ಗೋಕಾಕ: ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ರವಿವಾರದಂದು 61 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ. ಗೋಕಾಕ ನಗರದಲ್ಲಿ 43, ಅಂಕಲಗಿ ಗ್ರಾಮದಲ್ಲಿ 4 , ದೂಪಧಾಳ 3, ಮಲ್ಲಾಪೂರ ಪಿ.ಜಿ2 , ಶಿಂಧಿಕೂರಬೇಟ, ಮದವಾಲ,ಮಲ್ಲಾಪೂರ, ಅವರಾಧಿ, ಕೌಜಲಗಿ, ತುಕ್ಕಾನಟ್ಟಿ, ಗಣೇಶವಾಡಿ, ಗೋಕಾಕ ಫಾಲ್ಸ, ಪಂಚನಾಯಕನಹಟ್ಟಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ.
Read More »ಎಸ್‌ಪಿಬಿ ಆರೋಗ್ಯ ಇನ್ನೂ ಗಂಭೀರ
ಚೆನ್ನೈ: ಕೋವಿಡ್-19 ಬಳಲುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಗಂಭೀರವಾಗಿದ್ದು, ಜೀವರಕ್ಷಕ ವ್ಯವಸ್ಥೆಯೊಂದಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದ ಆಗಸ್ಟ್ 5ರಂದು ಅವರನ್ನು ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಬಾಲಸುಬ್ರಹ್ಮಣ್ಯಂ ಅವರಿಗೆ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ. ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಯ ಸಹಾಯಕ ನಿರ್ದೇಶಕಿ ಡಾ.ಅನುರಾಧ ಭಾಸ್ಕರನ್ …
Read More »ಕೋವಿಡ್: 404 ಮಂದಿ ಗುಣಮುಖ
ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 358 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಐವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಇವರಲ್ಲಿ ನಾಲ್ವರು ಬೆಳಗಾವಿ ಹಾಗೂ ಒಬ್ಬರು ಗೋಕಾಕ ತಾಲ್ಲೂಕಿನವರು. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು’ ಎಂದು ಜಿಲ್ಲಾಡಳಿತ ತಿಳಿಸಿದೆ. ‘ಜಿಲ್ಲೆಯಲ್ಲಿ ಮಾದರಿ ಸಂಗ್ರಹ ಸಂಖ್ಯೆ 61,752ರ ಗಡಿ ದಾಟಿದೆ. ಈ ಪೈಕಿ 52,779 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 818 …
Read More »ಬೆಳಗಾವಿ | ಕುಸಿದ ಹಳೆ ಮನೆ: 12 ಮಂದಿ ರಕ್ಷಣೆ
ಬೆಳಗಾವಿ: ಇಲ್ಲಿನ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ ಹಳೆ ಮನೆಯೊಂದು ಪಕ್ಕದ ಮನೆಯ ಮೇಲೆ ದಿಢೀರ್ ಕುಸಿದು ಬಿದ್ದಿದ್ದರಿಂದ, ಒಳಗೆ ಸಿಲುಕಿದ್ದ ಬಾಲಕ ಮತ್ತು ಬಾಲಕಿ ಸೇರಿದಂತೆ 12 ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಿಂದಾಗಿ ಸುತ್ತಮುತ್ತಲಿನ ಮನೆಗಳವರು ಆತಂಕಗೊಂಡಿದ್ದರು. ಡಾ.ಕೋಟೂರು ಎನ್ನುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಹಳೆಯದಾಗಿದ್ದ ಆ ಕಟ್ಟಡ ಸತತ ಮಳೆಯಿಂದಾಗಿ ಮತ್ತಷ್ಟು ಶಿಥಿಲಗೊಂಡಿತ್ತು. ಅದಕ್ಕೆ ಹೊಂದಿಕೊಂಡಂತೆ ಇದ್ದ ಗೋಡೆಯು ನಗರಪಾಲಿಕೆ ಮಾಜಿ ಸದಸ್ಯೆ ಶಶಿಕಲಾ ಸುರೇಕರ ಅವರ ಮನೆಯ …
Read More »ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮಹೇಂದ್ರ ಸಿಂಗ್ ಧೋನಿ ನೀವೃತ್ತಿ
ಭಾರತದ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನೀವೃತ್ತಿಯಾಗಿದ್ದಾರೆ. 90 ಟೆಸ್ಟ್, 350 ಏಕದಿನ ಪಂದ್ಯಗಳು ಮತ್ತು 98 ಟಿ20 ಪಂದ್ಯಗಳನ್ನಾಡಿರುವ ಮಾಹೀ, ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಟೆಸ್ಟ್‌ನಲ್ಲೂ ಭಾರತ ನಂಬರ್ ಒನ್ ಱಂಕ್ ಆದಾಗ ಧೋನಿಯೇ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮೂರು ಬಾರಿ ಐಪಿಎಲ್ ಟ್ರೋಫಿ …
Read More »‘ಲಾಕ್‌ಡೌನ್‌ನಿಂದ ಜನರ ಪ್ರಾಣ ರಕ್ಷಣೆ’
ಸವದತ್ತಿ: ‘ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಾಕ್‌ಡೌನ್ ಘೋಷಿಸಿದ್ದರಿಂದಾಗಿ ಜನರ ಜೀವ ರಕ್ಷಿಸಲು ಸಾಧ್ಯವಾಯಿತು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು. ತಾಲ್ಲೂಕು ಆಡಳಿತದಿಂದ ಇಲ್ಲಿನ ಎಸ್‌ಕೆ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಲಾಕ್‌ಡೌನ್‌ದಿಂದ ಜನಸಾಮಾನ್ಯರು ಸೇರಿದಂತೆ ಸರ್ಕಾರದ ರಾಜಸ್ವ ಸಂಗ್ರಹಕ್ಕೂ ತೊಂದರೆಯಾಗಿದೆ. ಆದರೂ ಸರ್ಕಾರಗಳು ಎದೆಗುಂದಿಲ್ಲ. ನಿರಂತರ ಸಭೆ ನಡೆಸಿ ಕೋವಿಡ್ ಹತೋಟಿಯಲ್ಲಿಡಲಾಗಿತ್ತು. ದುರ್ದೈವದಿಂದ ಸಮುದಾಯಕ್ಕೆ ಹರಡಿದ್ದು …
Read More »ವರ್ಷ ಕಳೆದರೂ ತಪ್ಪಿಲ್ಲ ಬೆಳಗಾವಿ ಪ್ರವಾಹ ಸಂತ್ರಸ್ತರ ಸಂಕಟ!
ಬೆಳಗಾವಿ: ಪ್ರವಾಹಕ್ಕೆ ನಲುಗಿ ಒಂದು ವರ್ಷ ಕಳೆದರೂ ಜಿಲ್ಲೆಯ ಎಲ್ಲ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಪರಿಹಾರ ಕೊಡುವಂತೆ ಒತ್ತಾಯಿಸಿ, ಈಗಲೂ ಅಲ್ಲೊಂದು, ಇಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ಸೇರಿದಂತೆ ಬಹುತೇಕ ಎಲ್ಲ ನದಿಗಳಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಇದರ ಜೊತೆ ಅತಿವೃಷ್ಟಿಯೂ ಕೂಡಿಕೊಂಡು ಅಪಾರ ಹಾನಿಯನ್ನುಂಟು ಮಾಡಿತ್ತು. ಬೆಳಗಾವಿ, ಖಾನಾಪುರ, ಚಿಕ್ಕೋಡಿ, ಅಥಣಿ, ಗೋಕಾಕ, ರಾಮದುರ್ಗ, ಸವದತ್ತಿ, ರಾಯಬಾಗ, ಹುಕ್ಕೇರಿ …
Read More »ಕೃಷಿ ಇಲಾಖೆಯಿಂದ ಮೊಬೈಲ್ ಆಯಪ್ | ಬೆಳೆ ಸಮೀಕ್ಷೆ; ರೈತರಿಗೇ ಜವಾಬ್ದಾರಿ
ಚಾಮರಾಜನಗರ: ಕೃಷಿ ಇಲಾಖೆಯು 2020-21ನೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡುವ ಜಾವಾಬ್ದಾರಿಯನ್ನು ರೈತರಿಗೇ ನೀಡಿದೆ. ಇದೇ ಉದ್ದೇಶಕ್ಕಾಗಿ ಕೃಷಿ ಇಲಾಖೆಯು ಬೆಳೆ ‘ಸಮೀಕ್ಷೆ ಆಯಪ್ (farmers crop survey app 2020-21) ಅನ್ನು ಅಭಿವೃದ್ಧಿ ಪಡಿಸಿದ್ದು, ಆಯಂಡ್ರಾಯ್ಡ್ ಸ್ಮಾರ್ಟ್‌ಗಳಲ್ಲಿ ಲಭ್ಯವಿದೆ. ಈ ಯೋಜನೆ ಅಡಿಯಲ್ಲಿ ರೈತರು, ಈ ಆಯಪ್ ಮೂಲಕ ತಾವು ಬೆಳೆದಿರುವ ಬೆಳೆಗಳ ಮಾಹಿತಿ, ಚಿತ್ರಗಳನ್ನು ಅಪ್‌ಲೋಡ್ ಮಾಡಬೇಕು. ಆಗಸ್ಟ್ 10ರಂದು ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಸಮೀಕ್ಷೆ …
Read More »ಚಾಮರಾಜನಗರ | ಕೊರೊನಾ ಸೈನಿಕ ಎಎಸ್‌ಐ ಸಾವು
ಚಾಮರಾಜನಗರ: ಜಿಲ್ಲೆಯ ಠಾಣೆಯೊಂದರ ಎಎಸ್‌ಐಯೊಬ್ಬರು ಸೇರಿದಂತೆ ಇಬ್ಬರು ಕೋವಿಡ್ ಸೋಂಕಿತರು ಗುರುವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೈನಿಕರೊಬ್ಬರು ಮೃತಪಟ್ಟ ಮೊದಲ ಪ್ರಕರಣ ಇದು. ಗುರುವಾರ ವರದಿಯಾದ ಎರಡೂ ಸಾವಿನ ಪ್ರಕರಣಗಳನ್ನು ಜಿಲ್ಲಾಡಳಿತವು ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟವರ ಪಟ್ಟಿಗೆ ಸೇರಿಸಿದೆ. 56 ವರ್ಷದ ಎಎಸ್‌ಐ ಅವರು (ರೋಗಿಸಂಖ್ಯೆ 1,35,728) ಜುಲೈ 30ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಟೈಫಾಯ್ಡ್‌ನಿಂದಲೂ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಐಸಿಯುನಲ್ಲಿ …
Read More »ಬೆಳಗಾವಿ | 288 ಮಂದಿಗೆ ಕೋವಿಡ್ ದೃಢ
ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 288 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಬಿಮ್ಸ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹುಕ್ಕೇರಿ ತಾಲ್ಲೂಕಿನ ಮೂವರು, ರಾಯಬಾಗದ ಒಬ್ಬರು ಹಾಗೂ ಬೆಳಗಾವಿ ತಾಲ್ಲೂಕಿನ ಇಬ್ಬರು ಸೇರಿ ಆರು ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಇತ್ತು ಎಂದು ಜಿಲ್ಲಾಡಳಿತ ತಿಳಿಸಿದೆ. 140 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. …
Read More »
Laxmi News 24×7