Breaking News
Home / ಜಿಲ್ಲೆ / ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.

ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.

Spread the love

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.

ದರ್ಶನ್ ಅವರ ಹುಟ್ಟುಹಬ್ಬವನ್ನು ಅವರು ಅಭಿಮಾನಿಗಳು ಪ್ರತೀ ವರ್ಷ ಹಬ್ಬದಂತೆ ಆಚರಣೆ ಮಾಡುತ್ತಾರೆ. ಇಂದು ಕೂಡ ದರ್ಶನ್ ಅವರಿಗೇ ಶುಭಾಶಯ ಕೋರಲು ಅವರ ಸಾವಿರಾರು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ಈ ವೇಳೆ ದರ್ಶನ್ ಅವರಿಗೆ ಕೈ ಕುಲುಕಲು ಬಂದ ಅಭಿಮಾನಿಯನ್ನು ತಳ್ಳಿದ ಎಂಬ ಕಾರಣಕ್ಕೆ ತನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೆ ದರ್ಶನ್ ತಲೆ ಮೇಲೆ ಹೊಡೆದಿದ್ದಾರೆ.

ಹುಟ್ಟು ಹಬ್ಬದ ನಂತರ ಮಾಧ್ಯಮಗಳ ಜೊತೆ ದರ್ಶನ್ ಮಾತನಾಡುತ್ತಾ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಾವಿರಾರು ಸಂಖ್ಯೆ ಬಂದಿರೋದು ಹೇಗೆ ಅನಿಸುತ್ತಿದೆ ಎಂದು ಕೇಳಿದಾಗ, “ಅಷ್ಟೇ ಸಾರ್ ನಾನು ಜೀವನದಲ್ಲಿ ಮಾಡಿರೋದು. ಮತ್ತೇನು ಮಾಡಿಲ್ಲ” ಎಂದು ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿಯನ್ನು ಹೊಗಳಿದರು. ಇಂದು ಸಂಜೆವರೆಗೂ ಅಭಿಮಾನಿಗಳನ್ನು ಭೇಟಿ ಮಾಡೋದೊಂದೆ ಕಾರ್ಯಕ್ರಮ. ಬೇರೇನೂ ಇಲ್ಲ ಎಂದು ತಿಳಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಇದೆ. ಅಭಿಮಾನಿಗಳು ಬರ್ತಿದ್ದಾರೆ, ಬಂದಿದ್ದಾರೆ. ಮೊಲ, ಬಾತು ಕೋಳಿ ಗಿಫ್ಟ್ ತಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೇಕ್ ಇಲ್ಲ, ಎಲ್ಲಾ ನೀಟಾಗಿದೆ. ಇವರು ಕೊಡೋ ದವಸ ಧಾನ್ಯಗಳು ಸಾಕಷ್ಟು ಜನರಿಗೆ ಉಪಯೋಗ ಆಗ್ತಿದೆ. ಅಭಿಮಾನಿಗಳು ಕೊಟ್ಟ ಈ ದಾನದಿಂದ ಮನೆ ತುಂಬುತ್ತಿದೆ ಎಂದು ಅಭಿಮಾನಿಗಳು ಕೊಟ್ಟ ಉಡುಗೊರೆಗಳ ಬಗ್ಗೆ ದರ್ಶನ್ ಹೇಳಿದರು.

ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿನಯದ ರಾಬರ್ಟ್ ಚಿತ್ರದ ಟೀಸರ್ ಬಿಡಿಗಡೆಯಾಗಿದ್ದು, ಕೇವಲ 1.11 ನಿಮಿಷ ಇರುವ ಟೀಸರ್‍ನಲ್ಲಿ ದರ್ಶನ್ ಹೇಳೋದು ಒಂದೇ ಡೈಲಾಗ್. ಆದ್ರೆ ಆ ಖಡಕ್ ಡೈಲಾಗ್ ಟೀಸರ್‍ನ ಹೈಲೈಟ್. ‘ಹೌದು. ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟ್ರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ’ ಎಂದು ರಾಬರ್ಟ್‍ನನ್ನು ವರ್ಣಿಸುವ ಡೈಲಾಗ್‍ನೊಂದಿಗೆ ಟೀಸರ್ ಆರಂಭವಾಗುತ್ತೆ. ಬಳಿಕ ದರ್ಶನ್ ಬೈಕ್ ಏರಿಬಂದು, ಫೈಟ್ ಮಾಡುವ ಆ್ಯಕ್ಷನ್ ದೃಶ್ಯದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಆದರೆ ನಂತರ ಪ್ರೀತಿ ತೋರುವ ರಾಮ ತಿರುಗಿ ಬಿದ್ರೆ ರಾವಣ ಆಗ್ತಾನೆ ಎನ್ನೊಂದನ್ನ ಕೂಡ ಟೀಸರ್‍ನಲ್ಲಿ ತಿಳಿಸಲಾಗಿದೆ. ಅದರಲ್ಲೂ ನಾನು ಲಂಕೇಶ್ವರ ದಶಕಂಠ ರಾವಣ ಎಂದು ದರ್ಶನ್ ಹೇಳುವ ಖಡಕ್ ಡೈಲಾಗ್ ಅಭಿಮಾನಿಗಳ ಮನಗೆದ್ದಿದೆ.


Spread the love

About Laxminews 24x7

Check Also

ಸಿದ್ಧಿ ಬುಡಕಟ್ಟು ಸಮುದಾಯದ ಪೌಷ್ಟಿಕಾಹಾರ ಸ್ಥಗಿತ: ಸರ್ಕಾರದ ವಿರುದ್ಧ ಯತ್ನಾಳ್ ಆಕ್ರೋಶ

Spread the loveಬೆಂಗಳೂರು, ನವೆಂಬರ್ 22: ಉತ್ತರಕನ್ನಡ ಜಿಲ್ಲೆಯ ಸಿದ್ಧಿ ಬುಡಕಟ್ಟು ಸಮುದಾಯಕ್ಕೆ (Siddi community) ವಿಶೇಷ ಗಿರಿಜನ ಯೋಜನೆಯಡಿ ನೀಡಲಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ