Breaking News

ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಉಂಗುರ ಹಾಗೂ ಪರ್ಸ್ ಸಿಕ್ಕಿದೆ

Spread the love

ಕುಮಟಾ: ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಉಂಗುರ ಹಾಗೂ ಹಣವಿರುವ ಪರ್ಸ್ ಒಂದು ಸಾರಿಗೆ ಸಂಸ್ಥೆಯ ನಿರ್ವಾಹಕರಿಗೆ ಸಿಕ್ಕಿದ್ದು, ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿ ಪಡೆದುಕೊಳ್ಳುವಂತೆ ಕುಮಟಾ ಘಟಕದ ಸಂಚಾರ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದಿನಾಂಕ 01/03/2026 ರಂದು ಮಧ್ಯಾಹ್ನ 14.00 ಗಂಟೆಗೆ ಕುಮಟಾ ಬಸ್ ನಿಲ್ದಾಣದಿಂದ ಕಡ್ನೀರು ಮಾರ್ಗವಾಗಿ ಹೊನ್ನಾವರಕ್ಕೆ ಹೋಗುವ ಬಸ್ಸಿನಲ್ಲಿ (ವಾಹನ ಸಂಖ್ಯೆ: KA 31 F 1292) ಈ ಘಟನೆ ನಡೆದಿದೆ. ಬಸ್ಸು ಹೊದಕೆ ಶಿರೂರು ಬಳಿ ತಲುಪಿದಾಗ ನಿರ್ವಾಹಕರಾದ ಶ್ರೀ ಕರಿಯಪ್ಪ ಚಲವಾದಿ ಅವರಿಗೆ ಬಸ್ಸಿನಲ್ಲಿ ಒಂದು ಚಿಕ್ಕ ಪರ್ಸ್ ಸಿಕ್ಕಿದೆ. ಅದರಲ್ಲಿ ರೂ. 990/- ನಗದು ಹಾಗೂ 1.4 ಗ್ರಾಂ ತೂಕದ ಚಿನ್ನದ ಉಂಗುರ ಇರುವುದು ಕಂಡುಬಂದಿದೆ. ನಿರ್ವಾಹಕರು ಆ ಪರ್ಸ್ ಅನ್ನು ಕುಮಟಾ ಘಟಕದ ಸಂಚಾರ ಶಾಖೆಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

ಈ ಮೇಲ್ಕಂಡ ವಸ್ತುಗಳನ್ನು ಕಳೆದುಕೊಂಡ ವಾರಸುದಾರರು ಕುಮಟಾ ಡಿಪೋದ ಸಂಚಾರ ಶಾಖೆಗೆ ಖುದ್ದಾಗಿ ಭೇಟಿ ನೀಡಿ ಮರಳಿ ಪಡೆದುಕೊಳ್ಳಬಹುದು. ವಸ್ತುಗಳನ್ನು ಪಡೆದುಕೊಳ್ಳಲು ಕಳೆದುಹೋಗಿರುವ ಪರ್ಸ್ ಮತ್ತು ಚಿನ್ನದ ಉಂಗುರದ ನಿಖರವಾದ ಗುರುತು ನೀಡಬೇಕು. ಜೊತೆಗೆ ತಮ್ಮ ವಿಳಾಸವನ್ನು ದೃಢೀಕರಿಸುವ ಸೂಕ್ತ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ 9449126627 ಅಥವಾ 9481053766 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ