ಬೋರಗಾಂವ ಪಟ್ಟಣದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ವಾರ್ಷಿಕ ಶಿಬಿರದ ಮೂರನೇ ದಿನದ “ಮಹಿಳಾ ಸಬಲೀಕರಣ” ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಬಸವಪ್ರಸಾದ ಹಾಗೂ ಯಶಸ್ವಿನಿ ಜೊಲ್ಲೆ ಯವರು ಉದ್ಘಾಟಿಸಿ ಚಾಲನೆ ನೀಡಿದರು.ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ಮನರಂಜಿಸಿದರು. ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಮಹಿಳಾ ಪರ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಪ್ರಯೋಜನ ಪಡೆದು ದೇಶದ ಆರ್ಥಿಕ ಪ್ರಗತಿಗೆ …
Read More »ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ, ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವು
ವಿಜಯನಗರ, ಕೊಪ್ಪಳ ಜಿಲ್ಲೆಯ DCRE ಘಟಕದ CPI ರಘುನಾಥ್ ಸ್ಥಳದಲ್ಲೇ ಸಾವು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಡಿಸಿಆರ್‌ಇ CPIಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ವಿಜಯನಗರ- ದಾವಣಗೆರೆ ಗಡಿ ಭಾಗದ, ಮುಸ್ಟೂರು – ಕಡಬನಕಟ್ಟೆ ಮಧ್ಯೆ ಘಟನೆ ಬೇವಿನ ಮರಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರೋ CPI ಸ್ವಂತ ಊರು ಚಿತ್ರದುರ್ಗ ಜಿಲ್ಲೆಯಿಂದ ಹೊಸಪೇಟೆಗೆ ಆಗಮಿಸುತ್ತಿದ್ದ ರಘುನಾಥ್ ಮೊನ್ಮೆಯಷ್ಟೆ ವರ್ಗವಾಗಿ ಬೆಂಗಳೂರು ಕೇಂದ್ರ ಕಚೇರಿಗೆ ಆದೇಶವಾಗಿತ್ತು ಇನ್ನೂ ಬೆಂಗಳೂರು ಕೇಂದ್ರ ಕಚೇರಿಗೆ …
Read More »180ಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: 350 ಅಶ್ಲೀಲ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಅಯಾಜ್ ಅರೆಸ್ಟ್…!!
ಮಹಾರಾಷ್ಟ್ರದ ಅಮರಾವತಿಯಲ್ಲಿ, 180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಮಕ್ಕಳಿಗೆ ಬ್ಲಾಕ್‌ಮೇಲ್ ಮಾಡ್ತಿದ್ದ AIMIM ಸಂಘಟನೆಯ ಪದಾಧಿಕಾರಿಯಾಗಿದ್ದ ವ್ಯಕ್ತಿಯನ್ನು ಮಹಾ ಪೊಲೀಸರು ಬಂಧಿಸಿದ್ದಾರೆ. ನೂರಾರು ಮಕ್ಕಳ ಬದುಕು ಹಿಂಡಿದ ಅಯಾಜ್: ಮುಂಬೈ: 180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರಿಕರೀಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂದು …
Read More »ಆದಿಚುಂಚನಗಿರಿ ಮಠ ಆಧ್ಯಾತ್ಮಿಕ ಪರಂಪರೆ ಹೊಂದಿದೆ: ಮೋದಿ ಬಣ್ಣನೆಆದಿಚುಂಚನಗಿರಿ ಮಠ ಆಧ್ಯಾತ್ಮಿಕ ಪರಂಪರೆ ಹೊಂದಿದೆ: ಮೋದಿ ಬಣ್ಣನೆ
ಮಂಡ್ಯ: ಆದಿಚುಂಚನಗಿರಿ ಮಠ ಆಧ್ಯಾತ್ಮಿಕ ಪರಂಪರೆ ಹೊಂದಿದೆ. ಮಠವು ನೈತಿಕ ಮೌಲ್ಯಗಳಿಂದ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನಾಡಿದರು. ಕಾಲಭೈರನ ದರ್ಶನ ಪಡೆದುಕೊಂಡಿದ್ದೇನೆ. ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದ್ದೇನೆ. ನಿಮ್ಮೆಲ್ಲರ ದರ್ಶನ ಪಡೆದುಕೊಂಡಿದ್ದೇನೆ. ಶಬ್ದದಲ್ಲಿ ಈ ಭಾವವನ್ನು ಹೇಳಲು ಸಾಧ್ಯವಿಲ್ಲ. ಪ್ರತಿ ಸಲ …
Read More »ಕಬ್ಬಿನಂತೆ ಮಂಡ್ಯ ಜನರ ಮಾತೂ ಸಿಹಿ: ಹಾಡಿಹೊಗಳಿದ ಮೋದಿ
ಮಂಡ್ಯ: ಕಬ್ಬಿನಂತೆ ಮಂಡ್ಯ ಜನರ ಮಾತೂ ಸಿಹಿ. ಸಕ್ಕರೆ ನಾಡು ಮಂಡ್ಯ ಮಹತ್ವಪೂರ್ಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು. ಆದಿಚುಂಚನಗಿರಿ ಮಠದ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟಿಸಿ ಮಾತನಾಡಿದ ಮೋದಿ, ಸಕ್ಕರೆ ನಗರ ಮಧುರ ಮಂಡ್ಯ ಎಂದು ಕನ್ನಡದಲ್ಲಿ ಹೇಳಿದರು. ಆಗ ಕಾರ್ಯಕ್ರಮದಲ್ಲಿದ್ದ ಜನರೆಲ್ಲ ಮೋದಿ ಮಾತಿಗೆ ಕೂಗುತ್ತಾ ಖುಷಿ ವ್ಯಕ್ತಪಡಿಸಿದರು. ಸಕ್ಕರೆ ಮಂಡ್ಯ ಮಹತ್ವಪೂರ್ಣವಾಗಿದೆ. ಈ ಜಾಗ ಕಬ್ಬಿನ ಸಿಹಿಗೆ ಫೇಮಸ್. ಜನರು ಕೂಡ ಕಬ್ಬಿನಂತೆ ಸಿಹಿಯ …
Read More »ಬದ್ಧತೆಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಪಕ್ಷ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಾವುಂಡ ಪಾಳ್ಯಂ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ಸೂರ್ಯಪ್ರಕಾಶ್ ಪರ ಪ್ರಚಾರ ನಡೆಸಿದರು. ತೆಲಂಗಾಣದ ಜಲ ಸಂಪನ್ಮೂಲ ಸಚಿವರಾದ ಉತ್ತಮ್‌ಕುಮಾರ್ ರೆಡ್ಡಿ ಜೊತೆಗೂಡಿ, ಕಾವುಂಡ ಪಾಳ್ಯಂ ಕ್ಷೇತ್ರದ ಜಲ್ಲಿಕೊರೈ, ಸುಬ್ರಹ್ಮಣ್ಯ ಪಾಳ್ಯಂ, ವಾಲೆಟ್ ನಗರ, ಕೆಎನ್‌ಜಿ ಪುದುರ್ ಪ್ರದೇಶಗಳಲ್ಲಿ ಮತಯಾಚಿಸಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ …
Read More »ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ – 80 ಕೋಟಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ
ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರಿಂದು (ಏ.15) ಆದಿಚುಂಚನಗಿರಿಗೆ ಭೇಟಿ ನೀಡಲಿದ್ದು, 80 ಕೋಟಿ ರೂ.ಗೂ ಅಧಿಕ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ದೆಹಲಿಯಿಂದ ಪ್ರಧಾನಿ ಮೋದಿಯವರು 10:05ಕ್ಕೆ ಹೆಚ್‌ಎಎಲ್‌ಗೆ ಆಗಮಿಸಲಿದ್ದು, ಬಳಿಕ ಅಲ್ಲಿಂದ 10:50ಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ತಪೋವನದ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಈ ವೇಳೆ ಮೋದಿಗೆ ಶ್ರೀ ಮಠದವರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಮೊದಲು ಮೋದಿ ಗೋರಕ್ಷಕನಾಥ ತಪಸ್ಸು ಮಾಡಿ, ಜ್ವಾಲಾಪೀಠಕ್ಕೆ ಭೇಟಿ …
Read More »ಪಕ್ಷಕ್ಕೆ ಶಿಸ್ತು ಬಹಳ ಮುಖ್ಯ, ಆದರೆ ಜಮೀರ್ ಅದನ್ನು ಪಾಲಿಸಿಲ್ಲ: ಡಿಕೆಶಿ
ಬೆಂಗಳೂರು: ಪಕ್ಷಕ್ಕೆ ಶಿಸ್ತು ಬಹಳ ಮುಖ್ಯ, ಆದರೆ ಜಮೀರ್ ಶಿಸ್ತು ಪಾಲಿಸಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷವಾದರೂ ಶಿಸ್ತು ಬಹಳ ಮುಖ್ಯ. ಆದರೆ ಜಮೀರ್ ಅಹ್ಮದ್ ಪಕ್ಷದ ಶಿಸ್ತನ್ನು ಪಾಲಿಸಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ, ತಮ್ಮದೇ ಆದ ವಿವಿಧ ಮೂಲಗಳಿಂದ …
Read More »ಪವರ್ ಪ್ಲಾಂಟ್ ದುರಂತ: ಬಾಯಿಲರ್ ಸ್ಫೋಟಕ್ಕೆ 10 ಕಾರ್ಮಿಕರು ಬಲಿ
ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಸಿಂಗಿತಾರಿ ಗ್ರಾಮದಲ್ಲಿರುವ ವೇದಾಂತ ಪವರ್ ಪ್ಲಾಂಟ್‌ನಲ್ಲಿ ಇಂದು (ಏಪ್ರಿಲ್ 14) ಮಧ್ಯಾಹ್ನ ಭೀಕರ ಬಾಯಿಲರ್ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 10 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ನಂತರ ಉಂಟಾದ ಆತಂಕ ಮತ್ತು ಕಾಲ್ತುಳಿತದಲ್ಲಿ ಸುಮಾರು 30-40 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ರಾಯಗಢದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
Read More »ಮೇ 1 ರಿಂದ ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ – ಇಲ್ಲದಿದ್ದರೆ ಲೈಸೆನ್ಸ್ ರದ್ದು
ಮುಂಬೈ: ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಚಾಲಕರು ಕಡ್ಡಾಯವಾಗಿ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು, ಇಲ್ಲದಿದ್ದರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ನಿಯಮವನ್ನು ಮಹಾರಾಷ್ಟ್ರ ದಿನವಾದ ಮೇ 1 ರಿಂದ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಪುನರುಚ್ಚರಿಸಿದ್ದಾರೆ. ಪ್ರತಾಪ್ ಸರ್ನಾಯಕ್ ಅವರು ಮಾತನಾಡಿ, ಮಹಾರಾಷ್ಟ್ರ ದಿನಾಚರಣೆಯ ಜೊತೆಜೊತೆಗೆ …
Read More »
Laxmi News 24×7