Breaking News

ವೈದ್ಯ ರಮೇಶ ಕಲ್ಗುಟ್ಕರ ಹತ್ಯೆ ಆರೋಪಿ ಬಂಧನ: 15 ಲಕ್ಷ ರೂ ಚಿನ್ನಾಭರಣ,50,000 ರೂ ನಗದು ವಶ

Spread the love

ಶಿರಸಿ: ನಗರವನ್ನೇ ಬೆಚ್ಚಿಬೀಳಿಸಿದ್ದ,ದಿನಾಂಕ 19 ರಂದು ನಡೆದ ಆಯುರ್ವೇದ ವೈದ್ಯ ರಮೇಶ ಕಲಗುಟಕರ್ ಹತ್ಯೆ ಆರೋಪಿಯನ್ನು ಬಂಧಿಸಿ ಆತನಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಂಜುನಾಥ ಪಿ ಎಲ್ (70)ಸಾ :ಪಡುಬೈಲ್ ಮಳಲೂರು ಶಿವಮೊಗ್ಗ ಎಂಬಾತನೆ ಬಂದಿತ ಆರೋಪಿಯಾಗಿದ್ದಾನೆ.ಆರೋಪಿಯಿಂದ 50,000 ನಗದನ್ನೂ ವಶಕ್ಕೆ ಪಡೆಯಲಾಗಿದೆ. ಎಸ್ ಪಿ ದೀಪನ್,ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿಇವರುಗಳ ನೇತೃತ್ವದಲ್ಲಿ ಡಿ ವೈ ಎಸ್ ಪಿ ಶ್ರೀಮತಿ ಗೀತಾ ಪಾಟೀಲ್, ಸಿ ಪಿ ಐ ಶಶಿಕಾಂತ್ ವರ್ಮ, ಪಿ ಐ ರಮೇಶ್ ಹೂಗಾರ್ ಮಾರ್ಗದರ್ಶನದಲ್ಲಿ, ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ಬಸವರಾಜ್ ಕನಶೆಟ್ಟಿ ಹಾಗೂ ಸಿಬ್ಬಂದಿಗಳು ವೈದ್ಯನ ಕೊಲೆ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಇಲಾಖೆಯ ದಕ್ಷ, ತ್ವರಿತ ಕಾರ್ಯಾಚರಣೆ ಜನರ ಶ್ಲಾಘನೆಗೆ ಪಾತ್ರವಾಗಿದೆ.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ