Breaking News

ವೈದ್ಯನ ಕೊ. .ಲೆ ಪ್ರಕರಣ – 24 ಗಂಟೆಯೊಳಗೆ ಆರೋಪಿಯ ಬಂಧನ 15 ಲಕ್ಷದ ಚಿನ್ನಾಭರಣ ಹಾಗೂ 50,000 ರೂ ನಗದು ವಶ

Spread the love

ಶಿರಸಿ: ಎರಡನೇ ಮದುವೆಯಾಗಲು ಸಜ್ಜಾಗಿದ್ದ ಆಯುರ್ವೇದ ವೈದ್ಯರೊಬ್ಬರನ್ನು ಹ. .ತ್ಯೆ. ಗೈದಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃ. ತ ಡಾ. ರಮೇಶ ಫಕೀರಪ್ಪ ಕಲಕುಟಕರ ಎಂಬುವವರು ಶಿರಸಿಯ ಕೆ.ಎಚ್.ಬಿ ಕಾಲೋನಿಯಲ್ಲಿ ವಾಸವಿದ್ದು ಆಯುರ್ವೇದ ವೈದ್ಯ ವೃತ್ತಿ ನಡೆಸುತ್ತಿದ್ದರು. ಐದು ತಿಂಗಳ ಹಿಂದೆಯಷ್ಟೇ ಇವರ ಪತ್ನಿ ನಿಧನರಾಗಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ರಮೇಶ ಅವರು ಎರಡನೇ ವಿವಾಹವಾಗಲು ನಿರ್ಧರಿಸಿ, ಏಪ್ರಿಲ್ 20ರಂದು ವಿವಾಹ ನಿಶ್ಚಯ ಮಾಡಿಕೊಂಡಿದ್ದರು. ಆದರೆ, ಇದಕ್ಕೂ ಮುನ್ನವೇ ಅಂದರೆ ಏಪ್ರಿಲ್ 18ರ ರಾತ್ರಿ ಮತ್ತು 19ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಡಾ. ರಮೇಶ ಅವರ ತಲೆ. ಯ ಹಿಂ. ಭಾಗಕ್ಕೆ ಮಾರ. ಕಾಸ್ತ್ರ. ದಿಂದ ಹೊ. ಡೆ. ದು ಕೊ. , .ಲೆ ಮಾಡಿ, ಮನೆಯ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದರು.

ಈ ಸಂಬಂಧ ಮೃ. ತರ ಅಣ್ಣ ಈರಪ್ಪ ಕಲಕುಟಕರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಮ್ ಎನ್ ಮತ್ತು ಎಎಸ್‌ಪಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ವಿಶ್ಲೇಷಣೆ ಮತ್ತು ಸ್ಥಳೀಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡವು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಳಲೂರು ನಿವಾಸಿ ಮಂಜುನಾಥ ಪಿ ಎಲ್ (70 ವರ್ಷ) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಪೊಲೀಸರು ಕೊ. ,/ಲೆಗೆ ಬಳಸಿದ ಮಾರ. ಕಾಸ್ತ್ರ, 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 50,000/- ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಕ್ಲಿಷ್ಟಕರ ಪ್ರಕರಣವನ್ನು ಅತ್ಯಂತ ವೇಗವಾಗಿ ಭೇದಿಸಿದ ಇನ್ಸ್‌ಪೆಕ್ಟರ್ ಶಶಿಕಾಂತ ವರ್ಮಾ, ರಮೇಶ ಹೂಗಾರ, ಪಿಎಸ್‌ಐ ಬಸವರಾಜ ಕನಶೆಟ್ಟಿ , ರಾಜಕುಮಾರ ಉಕ್ಕಲಿ ಹಾಗೂ ಸಿಬ್ಬಂದಿಗಳಾದ ಮಂಗಳಮೂರ್ತಿ ಶಿರಹಟ್ಟಿ, ರವೀಂದ್ರ ನಾಯ್ಕ, ರವಿ ಗಾಂಜೇಕರ್, ಮಂಜುನಾಥ ಕೆಂಚರೆಡ್ಡಿ ,ಪ್ರಸಾದ ಮಡಿವಾಳ, ಮಾರುತಿ ಮಳಗಿ, ಅರುಣ ಲಮಾಣಿ, ಸಂದೀಪ ನಿಂಬಾಯಿ, ರಾಕೇಶ. ದಯಾನಂದ, ಸಂತೋಷ, ಗಜಾನನ ಪೂಜಾರಿ ಮತ್ತು ಗ್ರಾಮೀಣ ಠಾಣಾ ಸಿಬ್ಬಂದಿಯವರಾದ ಮಹಾಂತೇಶ, ಅರುಣ, ಗಣಪತಿ, ವೆಂಕಟ್ರಮಣ ಮತ್ತು ಸಂಚಾರ ಠಾಣೆಯ ಪ್ರಶಾಂತ ಹಾಗೂ ಟೆಕ್ನಿಕಲ್ ಸೆಲ್ ಕಾರವಾರ ಸಿಬ್ಬಂದಿಯವರಾದ ಉದಯ ಗುನಗಾ, ಬಜನ್ ಕದಂ ಹಾಗೂ ಜೀಪ್ ಚಾಲಕರಾದ ಹನುಮಂತ ವಾಲಿಕರ್, ಪಾಂಡು ನಾಗೋಜಿ ಸೇರಿದಂತೆ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಈ ಸುದ್ದಿಯು ಪೊಲೀಸ್ ಪ್ರಕಟಣೆಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಈ ವರದಿಯು ಕೇವಲ ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ


Spread the love

About Laxminews 24x7

Check Also

ಸಿಎಂಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು, ಜನ್ರೂ ಮಾತಾಡಿಕೊಳ್ತಿದ್ದಾರೆ: ರಾಜಣ್ಣ

Spread the loveಬೆಂಗಳೂರು: ಸಿಎಂ ಇಷ್ಟೊಂದು ಅಸಹಾಯಕ ರೀತಿಯಲ್ಲಿದ್ದಾರೆ ಅಂದ್ರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದಾ ಅಂತ ಯೋಚನೆ ಮಾಡ್ತಿದ್ದೇನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ