Breaking News

ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ

Spread the love

ಮೈಸೂರು: ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಯುರೋಪಿಯನ್ ರಾಷ್ಟ್ರಗಳು ನೇಮಿಸಿದ ತಂಡದಲ್ಲಿ ಕನ್ನಡಿಗ ಡಾ. ಮಹದೇಶ್ ಪ್ರಸಾದ್ ಅವರಿಗೆ ಸ್ಥಾನ ಸಿಕ್ಕಿದ್ದು ತಾಯಿ ಸಂತಸಗೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹದೇಶ್ ಪ್ರಸಾದ್ ಅವರ ತಾಯಿ ರತ್ನಮ್ಮ, ನನ್ನ ಮಗ ಕೊರೊನಾಗೆ ಔಷಧ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿರುವುದು ನನಗೆ ಖುಷಿಯಿದೆ ಹಾಗೂ ತುಂಬಾ ಹೆಮ್ಮೆ ಇದೆ. ನಾವು ಮೂಲತಃ ಹಾಸನದ ಅರಕಲಗೂಡಿನವರಾಗಿದ್ದು, ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಹಂತದ ಶಿಕ್ಷಣವನ್ನು ಮುಗಿಸಿದ್ದಾನೆ. ಬಿಎಸ್‍ಸಿ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾನೆ. ಎಂಎಸ್‍ಸಿ ಹಾಗೂ ಪಿಎಚ್‍ಡಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದಾನೆ ಎಂದರು.

ಮಹದೇಶ್ ಈಗ ಯೂರೋಪ್‍ನ ಬೆಲ್ಜಿಯಂ ದೇಶದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೊರೊನಾಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಹೇಳಿದ್ದನು. ಅಲ್ಲದೆ ಎರಡು ತಿಂಗಳಿನಿಂದ ನಾನು ಕೊರೊನಾ ವಾಕ್ಸಿನ್ ಸಂಶೋಧನೆ ಮಾಡುತ್ತಿದ್ದೇನೆ ಎಂದು ಹೇಳಿದ್ದನು. ಆಗ ನಾನು ತುಂಬಾ ಸಂತೋಷಗೊಂಡು, ಮುಂದುವರಿಸು ಎಂದು ಹೇಳಿದ್ದೆ. ಎರಡು ತಿಂಗಳ ಹಿಂದೆಯಷ್ಟೇ ಮಹದೇಶ್ ಭಾರತಕ್ಕೆ ಬಂದಿದ್ದನು. ಈ ವೇಳೆ ತಂಡದಲ್ಲಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದನು ಎಂದು ಮಹದೇಶ್ ತಾಯಿ ಹೇಳಿದರು.

ನನ್ನ ಮಗ ಕೊರೊನಾಗೆ ಔಷಧಿ ಕಂಡು ಹಿಡಿಯುವ ತಂಡದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಆತಂಕ ಇಲ್ಲ. ಈಗಾಗಲೇ ಕೊರೊನಾ ವೈರಸ್ ಇಡೀ ವಿಶ್ವದಲ್ಲಿ 5 ಸಾವಿರ ಜನರನ್ನು ಬಲಿ ಪಡೆದುಕೊಂಡಿದೆ. ಅಂತಹದರಲ್ಲಿ ನನ್ನ ಮಗ ಔಷಧಿ ಕಂಡು ಹಿಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತೆ ಎಂಬ ಖುಷಿ ಹಾಗೂ ಹೆಮ್ಮೆ ನನಗಿದೆ. ನನ್ನ ಮಗ ಔಷಧಿ ಕಂಡು ಹಿಡಿದು ಕೋಟ್ಯಂತರ ಜನರಿಗೆ ಉಪಯೋಗ ಆಗಲಿ ಎಂಬುದು ನಮ್ಮ ಆಶಯ ಎಂದರು.

ಮಹದೇಶ್ ಪಿಎಚ್‍ಡಿ ಮುಗಿದ ಮೇಲೆ ಜರ್ಮನಿಯಲ್ಲಿ ಹಲವು ವರ್ಷಗಳ ಕಾಲ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಆದಾದ ಬಳಿಕ ಯುಎಸ್‍ಎ, ಸ್ವೀಡನ್‍ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾನೆ. ಇದೀಗ ಬೆಲ್ಜಿಯಂನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ. ನನಗೆ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಾನೆ. ಈ ವೇಳೆ ವ್ಯಾಕ್ಸಿನ್ ಕಂಡು ಹಿಡಿಯಲು ತುಂಬಾ ಶ್ರಮಪಡುತ್ತಿದ್ದೇವೆ. ಔಷಧಿ ಕಂಡು ಹಿಡಿದೇ ಹಿಡಿಯುತ್ತೇವೆ ಎಂದು ಹೇಳುತ್ತಾನೆ ಎಂದು ತಿಳಿಸಿದರು.


Spread the love

About Laxminews 24x7

Check Also

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು.

Spread the loveಮೈಸೂರು ; ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ