Breaking News

Uncategorized

ಮಲ್ಟಿಫ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ನಿಗದಿ ಪಡಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕರೂಪ ದರ ನಿಗದಿಪಡಿಸಿ ಸರ್ಕಾರ‌ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ …

Read More »

ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್

ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್ ಬಾಗಲಕೋಟೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟ್​ ಅಧ್ಯಕ್ಷರಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರ್​ ಭಾನುವಾರ ತಿಳಿಸಿದ್ದಾರೆ. ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ಧರ್ಮದರ್ಶಿಗಳು, ಸಮುದಾಯದವರು ಸೇರಿ ಒಂದು ತತ್ವ ಆದರ್ಶದ ಮೇಲೆ ಈ ಪೀಠವನ್ನು ಕಟ್ಟಲಾಗಿತ್ತು. …

Read More »

ಭಾನುವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆನೆಗಳ ತಾಲೀಮಿಗೆ ಬ್ರೇಕ್

ಮೈಸೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮಿಗೆ ಭಾನುವಾರ ವಿರಾಮ ನೀಡಲಾಯಿತು. ಇದರಿಂದ ಮಾವುತರು ಹಾಗೂ ಕಾವಾಡಿಗಳು ವಿಶ್ರಾಂತಿಯಲ್ಲಿದ್ದರು. ತಾಲೀಮಿಗೆ ವಿರಾಮ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಪ್ರಶಾಂತ, ಲಕ್ಷ್ಮಿ, ಕಂಜನ್, ಧನಂಜಯ, ಮಹೇಂದ್ರ, ಕಾವೇರಿ, ಹೇಮಾವತಿ, ರೂಪ, ಶ್ರೀಕಂಠ, ಸುಗ್ರೀವ ಗೋಪಿ ಆನೆಗಳಿಗೆ ನೆತ್ತಿಗೆ ಎಣ್ಣೆ ಹಾಕಿ, ಸ್ನಾನ ಮಾಡಿಸಲಾಯಿತು. ತಾಲೀಮಿನ ಭಾಗವಾಗಿ ಎಲ್ಲಾ ಆನೆಗಳನ್ನು ನಿತ್ಯ ಅರಮನೆಯಿಂದ ಬನ್ನಿಮಂಟಪದವರಗೆ ಕರೆದುಕೊಂಡು ಹೋಗಿ ವಾಪಸ್ …

Read More »

ಜಿಲ್ಲಾ ದಸರಾ ಕೈ ಬಿಟ್ಟ ಸರ್ಕಾರ: ಕನ್ನಡ ಸಂಘದಿಂದಲೇ 9 ದಿನ ಅದ್ಧೂರಿ ಚಾಮರಾಜನಗರ ದಸರಾ

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಯುಕ್ತ ಚಾಮರಾಜನಗರದಲ್ಲಿ ಮೂರು ದಿನಗಳ ಕಾಲ ನಡೆಸುತ್ತಿದ್ದ ಚಾಮರಾಜನಗರ ದಸರಾವನ್ನು ಈ ಬಾರಿ ಕೈ ಬಿಟ್ಟಿದ್ದು, ಸಿಎಂ ಸಿದ್ದರಾಮಯ್ಯ ಅವರೇ ಚಾಮರಾಜನಗರದಲ್ಲಿ ದಸರಾ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಕನ್ನಡಪರ ಹೋರಾಟಗಾರರು ಚಾಮರಾಜನಗರ ದಸರಾ ಮಾಡಲು ಮುಂದಾಗಿದ್ದಾರೆ. ಹೌದು, ಸರ್ಕಾರ ಜಿಲ್ಲಾ ದಸರಾ ಆಚರಣೆ ಕೈ ಬಿಟ್ಟ ಹಿನ್ನೆಲೆ ಕನ್ನಡಪರ ಹೋರಾಟಗಾರ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜನಗರ ದಸರಾ ಆಚರಣೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು …

Read More »

ಸಿಪಿಐ ಬಿ ಆರ್ ಗಡ್ಡೇಕರ್ ಮತ್ತು ತಂಡ ಧಾರವಾಡದ ಸಮೀರ್ ಲಾಟ್ಮಣವರ್ ಅವರನ್ನು ಗಾಂಜಾ ಮಾರಾಟ ಮಾಡಿದ್ದಕ್ಕಾಗಿ ಬಂಧಿಸಿದ 5 ವರ್ಷ ಜೈಲು ಶಿಕ್ಷೆ ಮತ್ತು ₹50,000 ದಂಡ

ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಸಿಪಿಐ ಬಿ ಆರ್ ಗಡ್ಡೇಕರ್ ಮತ್ತು ತಂಡ ಧಾರವಾಡದ ಸಮೀರ್ ಲಾಟ್ಮಣವರ್ ಅವರನ್ನು ಗಾಂಜಾ ಮಾರಾಟ ಮಾಡಿದ್ದಕ್ಕಾಗಿ ಬಂಧಿಸಿದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ₹50,000 ದಂಡ ವಿಧಿಸಿತು. `1Q43 ಇದು ಇತಿಹಾಸದಲ್ಲಿ ಮೊದಲ ಎನ್‌ಡಿಪಿಎಸ್ ಶಿಕ್ಷೆ ಪ್ರಕರಣವಾಗಿದೆ.

Read More »

ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಲು ಪ್ರಯತ್ನಿಸಿ- ಮಾಧ್ಯಮದವರಿಗೆ ಸಿಎಂ ಸಲಹೆ*

* *ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ* *ಸಾಮಾಜಿಕ ನ್ಯಾಯದ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಲಿ- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಂಗಳೂರು, ಸೆಪ್ಟೆಂಬರ್ 19: ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ಅವರು ಇಂದು ಬೆಂಗಳೂರಿನ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2024 ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ …

Read More »

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ*

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ* ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಪಿ ಐ ಗುರುಶಾಂತ ಗೌಡ ದಾಶ್ಯಾಳ ಮಾತನಾಡಿ ಸಮಾಜದಲ್ಲಿ ಶಾಂತತೆ ಇರಬೇಕಾದರೆ ಜನರ ಸಹಕಾರ ಬೇಕು ಅಂತ ಹೇಳಿದರು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಣ್ಣ- ಪುಟ್ಟ ಪ್ರಕರಣಗಳನ್ನು ಹೊರತು ಪಡಿಸಿ ಈ ವರ್ಷ ಯಾವುದೇ …

Read More »

ಹುಬ್ಬಳ್ಳಿ ವೀರಶೈವ ಸಮಾವೇಶಕ್ಕೆ ಪಂಚಮಸಾಲಿಗರು ಹೋಗಬಾರದು: ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ

ಹುಬ್ಬಳ್ಳಿ ವೀರಶೈವ ಸಮಾವೇಶಕ್ಕೆ ಪಂಚಮಸಾಲಿಗರು ಹೋಗಬಾರದು: ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ಬೆಳಗಾವಿ: “ಹುಬ್ಬಳ್ಳಿಯಲ್ಲಿ ಶುಕ್ರವಾರ (ಇಂದು) ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶಕ್ಕೆ ಪಂಚಮಸಾಲಿ ಸಮಾಜದವರು ಯಾರೂ ಹೋಗಬಾರದು” ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ ಅವರು, “ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ನಮಗೆ ಸಹಕಾರ …

Read More »

ಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ; ದರೋಡೆಕೋರರ ಪತ್ತೆಗೆ 8 ತಂಡಗಳ ರಚನೆ; ಬಂಗಾರ ಇಟ್ಟವರಿಂದ ಗೋಳಾಟ!

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ​ಗೆ ಮಂಗಳವಾರ ಸಂಜೆ ಮಾಸ್ಕ್​ ಧರಿಸಿಕೊಂಡು ನುಗ್ಗಿದ್ದ ಕಳ್ಳರು, ಬೃಹತ್ ಪ್ರಮಾಣದ​ ಸ್ವತ್ತು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು, ಪ್ರಕರಣ ಸಂಬಂಧಪಟ್ಟಂತೆ ದರೋಡೆಕೋರರ ಬಂಧನಕ್ಕೆ 8 ವಿಶೇಷ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಎಸ್​​ಪಿ: ಬ್ಯಾಂಕ್​ ದರೋಡೆ ಕುರಿತು ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ (ಸೋಮವಾರ) ಸಂಜೆ ನಡೆದ …

Read More »

ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…

ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…ಮಹಿಳೆಯರ ಏಳ್ಗೆಯೇ ನಮ್ಮ ಧ್ಯೇಯ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಇಡೀ ರಾಜ್ಯದಲ್ಲಿ 1 ತಿಂಗಳು ಗರ್ಭಿಣಿಯರಿಗೆ ಎಲ್ಲ ಗ್ರಾ ಪಂ ಮಟ್ಟದಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ರಾಜ್ಯದ ಮಹಿಳೆಯರ ಏಳ್ಗೆಗಾಗಿ ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯವೆಂದು ಮಹಿಳಾ ಮತ್ತು ಮಕ್ಕಳ …

Read More »