ಹುಬ್ಬಳ್ಳಿ : ಬಿಜೆಪಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ಕ್ಷೇತ್ರದ ಅಭ್ಯರ್ಥಿಯಾಗಿ ಅನಿವಾರ್ಯವಾದರೆ, ನನಗೆ ಅವರಿಂದ ತುಳಿತಕ್ಕೆ ಒಳಗಾದ ಸಮಾಜಗಳ ಬೆನ್ನಿಗೆ ನಿಲ್ಲುವುದು ನನಗೆ ಅನಿವಾರ್ಯ. ನನ್ನ ನಿಲುವು ಸ್ಪಷ್ಟವಾಗಿದ್ದು, ಏಪ್ರಿಲ್ 2 ರಂದು ನಮ್ಮ ಭಕ್ತರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಾಲೆಹೊಸೂರು-ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿ ಸ್ಪಷ್ಟಪಡಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯನ್ನಾಗಿ ಜೋಶಿಯವರನ್ನು ಬದಲಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೆವು. …
Read More »BJPಯಲ್ಲಿ ಮುನಿಸು, ಅಸಮಾಧಾನ ಇದೆ : ಸಚಿವ ಜೋಶಿ
ಧಾರವಾಡ : ಬಿಜೆಪಿ ಪಕ್ಷದಲ್ಲಿ ಭಿನ್ನಮತವಿಲ್ಲದ ಕಾರಣ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗುರುವಾರ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕುರಿತಂತೆ ಒಂದಿಷ್ಟು ಮುನಿಸು, ಅಸಮಾಧಾನ ಇರಬಹುದು ಹೊರತು ಭಿನ್ನಮತವಿಲ್ಲ. ಹೀಗಾಗಿ ಸಂಗಣ್ಣ ಕರಡಿ ಸೇರಿದಂತೆ ಯಾರೂ ಬಿಜೆಪಿ ಪಕ್ಷವನ್ನು ತೊರೆದು ಹೋಗಲಾರರು ಎಂದರು. ಮಾಧುಸ್ವಾಮಿ ಜತೆಗೆ ಬಿ.ಎಸ್.ಯಡಿಯೂರಪ್ಪನವರು ಮಾತನಾಡುತ್ತಿದ್ದು, ಈಶ್ವರಪ್ಪ ಜತೆಗೂ ರಾಷ್ಟ್ರೀಯ ನಾಯಕರೇ ಮಾತನಾಡಿದ್ದಾರೆ. ಉಳಿದಂತೆ ಎಲ್ಲವೂ …
Read More »ಜಗದೀಶ್ ಶೆಟ್ಟರ್ಗೆ ಲೋಕಸಭಾ ಟಿಕೆಟ್ ಕನ್ಫರ್ಮ್: ಖಚಿತಪಡಿಸಿದ ಸಹೋದರ ಪ್ರದೀಪ್ ಶೆಟ್ಟರ್
ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆ ಜಗದೀಶ್ ಶೆಟ್ಟರ್ (Jagadish Shettar) ಗೊಂದಲಕ್ಕೀಡಾಗಿದ್ದರು. ಬಳಿಕ ಅವರಿಗೆ ಬೆಳಗಾವಿ (Belagavi) ಕ್ಷೇತ್ರದ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಇದೀಗ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಟಿಕೆಟ್ ಸಿಕ್ಕಿರುವುದನ್ನ ಖಚಿತಪಡಿಸಿದ್ದಾರೆ. ಹುಬ್ಬಳ್ಳಿ,ಮಾ.21: ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar)ಗೆ ಟಿಕೆಟ್ ಕನ್ಫರ್ಮ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಟಿಕೆಟ್ ಫೈನಲ್ …
Read More »ಪಕ್ಷದಿಂದ ಟಿಕೆಟ್ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್
ಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಟಿಕೆಟ್ ತಪ್ಪಿಸುವ ಷಡ್ಯಂತ್ರ ನಡೆದಿತ್ತುಎಂದು ನನಗೆ ಅನಿಸಿಲ್ಲ. ಬೆಳಗಾವಿಯ ಮುಖಂಡರಾದ ಅಭಯ ಪಾಟೀಲ, ಪ್ರಭಾಕರ ಕೋರೆ, ಅನಿಲ ಬೆನಕೆ, ಈರಣ್ಣ ಕಡಾಡಿ ಇನ್ನಿತರ ಪ್ರಮುಖರ ಜತೆ ಮಾತುಕತೆ ನಡೆಸಿದ್ದು, ಎಲ್ಲರು ಸೇರಿ ಚುನಾವಣೆ ನಡೆಸೋಣ …
Read More »ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತ್ಯು. ನಾಲ್ವರಿಗೆ ಗಾಯ
ಧಾರವಾಡ : ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಕಲ್ಲೆ ನಡೆದಿದೆ. ಮಹಾದೇವಿ ವಗೆಣ್ಣವರ (30) ಎಂಬ ಮಹಿಳೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿ. ಉಳಿದಂತೆ ಸುರೇಶ ವಗೆಣ್ಣವರ, ಶ್ರೀಧರ ವಗೆಣ್ಣವರ, ಚಿನ್ನಪ್ಪ ವಗೆಣ್ಣವರ ಹಾಗೂ ಗಂಗವ್ವ ವಗೆಣ್ಣವರ ಎಂಬುವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಗ್ಯಾಸ್ ಲಿಕೇಜ್ ಆಗಿತ್ತು. ಏಕಾಏಕಿ ಸ್ಪಾರ್ಕ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಮನೆ ತುಂಬ …
Read More »ಮೋದಿಗೆ ಬೈಯಲು ಹೈಕಮಾಂಡ್ ಆರ್ಡರ್ ಆಗಿದೆ”: ಸಂತೋಷ್ ಲಾಡ್ ಹೇಳಿದ್ದಾಗಿ ಪ್ರಲ್ಹಾದ್ ಜೋಶಿ ಹೇಳಿಕೆ
ಹುಬ್ಬಳ್ಳಿ, ಮಾ.19: ಪ್ರಧಾನಿನರೇಂದ್ರ ಮೋದಿ(Narendra Modi) ಹಾಗೂ ತಮ್ಮ ವಿರುದ್ಧ ನಿತಂತರವಾಗಿ ಟೀಕಿಸುತ್ತಿರುವ ಸಚಿವ ಸಂತೋಷ್ ಲಾಡ್ (Santosh Lad) ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಾಂಗ್ ಕೊಟ್ಟಿರುವ ವಿಡಿಯೋ ವೈರಲ್ (Viral Video) ಆಗುತ್ತಿದೆ. ಮೋದಿ ಅವರಿಗೆ ಯಾಕೆ ಬೈಯುತ್ತಿದ್ದೀಯಾ ಎಂದು ಕೇಳಿದಾಗ, ಸಚಿವ ಸ್ಥಾನ ಉಳಿಸಿಕೊಳ್ಳಲು ಬೈಯುತ್ತಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾಗಿ ಜೋಶಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ವಿಮಾನದಲ್ಲಿ ನಾನು ಮತ್ತು ಸಂತೋಷ್ ಲಾಡ್ ಒಟ್ಟಿಗೆ …
Read More »ವಿಶ್ವ ಚಾಂಪಿಯನ್‌ಶಿಪ್‌ಗೆ ವಿರೂಪಾಕ್ಷಗೌಡ ಪಾಟೀಲ ಅರ್ಹತೆ
ಹುಬ್ಬಳ್ಳಿ: ಇಲ್ಲಿನ ಅಕ್ಕಿಹೊಂಡದ ತಂಬದ ಓಣಿ ನಿವಾಸಿ ವಿರೂಪಾಕ್ಷಗೌಡ ಪಾಟೀಲ ಅವರು 44ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2024ರ 80 ವರ್ಷ ಮೇಲ್ಪಟ್ಟವರ 800 ಮೀಟರ್ ಹಾಗೂ 1,500 ಮೀಟರ್ ಓಟದಲ್ಲಿ ತಲಾ ಒಂದು ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಫೆಬ್ರುವರಿ 13ರಿಂದ 17ರವರೆಗೆ ಪುಣೆಯಲ್ಲಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆದಿತ್ತು ಎಂದು ಪ್ರಕಟಣೆ ತಿಳಿಸಿದೆ.
Read More »ಹುಬ್ಬಳ್ಳಿ: ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ
ಹುಬ್ಬಳ್ಳಿ: ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಕಾರಣ ಇಲ್ಲಿನ ಎಸ್‌ಎಸ್‌ಎಸ್ ರೈಲು ನಿಲ್ದಾಣದಿಂದ ಅಹಮದಾಬಾದ್ ನಿಲ್ದಾಣದ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ (07311/ 07312) ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 24ರಂದು 07311 ಸಂಖ್ಯೆಯ ರೈಲು ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 7.30ಕ್ಕೆ ಹೊರಟು, ಮರುದಿನ ಸಂಜೆ 7.20ಕ್ಕೆ ಅಹಮದಾಬಾದ್ ನಿಲ್ದಾಣ ತಲುಪಲಿದೆ. ಮಾರ್ಚ್ 25ರಂದು 07312 ಸಂಖ್ಯೆಯ ರೈಲು ಅಹಮದಾಬಾದ್ ನಿಲ್ದಾಣದಿಂದ ರಾತ್ರಿ …
Read More »ಬೆಳಗಾವಿಯಿಂದ ಸ್ಪರ್ಧೆ ಖಚಿತ: ಅಧಿಕೃತ ಘೋಷಣೆಯಷ್ಟೇ ಬಾಕಿ- ಶೆಟ್ಟರ್?
ಹುಬ್ಬಳ್ಳಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಭೇಟಿಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ. ಟಿಕೆಟ್ ನನಗೆ ನೀಡಲು ತೀರ್ಮಾನವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ’ ಎಂದು ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಳಗಾವಿಯಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದರು. ಇದಲ್ಲದೇ, ಬೆಳಗಾವಿ ನಾಯಕರ ಜೊತೆ ಚರ್ಚಿಸಿದ ನಂತರ ಸ್ಪರ್ಧಿಸಲು …
Read More »ಸಮುದ್ರದಲ್ಲಿ ಮೋದಿ ನವಿಲುಗರಿ ನೆಟ್ಟರೆ ಚಿಗುರುತ್ತಾ: ಖರ್ಗೆ
ಹುಬ್ಬಳ್ಳಿ, ಫೆಬ್ರವರಿ 27: ಪ್ರಧಾನಿ ನರೇಂದ್ರ ಮೋದಿ (Narendra Modi)ಸಮುದ್ರದ ಆಳದಲ್ಲಿ ನವಿಲುಗರಿ ನೆಟ್ಟರೆ ಚಿಗುರುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಮಜುನ ಖರ್ಗೆ (Mallikarjun Kharge) ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ (Jagadish Shettar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಅರ್ಥವೇ ಇಲ್ಲ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಇಡೀ ದೇಶ ಆರಾಧನೆ ಮಾಡುವ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ …
Read More »