ನವದೆಹಲಿ: ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆಯೇ ದೇಶಾದ್ಯಂತ ರಾಜಕೀಯ ಸಮೀಕರಣಗಳು ಬದಲಾಗತೊಡಗಿವೆ. ಸಹಜವಾಗಿಯೇ ಇದು ಹಲವು ರೀತಿಗಳಲ್ಲಿ ತನ್ನದೇ ಆದ ಪರಿಣಾಮಗಳನ್ನು ಹೊಂದಿರಲಿದೆ. ಈ ಪೈಕಿ ಬಿಹಾರಕ್ಕೆ ಸಂಬಂಧಿಸಿದ ನ್ಯಾ. ರೋಹಿಣಿ ಸಮಿತಿ ವರದಿಯೂ ಸೇರಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ, ಎನ್ ಡಿಎ ಮೈತ್ರಿಕೂಟ ಸೇರಿದ್ದು, ನರೇಂದ್ರ ಮೋದಿ ಸರ್ಕಾರ ನ್ಯಾ.ರೋಹಿಣಿ ಸಮಿತಿ ವರದಿಯನ್ನು ನಿರ್ಲಕ್ಷ್ಯ ವಹಿಸಿರುವಂತೆ ತೋರುತ್ತಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ …
Read More »C Voter ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?
ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಬಿಪಿ ನ್ಯೂಸ್-ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕವು ಬಿಜೆಪಿ ನೇತೃತ್ವದ ಎನ್‌ಡಿಎ ಪಾಲಾಗಲಿದೆ. ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎನ್‌ಡಿಎ 23 ಮತ್ತು ಕಾಂಗ್ರೆಸ್ 5 ಸೀಟುಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.ಕಾಂಗ್ರೆಸ್ ಶೇ.42 ಮತ ಪಡೆದರೆ, ಎನ್‌ಡಿಎ ಶೇ.53 ಮತಗಳನ್ನು ಪಡೆಯುವ ಅಂದಾಜಿಸಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದವು ಮತ್ತು …
Read More »ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಕುಮಾರಸ್ವಾಮಿ
ಹಾಸನ: ‘ರಾಜ್ಯದ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ. ಇನ್ನೂ 2-3 ಕ್ಷೇತ್ರ ಕೇಳಿದ್ದರೆ ಕೊಡುತ್ತಿದ್ದರು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾ.21 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ನಾನು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಒಂದೇ ಕುಟುಂಬದ ಅನೇಕರು ರಾಜಕೀಯದಲ್ಲಿದ್ದಾರೆ. ಆದರೆ ದೇವೇಗೌಡರ ಕುಟುಂಬದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ’ ಎಂದರು. ‘ಡಾ.ಸಿ.ಎನ್. ಮಂಜುನಾಥ್ ಅವರನ್ನು ಅಭ್ಯರ್ಥಿ …
Read More »ಭತ್ತಕ್ಕೆ ನೀರು; ಕುಡಿಯುವ ನೀರಿಗೆ ಬರ
ಯಾದಗಿರಿ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಭೀಮಾ ನದಿಯ ನೀರಿನ ಮೇಲೆ ಜಿಲ್ಲೆಯ ಜನ ಅವಲಂಬಿತರಾಗಿದ್ದಾರೆ. ಆದರೆ, ಕುಡಿಯಲು ನೀರಿಲ್ಲದ ಸಮಯದಲ್ಲಿ ಆಂಧ್ರ ಮೂಲದ ರೈತರು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳುತ್ತಿದ್ದಾರೆ ಬೆಳೆಗೆ ನೀರುಣಿಸಿ ಕುಡಿಯಲು ನೀರು ಸಿಗದ ಹಾಗೆ ಮಾಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾದಗಿರಿ, ಗುರುಮಠಕಲ್ ಜನರಿಗೆ ಕುಡಿಯಲು ಭೀಮಾ ನದಿ ನೀರೆ ಆಸರೆಯಾಗಿದೆ. ಆದರೆ, ಕುಡಿಯಲು ಬಳಸುವ …
Read More »ಬೆಂಗಳೂರು-ಚೆನ್ನೈ ವಂದೇ ಭಾರತ್ ಸೇವೆ ನಾಳೆಯಿಂದ ಆರಂಭ
ಬೆಂಗಳೂರು ಮಾರ್ಚ್ 13: ಮೈಸೂರು-ಚೆನ್ನೈ ನೂತನ ವಂದೇ ಭಾರತ್ ರೈಲು ಮಾರ್ಚ್ 14ರಿಂದ ಎಸ್‌ಎಂವಿಟಿ ಬೆಂಗಳೂರು-ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ವಾಣಿಜ್ಯ ಸಂಚಾರ ಆರಂಭಿಸಲಿದೆ. ಇದರ ದರವನ್ನು ನೈಋತ್ಯ ರೈಲ್ವೆ ನಿಗಧಿಪಡಿಸಿದೆ.ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ (353 ಕಿ.ಮೀ) ಚೇರ್‌ಕಾರ್ 985, ಎಕ್ಸಿಕ್ಯೂಟಿವ್ ಕ್ಸಾನ್‌ಗೆ 1855 ರೂ..ನಿಗದಿಸಲಾಗಿದೆ. ಎಸ್‌ಎಂವಿಟಿ-ಕಟ್ಪಾಡಿ ರೈಲ್ವೆ ಸ್ಟೇಷನ್ (223 ಕಿಮೀ) ನಡುವೆ ಚೇರ್‌ಕಾರ್ 765 ರೂ, ಎಕ್ಸಿಕ್ಯೂಟಿವ್ ಕ್ಲಾಸ್ 1420 …
Read More »ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದ ಹೆಬ್ಬಾಳ್ಕರ್
ಕೆ.ಜಿ.ಹಳ್ಳಿ (ಮಾಲೂರು): ಗ್ಯಾರಂಟಿ ಸಮಾವೇಶಗಳನ್ನು (Guarantee Samavesha) ನಾವು ಕಾಟಾಚಾರಕ್ಕೆ, ಕೇವಲ ಹೆಸರಿಗಾಗಿ ಮಾಡುತ್ತಿಲ್ಲ. ಯೋಜನೆಗಳು ಯಾರಿಗೆ ತಲುಪಲಿಲ್ಲ ಎಂದು ತಿಳಿದುಕೊಂಡು ಅವುಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶಕ್ಕಾಗಿ ಸಮಾವೇಶ ಮಾಡಲಾಗುತ್ತಿದೆ. ಯಾರಿಗೆ ತಲುಪಿಲ್ಲ ಎಂದು ತಿಳಿಸಿದರೆ ಅವರಿಗೆ ಖುದ್ದಾಗಿ ತಲುಪಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ. ಮಾಲೂರು ತಾಲೂಕಿನ ಕೆ.ಜಿ.ಹಳ್ಳಿಯಲ್ಲಿ ಸೋಮವಾರ ನಡೆದ ಟೆಕಲ್ ಹೋಬಳಿ …
Read More »ಪ್ರತಾಪ್, ಕಟೀಲ್ಗೆ ಇಲ್ಲ ಟಿಕೆಟ್ ಬೆಳಗಾವಿಗೆ ಜಗದೀಶ್ ಶೆಟ್ಟರ್, ಚಿಕ್ಕೋಡಿಗೆ ರಮೇಶ್ ಕತ್ತಿ ಅಭ್ಯರ್ಥಿ?:ವಿಜಯೇಂದ್ರ
ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ 22 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರುಗಳು ಸೋಮವಾರ ಅಂತಿಮಗೊಂಡಿದೆ ಎನ್ನಲಾಗಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸೋಮವಾರ ಅಭ್ಯರ್ಥಿಗಳನ್ನು ನಿರ್ಧರಿಸಲು ತನ್ನ ಎರಡನೇ ಸಭೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕರ್ನಾಟಕದ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿರುವ ಬಿಜೆಪಿ ವರಿಷ್ಠರು 22 ಅಭ್ಯರ್ಥಿಗಳ ಆಯ್ಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ, ಕೆಲವು …
Read More »ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್ನಿಂದ ಹೊಡೆದ ಸೊಸೆ,
ಮಂಗಳೂರು, ಮಾರ್ಚ್ 11: ವೃದ್ಧ ಮಾವ (father-in-law) ನಿಗೆ ವಾಕಿಂಗ್ ಸ್ಟಿಕ್ನಲ್ಲಿ ಸೊಸೆ ಹೊಡೆದಿರುವಂತಹ ಅಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರಿ ಎಂಬುವವರಿಂದ ಕೃತ್ಯವೆಸಲಾಗಿದೆ. ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ. …
Read More »ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ; ಮಾಟ-ಮಂತ್ರ ಶಂಕೆ, ಓರ್ವ ಅರೆಸ್ಟ್
ರಾಮನಗರ, ಮಾರ್ಚ್.11: ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು (Human Skulls) ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಬೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಸ್ಥಳಕ್ಕೆ ಬಂದ ಪೊಲೀಸರು (Bidadi Police) ಬಲರಾಮ್ನನ್ನು …
Read More »ಸತತ 4 ದಿನಗಳಿಂದ ಏರಿಕೆಯಾಗುತ್ತಿದೆ ಬಂಗಾರದ ದರ.
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ,ಏರಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ.. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ: 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,750 ರೂ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,270ರೂ. ಬೆಳ್ಳಿ ಬೆಲೆ 1 ಕೆಜಿ: 75,100 ರೂ. …
Read More »
Laxmi News 24×7