Breaking News

Uncategorized

k.l.e.ಲಾ ಕಾಲೇಜನಲ್ಲಿ ಶುಭಾಸ ಚಂದ್ರ ಬೋಸರ 125 ನೇ ಜಯಂತಿ ಆಚರಣೆ

ಚಿಕ್ಕೋಡಿ :ಸ್ವಾತಂತ್ರ್ಯ ಹೋರಾಟಗಾರ ಆಜಾದ ಹಿಂದ್ ಪೌಜ್ ಸಂಸ್ಥಾಪಕ ದೇಶ ಕಂಡ ಅಪ್ರತಿಮ ವೀರ ಶುಭಾಸ್ ಚಂದ್ರ ಬೋಸರ 125 ನೇ ಜಯಂತಿಯನ್ನು ಚಿಕ್ಕೋಡಿ ಕೆಎಲ್‌ಇ ಲಾ ಕಾಲೇಜ ಪ್ರಾಂಶುಪಾಲ ದುಡಂಪ್ಪಾ ಸೊಲ್ಲಾಪೂರೆ ಅವರು ಶುಭಾಸಚಂದ್ರ ಬೊಸ್ ಅವರ ಪೋಟೊಗೆ ಪೂಜೆ ಸಲ್ಲಿಸದರು. ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಶುಭಾಸಚಂದ್ರ ಬೊಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ …

Read More »

ಆಹ್ವಾನ ಇದ್ದವರಿಗೆ ಮಾತ್ರ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಅವಕಾಶ

ನವದೆಹಲಿ,ಜ.23-ಆಹ್ವಾನ ಪತ್ರಿಕೆ ಇಲ್ಲವೆ ಟಿಕೆಟ್ ಹೊಂದಿರುವವರಿಗೆ ಮಾತ್ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಆಹ್ವಾನಪತ್ರಿಕೆ ಹೊಂದಿರುವವರು ಮಾತ್ರ ಪರೇಡ್‍ಗೆ ಆಗಮಿಸಬೇಕು. 15 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿಲ್ಲ ಎಂದು ದೆಹಲಿ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡುತ್ತಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲದವರು ಮನೆಯಲ್ಲೆ ಕುಳಿತು ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕ್ಯಾರಿ ಬ್ಯಾಗ್, ಸೂಟ್‍ಕೇಸ್, ಪಿನ್‍ಗಳು, ತಿಂಡಿತಿನಿಸುಗಳು, ಕ್ಯಾಮರಾ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ ಎಂದು …

Read More »

ಇನ್ಮುಂದೆ ಪ್ರತಿವರ್ಷ ಜ.23 ‘ಪರಾಕ್ರಮ ದಿನ’ ಎಂದು ಆಚರಿಸಲಾಗುತ್ತದೆ- ಸಿಎಂ

ಬೆಂಗಳೂರು: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ​ ಜನ್ಮದಿನದ ಹಿನ್ನೆಲೆಯಲ್ಲಿ ಇನ್ಮುಂದೆ ಪ್ರತಿ ವರ್ಷ ಜನವರಿ 23ರಂದು ಪರಾಕ್ರಮ ದಿನ ಎಂದು ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ನೇತಾಜಿ ಕರೆ ಕೊಟ್ಟಿದ್ದರು. ಆ ಮೂಲಕ ಯುವಕರನ್ನ ಸಂಘಟಿಸಿದ್ದರು. ಯುವಕರಲ್ಲಿ …

Read More »

ವಿಧಾನಪರಿಷತ್ ಗಲಾಟೆಗೆ ಮಾಧುಸ್ವಾಮಿ, ಅಶ್ವತ್ಥನಾರಾಯಣ ಕಾರಣ’

ಬೆಂಗಳೂರು: ‘ವಿಧಾನಪರಿಷತ್ತಿನಲ್ಲಿ ಡಿ.15 ರಂದು ನಡೆದ ಗಲಾಟೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಸಚಿವ ಜೆ.ಸಿ ಮಾಧುಸ್ವಾಮಿ ಅವರೇ ಕಾರಣರು’ ಎಂದು ಗಲಾಟೆಯ ವಿಚಾರಣೆಗೆಂದು ನೇಮಿಸಿದ್ದ ಸದನ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸದನ ಸಮಿತಿಯನ್ನು ರಚಿಸಿದ್ದರು. ಸಮಿತಿ ಶುಕ್ರವಾರ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಪೂರ್ಣ ವರದಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶವನ್ನು ಕೇಳಿದೆ. ಅಶ್ವತ್ಥನಾರಾಯಣ, ಮಾಧುಸ್ವಾಮಿ ಮತ್ತು …

Read More »

ಅಪಾರ್ಟ್ ಮೆಂಟ್ ನಲ್ಲಿ ಜೂಜಾಟ 2 ಲಕ್ಷದ 10 ಸಾವಿರ ರೂಪಾಯಿ ಹಣ ವಶಕ್ಕೆ

ಬೆಂಗಳೂರು: ಅಪಾರ್ಟ್ ಮೆಂಟ್ ಒಂದರಲ್ಲಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಕೃಷ್ಣ, ಮಹೇಶ್, ಮಂಜುನಾಥ್, ವಿಶ್ವನಾಥ್, ರಘು, ಪ್ರಸಾದ್, ಲಕ್ಷ್ಮಣ, ಹರೀಶ್ ಬಂಧಿತ ಆರೋಪಿಗಳು. ಅಪಾರ್ಟ್ ಮೆಂಟ್ ನ್ನೇ ತಮ್ಮ ಜೂಜಾಟ ಕೇಂದ್ರವನ್ನಾಗಿ ಆರೋಪಿಗಳು ಮಾಡಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 8 ಜನರನ್ನು ಬಂಧಿಸಿದ್ದು, 2 ಲಕ್ಷ 10 …

Read More »

ಶಿವಸೇನೆ ಪುಂಡರ ವಿರುದ್ಧ ಕಾಕತಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಬೆಳಗಾವಿ: ಮಹಾನಗರ ಪಾಲಿಕೆ ಬಳಿ ಇದ್ದ ಕನ್ನಡ ಧ್ವಜವನ್ನು ತೆರವು ಮಾಡಲು ಮುಂದಾಗಿದ್ದ ಶಿವಸೇನೆ ಪುಂಡರ ವಿರುದ್ಧ ಕಾಕತಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬೆಳಗಾವಿ ಗಡಿ ಪ್ರವೇಶಿಸಿ ಪಾಲಿಕೆಯ ಬಳಿ ಸ್ಥಾಪಿಸಲಾಗಿದ್ದ ಕನ್ನಡ ಧ್ವಜವನ್ನು ತೆರವು ಮಾಡಲು ಯತ್ನಿಸಿದ್ದ ಶಿವಸೇನೆ ಅಧ್ಯಕ್ಷ ವಿಜಯ ದೇವಣೆ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದ ಶಿವಸೇನೆ ಕಾರ್ಯಕರ್ತರನ್ನು ಜ.21ರಂದು ಪೊಲೀಸರು ಶಿನ್ನೊಳ್ಳಿ ಗಡಿಯಲ್ಲಿ ತಡೆದು …

Read More »

ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆ

ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಮಾಹಿತಿ ನೀಡಿದ್ದು, ಹಾವೇರಿಯ ಗುದ್ದಲ್ಯಪ ಹಳ್ಳಿಕೇರಿ ಕಾಲೇಜಿನ ಪಕ್ಕದಲ್ಲಿರುವ ವಿಶಾಲ ಮೈದಾನದಲ್ಲಿ ಫೆ.26, 27 ಹಾಗೂ 28ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕೋವಿಡ್ ನಿಯಮ ಸಡಿಲಿಸಿ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮೊದಲ ದಿನವೇ 1 …

Read More »

ಬ್ರೆಜಿಲ್ ತಲುಪಿದ ಭಾರತದ ಕೋವಿಶೀಲ್ಡ್ : ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್ ಅಧ್ಯಕ್ಷ

ನವದೆಹಲಿ: ಭಾರತ ವಿವಿಧ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಿದ್ದು, ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್​​, ನೇಪಾಳಗೆ ಲಸಿಕೆ ಕಳುಹಿಸಿಕೊಟ್ಟಿರುವ ಭಾರತ ಇದೀಗ ಬ್ರೆಜಿಲ್​ಗೂ ಕೊವಿಶೀಲ್ಡ್​ ವ್ಯಾಕ್ಸಿನ್ ರವಾನೆ ಮಾಡಿದೆ. ಕೊವಿಶೀಲ್ಡ್ ಲಸಿಕೆ ಬ್ರೆಜಿಲ್​ಗೆ ತಲುಪಿದ್ದು, ಅಲ್ಲಿನ ಅಧ್ಯಕ್ಷ ಜೈರ್​ ಎ ಬೋಲ್ಸನಾರೋ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜಾಗತಿಕ ಸಮಸ್ಯೆ ನಿರಾರಣೆ ಮಾಡಲು ಉತ್ತಮ ಪಾಲುದಾರನಾಗಿರುವ ಭಾರತ ಬ್ರೆಜಿಲ್​ಗೆ ಲಸಿಕೆ ರಫ್ತು ಮಾಡಲು ನಮಗೆ …

Read More »

ಗಾಜಿನ ಮನೆಯಲ್ಲಿ ಕುಳಿತು ಬಿಜೆಪಿ ಬೇರೊಂದು ಪಕ್ಷದತ್ತ ಕಲ್ಲು ಎಸೆಯುವುದು ಬೇಡ – ಸುದರ್ಶನ್

ಕೋಲಾರ ಜ.22 (ಹಿ.ಸ): ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವ ಬದಲು ಅವರ ಪಕ್ಷದ ಆಂತರಿಕ ವಿಷಯಗಳನ್ನು ಸರಿಪಡಿಸಿಕೊಳ್ಳಲು ಗಾಜಿನ ಮನೆಯಲ್ಲಿ ಕುಳಿತು ಇತರರ ಮೇಲೆ ಕಲ್ಲು ಎಸೆದರೆ ಕಲ್ಲು ಎಸೆದವರಿಗೆ ನಷ್ಠ. ಮತ್ತೊಂದು ಪಕ್ಷವನ್ನು ಟೀಕಿಸುವ ಮೊದಲು ಬಿಜೆಪಿ ತನ್ನ ಬಗ್ಗೆ ಗಮನಿಸಲಿ ಎಂದು ವಿಧಾನ ಪರಿಷತ್ ಮಾಜಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಕೋಲಾರ ತಾಲ್ಲೂಕಿನ ವೇಮಗಲ್‍ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, …

Read More »

ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ: ಉಮೇಶ್ ಕತ್ತಿ

ತುಮಕೂರು: ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ನೂತನ ಸಚಿವ ಉಮೇಶ್ ಕತ್ತಿಯವರು ಹೇಳಿಕೊಂಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ 75 ವರ್ಷದವರೆಗೂ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುವ ಹಾಗೆ ನನಗೂ ಇದೆ ಎಂದು ಹೇಳಿದ್ದಾರೆ. ನಾನೂ ಯತ್ನಾಳ್ ಇಬ್ಬರು ಹಿರಿಯರಿದ್ದೀವಿ. ಆದರೆ, ಯತ್ನಾಳ್ ಗಿಂತ ನಾನು ಸೀನಿಯರ್ ಎಂದ ಅವರು ಸದ್ಯ …

Read More »