.7 ಮತ್ತು ಅದಕ್ಕಿಂತ ಕಡಿಮೆ ವರ್ಸನ್​ ಸ್ಮಾರ್ಟ್​ ಫೋನ್​ಗಳಲ್ಲಿ ಯಾವುದೇ ಗೂಗಲ್​ ಆಯಪ್ಸ್​ ಗಳು ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದ್ದು, ಸೆಪ್ಟೆಂಬರ್ ನಂತರವೂ ಗೂಗಗಲ್ ಆಯಪ್ ಗಳನ್ನು ಬಳಸುವುದಾದರೆ ಕನಿಷ್ಟ ಪಕ್ಷ ಅಂಡ್ರಾಯ್ಡ್ 3.0 ಹನಿಕೂಂಬ್ ವರ್ಷನ್ ಗೆ ಅಪ್ ಡೇಟ್ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಇಮೇಲ್ ಸೂಚನೆ ನೀಡಿದೆ.

 

ಸ್ಮಾರ್ಟ್ ಫೋನ್ 2.3.7 ಮತ್ತು ಕಡಿಮೆ ವರ್ಷನ್ ಆಯಂಡ್ರಾಯ್ಡ್ ಮೊಬೈಲ್ ಹೊಂದಿರುವ ಬಳಕೆದಾರರು ಸೆಪ್ಟೆಂಬರ್ ನಂತರ ಯಾವುದೇ ಗೂಗಲ್ ಆಯಪ್ಸ್ ಗೆ ಲಾಗಿನ್ ಆಗಲು ಪ್ರಯತ್ನಿಸಿದರೆ ಯೂಸರ್ ನೇಮ್ ಅಥವಾ ಪಾಸವರ್ಡ್ ಎರರ್ ಎಂಬ ಸಂದೇಶ ಬರಲಿದೆ. ಹೀಗಾಗಿ ಬಳಕೆದಾರರು ತಮ್ಮ ಸಾಫ್ಟ್ ವೇರ್ ಅಪ್ ಡೇಟ್ ಮಾಡಲು ಅಥವಾ ಫೋನ್ ಬದಲಾಯಿಸಲು ಸೂಚನೆ ನೀಡಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ