Breaking News

Uncategorized

ಸರ್ಕಾರಿ ಕೆಲಸಕ್ಕಾಗಿ 7 ಲಕ್ಷ ಸುಪಾರಿ ಕೊಟ್ಟು ಅಮ್ಮನನ್ನೇ ಮುಗಿಸಿದ ಮಗಳು

ಜೈಪುರ: ಆಸ್ತಿ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಂತಕರಿಗೆ 7 ಲಕ್ಷ ರೂ. ಸುಪಾರಿ ಕೊಟ್ಟು ಮಗಳೇ ಅಮ್ಮನನ್ನು ಕೊಲೆ ಮಾಡಿಸಿದ ಪ್ರಕರಣ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಆಯುಷಿ ಶರ್ಮಾ (23) ಆಸ್ತಿ ಮತ್ತು ತಾಯಿಯ ಸರ್ಕಾರಿ ಉದ್ಯೋಗಕ್ಕಾಗಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಈ ಸಂಚು ರೂಪಿಸಿದ್ದಳು. ಬಳಿಕ ಕೊಲೆಗಾಗಿ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಅದರಂತೆ ಸುಪಾರಿ ಹಂತಕರು ಸ್ಕಾರ್ಪಿಯೋ ಎಸ್‌ಯುವಿಯಿಂದ …

Read More »

ಬಿಜೆಪಿಯ ಒಬ್ಬ ಲೀಡರ್ ಮಗನೂ RSS ನಲ್ಲಿ ಪೂರ್ಣ ಪ್ರಚಾರಕನಾಗಿಲ್ಲ: ಪ್ರಿಯಾಂಕ್‌ ಖರ್ಗೆ ಕಿಡಿ

ಬೆಂಗಳೂರು: ಬಿಜೆಪಿಯ ಒಬ್ಬ ಲೀಡರ್ ಮಗನೂ ಆರ್.ಎಸ್.ಎಸ್ ನಲ್ಲಿ ಪೂರ್ಣ ಪ್ರಚಾರಕರಾಗಿಲ್ಲ ಅಂತ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಕೊಲೆ ಕೇಸ್ ನಲ್ಲಿ ಜೈಲಿಗೆ ಹೋದವರಿಗೆ ಸಂಘ ಪರಿವಾರದವರು ಸಹಾಯ ಮಾಡ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ನಾನು ಹೇಳ್ತಾ ಇದ್ದೆ. ಈಗ ಅವರೇ ಹೇಳ್ತಾ ಇದ್ದಾರಾ? ನಾನು ಮುಂಚೆ ಇಂದ ಇದೇ ಹೇಳ್ತಾ ಇದ್ದೀನಿ. ಶಾಲು, ಗೋಶಾಲೆಗೆ ಹೋಗಬೇಕು ಅನ್ನೋದು, …

Read More »

ಇಂಗಳದಾಳ್ ಬಳಿ ಶವ ಪತ್ತೆ ಕೇಸ್ – ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾವನ ಹತ್ಯೆಗೆ ನಾದಿನಿ ಸ್ಕೆಚ್

ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾವನನ್ನು ನಾದಿನಿಯೇ  ಸ್ಕೆಚ್ ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೃತರನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಶಿವಮೂರ್ತಿ (49) ಎಂದು ಗುರುತಿಸಲಾಗಿದೆ. ಶಿವಮೂರ್ತಿ ಪಾವಗಡದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ರಜೆ ದಿನಗಳಲ್ಲಿ …

Read More »

3 ಮಕ್ಕಳ ತಾಯಿಯೊಂದಿಗಿನ ಲಿವ್-ಇನ್ ಸಂಬಂಧವೇ ಜಿಮ್ ಟ್ರೇನರ್‌ ಸಾವಿಗೆ ಕಾರಣವಾಯ್ತಾ?

ಚಿಕ್ಕಬಳ್ಳಾಪುರ: ಬೆಂಗಳೂರಿನ ಜಿಮ್ ಟ್ರೇನರ್  ದೇವಿಪ್ರಸಾದ್ ಸಾವಿನ ಪ್ರಕರಣವನ್ನು ಆರಂಭದಲ್ಲಿ ರಸ್ತೆ ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಇದು ಅಪಘಾತವಲ್ಲ, ಕೊಲೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ. 30 ವರ್ಷದ ದೇವಿಪ್ರಸಾದ್ ಬೆಂಗಳೂರಿನ ನಾರಾಯಣಪುರ ನಿವಾಸಿಯಾಗಿದ್ದು, ಪ್ರತಿಷ್ಠಿತ ಜಿಮ್‌ನಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಅನೇಕ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಅವರು, ವೃತ್ತಿಪರ ಬೈಕ್ ರೈಡರ್ ಕೂಡ ಆಗಿದ್ದರು. …

Read More »

ಮಲೆನಾಡಲ್ಲಿ ಮಳೆ ಅಬ್ಬರ – ಹೆಬ್ಬೆ ಫಾಲ್ಸ್‌ನಲ್ಲಿ ಜಲವೈಭವ

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ  ಅಬ್ಬರ ಜೋರಾಗಿದ್ದು, ತರೀಕೆರೆ  ತಾಲೂಕಿನಲ್ಲಿರುವ ಹೆಬ್ಬೆ ಫಾಲ್ಸ್‌ ಧುಮ್ಮಿಕ್ಕಿ ಹರಿಯುತ್ತಿದೆ. ಹೆಬ್ಬೆ ಜಲಪಾತದಲ್ಲಿ ಸುಮಾರು 100 ಅಡಿಗೂ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಫಾಲ್ಸ್‌ನ ಜಲವೈಭವ ನೋಡಲು ಪ್ರವಾಸಿಗರ ದಂಡೇ ಬರುತ್ತಿದೆ. ಈ ಜಲಪಾತಕ್ಕೆ ಸ್ಥಳಿಯರು, ಪ್ರವಾಸಿಗರು ಮಿನಿ ಜೋಗ ಎಂದೇ ಕರೆಯುತ್ತಾರೆ.  ಕೆಮ್ಮಣ್ಣುಗುಂಡಿ ತಪ್ಪಲಿನ ಕಾಡು ಹಾಗೂ ಕಾಫಿತೋಟಗಳ ಮಧ್ಯೆ ಈ ಜಲಪಾತ ಇದೆ. ಈ ಪರಿಸರದಿಂದ ಜಲಪಾತದ …

Read More »

ʻಮಹಾʼ ಮಳೆಗೆ ಕೊಚ್ಚಿ ಹೋದ 3,000 ಸಿಲಿಂಡರ್‌

ಮುಂಬೈ: ಭಾರೀ ಮಳೆಯಿಂದಾಗಿ  ಮಹಾರಾಷ್ಟ್ರದ  ರಾಯಗಢದ HPCL ಬಾಟ್ಲಿಂಗ್ ಸ್ಥಾವರಕ್ಕೆ ಪಾತಾಳಗಂಗಾ ನದಿ ನೀರು ನುಗ್ಗಿ 3,000 LPG ಸಿಲಿಂಡರ್‌ಗಳು (LPG Cylinders) ತೇಲಿ ಹೋಗಿವೆ. ಸಿಲಿಂಡರ್‌ಗಳು ತೇಲಿ ಹೋಗುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. LPG ಸಿಲಿಂಡರ್‌ ಅಭಾವದ ನಡುವೆ ಈ ಘಟನೆ ಸಂಭವಿಸಿದ್ದು, ತೀವ್ರ ಆಘಾತಕ್ಕೆ ಕಾರಣವಾಗಿದೆ. ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ HPCL ನ ಪಾತಾಳಗಂಗಾ LPG ಬಾಟ್ಲಿಂಗ್ ಸ್ಥಾವರದಲ್ಲಿ ಈ …

Read More »

ಧಗ ಧಗ ಧಗ – ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ ಲಾರಿ

ಚಿಕ್ಕಬಳ್ಳಾಪುರ: ಅತಿ ವೇಗವಾಗಿ ಬಂದ ಪೆಟ್ರೋಲ್‌ ಟ್ಯಾಂಕರ್‌ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಬಳಿ ನಡೆದಿದೆ. ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಹೇಳಲಾಗ್ತಿದೆ. ಪೆಟ್ರೋಲ್‌ ಟ್ಯಾಂಕರ್‌ ಲಾರಿ ಧಗಧಗನೆ ಹೊತ್ತಿ ಉರಿಯುತ್ತಿದ್ದಂತೆ, ಅಗ್ನಿ ಜ್ವಾಲೆ ಪಕ್ಕದಲ್ಲಿ ರಿವರ್ಸ್‌ ತೆಗೆಯುತ್ತಿದ್ದ ಹಾಲಿನ ಟ್ಯಾಂಕರ್‌ಗೂ ವ್ಯಾಪಿಸಿದೆ. ಕ್ಷಣಾರ್ಧದಲ್ಲಿ ಲಾರಿ ಹೊತ್ತಿ ಉರಿದಿದ್ದು, ಚಾಲಕರು ಸಮಯಕ್ಕೆ ಸರಿಯಾಗಿ ಲಾರಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. …

Read More »

ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 5,000 ಕ್ಯೂಸೆಕ್‌ ಒಳಹರಿವು ಹೆಚ್ಚಳ

ಮಂಡ್ಯ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು (Rain), ಕೆಆರ್‌ಎಸ್ ಡ್ಯಾಂಗೆ  ಒಂದೇ ದಿನದಲ್ಲಿ 5,000 ಕ್ಯೂಸೆಕ್‌ ಒಳಹರಿವು ಹೆಚ್ಚಳವಾಗಿದೆ. ಇಂದು (ಜು.9) 12,694 ಕ್ಯೂಸೆಕ್ ಒಳಹರಿವು ಇದೆ. ಜು.8 ರಂದು 7,531 ಕ್ಯೂಸೆಕ್ ಒಳಹರಿವು ಇತ್ತು. ಭಾರೀ ಮಳೆಯಿಂದ ಒಂದೇ ದಿನದಲ್ಲಿ 5 ಸಾವಿರ ಕ್ಯೂಸೆಕ್ ಏರಿಕೆಯಾಗಿದೆ. ಇದರಿಂದ ನೀರಿನ ಮಟ್ಟ 85.66 ಅಡಿಗೆ ಏರಿಕೆಯಾಗಿದೆ. ಸದ್ಯ ಡ್ಯಾಂನಲ್ಲಿ 13.512 ಟಿಎಂಸಿ ನೀರು ಶೇಖರಣೆಯಾಗಿದೆ. ಇದೇ ರೀತಿ …

Read More »

ಕೇರಳ ಅವಳಿ ಸುರಂಗ ನಿರ್ಮಾಣ ಕಂಪನಿಗಿದೆ ಕರ್ನಾಟಕದ ನಂಟು

ವಯನಾಡು: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂತ್ರಸ್ತ ಪ್ರದೇಶದಲ್ಲಿ ಅವಳಿ ಸುರಂಗ  ನಿರ್ಮಿಸುತ್ತಿರುವ ದಿಲೀಪ್ ಬಿಲ್ಡ್ ಕಾನ್‌ಗೆ ಕರ್ನಾಟಕದ ನಂಟಿದೆ. ಜೊತೆಗೆ ಕರ್ನಾಟಕದಲ್ಲಿ ಈ ಸಂಸ್ಥೆ ಕೈಗೊಂಡ ಹಲವು ಯೋಜನೆಗಳು ಕೂಡಾ ವಿವಾದಕ್ಕೆ ತುತ್ತಾಗಿದ್ದವು. ಅಲ್ಲದೆ ಕೆಲವೊಂದು ಕೆಲಸಗಳಿಗೆ ಈ ಸಂಸ್ಥೆಗೆ ನಿರ್ಬಂಧ ಕೂಡಾ ಹೇರಲಾಗಿತ್ತು. ನಂಟು: ಮೈಸೂರು – ಬೆಂಗಳೂರು ನಡುವಿನ 117 ಕಿ.ಮೀ ಮಾರ್ಗದ ಎಕ್ಸ್‌ಪ್ರೆಸ್‌ ವೇ ಅನ್ನು 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಇದೇ ದಿಲೀಪ್ …

Read More »

ರಾಜ್ಯದಲ್ಲಿ ಮುಂಗಾರು ಆರ್ಭಟ ಜೋರು – ಮುಂದಿನ 3 ದಿನ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ

ಬೆಂಗಳೂರು: ಬರಗಾಲದಿಂದ ಬಸವಳಿದ್ದ ಕರ್ನಾಟಕದಲ್ಲಿ ಈಗ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮುಂದಿನ 3 ದಿನಗಳ ಕಾಲ ಕರಾವಳಿ  ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲಭಾಗಗಳಲ್ಲಿ ಭಾರೀ ಮಳೆ  ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಲತಾ ಮಾಹಿತಿ ನೀಡಿದ್ದು, ಕರಾವಳಿ ಜಿಲ್ಲೆಗಳು, ಹಾಸನ, ಶಿವಮೊಗ್ಗ, ಮಡಿಕೇರಿ ಮತ್ತು ಬೆಳಗಾವಿ ಭಾಗದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಈ ಭಾಗಗಳಿಗೆ ಇನ್ನೂ 2 …

Read More »