ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸವಾಲು ಎಸೆದಿದ್ದಾರೆ. ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಕೊನೆಗೂ ಮೌನ ಮುರಿದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು …
Read More »ನಾನು ಪ್ರತಿನಿತ್ಯ ಗೋಮೂತ್ರ ಸೇವಿಸುತ್ತೇನೆ: ಅಕ್ಷಯ್ ಕುಮಾರ್
ಮುಂಬೈ: ನಾನು ಪ್ರತಿ ನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂದು ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಹೇಳಿದ್ದಾರೆ.ವೈಲ್ಡ್ ಮ್ಯಾನ್ ಎಂದೇ ಖ್ಯಾತರಾಗಿರುವ ಬಿಯರ್ ಗ್ರಿಲ್ಸ್ ಹಾಗೂ ಹುಮಾ ಖುರೇಶಿ ನಡೆಸಿದ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಭಾಗವಹಿಸಿದ ವೇಳೆ ಸ್ವತಃ ಅಕ್ಷಯ್ ಕುಮಾರ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಆಯುರ್ವೇದ ಕಾರಣಗಳಿಂದಾಗಿ ಕಾಡಿನಲ್ಲಿ ಸ್ಟಂಟ್ ಮಾಡುವುದು ನನಗೆ ಸಮಸ್ಯೆ ಆಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ಪ್ರತಿ ನಿತ್ಯ ಗೋಮೂತ್ರವನ್ನು ಸೇವಿಸುತ್ತೇನೆ …
Read More »ಮೈಸೂರಿನ ಪ್ರತಿಷ್ಠಿತ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ: ಮುತಾಲಿಕ್
ಮೈಸೂರು: ಜಿಲ್ಲೆಯ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಸಿಗುತ್ತದೆ. ಮೈಸೂರಿನ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದ್ರೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಹೇಳಿದರು. ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್‍ಗಳ …
Read More »ಇಡಿ ಅಧಿಕಾರಿಗಳ ಶಾಕ್ಆನಂದ್ ಅಪ್ಪುಗೋಳಆಸ್ತಿ ವಶಕ್ಕೆ
ನವದೆಹಲಿ: ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ನಿರ್ಮಾಪಕ ಆನಂದ್ ಅಪ್ಪುಗೋಳಗೆ ನೀಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿಯಲ್ಲಿ ಆನಂದ್ ಅಪ್ಪುಗೋಳ ಒಡೆತನದಲ್ಲಿರುವ ಹನುಮಾನ್ ನಗರದ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿರುವ ಖಾಲಿ ನಿವೇಶನ, ಬಿ.ಕೆ ಬಾಳೆಕುಂದ್ರಿಯಲ್ಲಿನ ಮನೆ ಹಾಗೂ ನೆಹರು ನಗರದಲ್ಲಿರುವ ಕಚೇರಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿ ಒಟ್ಟು 31.35 …
Read More »ಸಿಸಿಬಿ ತನಿಖೆಯಿಂದ ಕೆಲವರ ಬಣ್ಣ ಬಯಲಾಗಿದೆ. ಸಧ್ಯದಲ್ಲಿಯೇ ಎಲ್ಲರ ಬಣ್ಣ ಬಯಲಾಗುತ್ತೆ:B.S.Y.
ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಸಿಸಿಬಿ ತನಿಖೆ ನಡೆಸುತ್ತಿದೆ. ಕೆಲವರ ಬಣ್ಣ ಬಯಲಾಗಿದೆ. ಸದ್ಯದರಲ್ಲಿಯೇ ಪ್ರಕರಣದಲ್ಲಿ ಭಾಗಿಯಾಗಿದ ಎಲ್ಲರ ಬಣ್ಣ ಬಯಲಾಗುತ್ತಿದೆ ಎಂದಿದ್ದಾರೆ. ಡ್ರಗ್ಸ್ ಪ್ರಕರಣವನ್ನ ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಹಿಂದಿನ ಸರ್ಕಾರದಂತೆ ನಾವು ನಿರ್ಲಕ್ಷ್ಯ ಮಾಡುವುದಿಲ್ಲ. ಎಂತಹ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ. ನ್ಯಾಯಾಯುತವಾಗಿ ತನಿಖೆ ನಡೆಸುತ್ತೇವೆ. ಸಿಸಿಬಿ ತನಿಖೆಯಿಂದ ಕೆಲವರ ಬಣ್ಣ ಬಯಲಾಗಿದೆ. ಸಧ್ಯದಲ್ಲಿಯೇ ಎಲ್ಲರ ಬಣ್ಣ ಬಯಲಾಗುತ್ತೆ …
Read More »ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಬಾಲಕಿಯೋರ್ವಳು ಭೇಟಿ ಮಾಡಿ ಬೇಗ ಶಾಲೆ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ
ಧಾರವಾಡ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಬಾಲಕಿಯೋರ್ವಳು ಭೇಟಿ ಮಾಡಿ ಬೇಗ ಶಾಲೆ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ ಧಾರವಾಡದ ನಿಸರ್ಗ ಲೇಔಟ್‍ಗೆ ಆಗಮಿಸಿದ್ದ ಸಚಿವರಿಗೆ ಸೈಕಲ್‍ನಲ್ಲಿ ಬಂದು ಭೇಟಿ ಮಾಡಿದ ಬಾಲಕಿ ಶ್ರದ್ಧಾ, ಶಾಲೆ ಬೇಗ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ. ಈ ವೇಳೆ ಸಚಿವರು ನಿನ್ನ ನೋಡಿ ನಂಗೆ ಖುಷಿಯಾಯ್ತು ಎಂದರು ನಮಗೆ ಎಲ್ಲಿಯೂ ಶ್ರದ್ಧೆ ಸಿಗುವುದಿಲ್ಲ. ಆದರೆ ಶ್ರದ್ಧಾ ಭೇಟಿಯಾಗಿ ಖುಷಿಯಾದೆ. ಶಾಲೆ ಆರಂಭಿಸಿ ಕೊರೊನಾವನ್ನೇ …
Read More »ಅತಿವೃಷ್ಟಿಯಿಂದ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
ಸವದತ್ತಿ: ‘ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಕಂಗಾಲಾಗಿರುವ ರೈತರಿಗೆ ಕೂಡಲೇ ಸಮರ್ಪಕ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ರೈತ ಸಂಘದವರು ಉಪ ತಹಶೀಲ್ದಾರ್ ಆರ್.ಎಸ್. ನೇಸರಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ‘ಬರ, ನೆರೆ, ಅತಿವೃಷ್ಟಿ ಹೀಗೆ ಒಂದಿಲ್ಲೊಂದು ತೊಂದರೆಗೆ ರೈತರು ಪ್ರತಿ ವರ್ಷವೂ ಸಿಲುಕುತ್ತಿದ್ದೇವೆ. ಕಷ್ಟಪಟ್ಟು ಬೆಳೆದ ಬೆಳೆ ನಮ್ಮ ಕೈ ಸೇರುತ್ತಿಲ್ಲ. ಈ ಬಾರಿ ಅತಿವೃಷ್ಟಿಯಿಂದ ಹೆಸರು, ಮೆಕ್ಕೆಜೋಳ, …
Read More »ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ
ರಾಯಬಾಗ : ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ ಮೂರ್ನಾಲ್ಕು ವರ್ಷಗಳಿಂದ ಶಾಲೆ ಶೀತಿಲಗೊಂಡಿದ್ದು ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಶಾಸಕರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಕ್ಯಾರೆ ಎನ್ನದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶೀತಲ ಗೊಂಡಿದ್ದು ಸುಮಾರು ಮೂರ್ನಾಲ್ಕು ವರ್ಷಗಳಿಂದ ಹಂಚುಗಳು ಒಡೆದ …
Read More »ಕೆಪಿಎಸ್‌ಸಿಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ
ಬೆಂಗಳೂರು, : ಕರ್ನಾಟಕ ಲೋಕ ಸೇವಾ ಆಯೋಗವು ವಿವಿಧ ಇಲಾಖೆಯ ಹುದ್ದೆಗಳ ಪೂರ್ವಭಾವಿ ಹಾಗೂ ಇಲಾಖಾ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದೇ ತಿಂಗಳ 17ರಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರ 54 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಬೆಂಗಳೂರು ಕೇಂದ್ರ ಹಾಗೂ ಆಯೋಗದ ವಿಭಾಗೀಯ ಕೇಂದ್ರಗಳಾದ …
Read More »ಅಕ್ಟೋಬರ್ ಅಂತ್ಯಕ್ಕೆ ಕರೊನಾ ಲಸಿಕೆ; ಸಾಧ್ಯತೆ ತಳ್ಳಿ ಹಾಕಲಾಗದು; ಹೀಗಿದೆ ತಜ್ಞರ ವಿಶ್ಲೇಷಣೆ
ನವದೆಹಲಿ: ಆಕ್ಸ್ಫರ್ಡ್ ವಿವಿ ಹಾಗೂ ಬ್ರಿಟನ್ನ ಆಸ್ಟ್ರಾಜೆನೆಕಾ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸದ್ಯಕ್ಕೆ ಸ್ಥಗಿತಗೊಂಡಿದೆ. ಸಂಶೋಧನೆಯಲ್ಲಿ ಮೂಂಚೂಣಿಯಲ್ಲಿದ್ದ ಕಂಪನಿ ಮೂರನೇ ಹಂತದ ಪರೀಕ್ಷೆಯಲ್ಲಿ ತೊಡಗಿದೆ. ಇದು ಯಶಸ್ವಿಯಾಗಿದ್ದರೆ, ಅಕ್ಟೋಬರ್ ಅಂತ್ಯಕ್ಕೆಲ್ಲ ಲಸಿಕೆ ದೊರೆಯುವ ಬಗ್ಗೆ ಭಾರಿ ನಿರೀಕ್ಷೆ ಹೊಂದಲಾಗಿತ್ತು. ಆಕ್ಸ್ಫರ್ಡ್ ಲಸಿಕೆ ಪಡೆದ ವ್ಯಕ್ತಿಗೆ ಗಂಭೀರ ಅಡ್ಡ ಪರಿಣಾಮ ಉಂಟಾದ ಬೆನ್ನಲ್ಲೇ, ಔಷಧ ತಯಾರಿಕೆಯಲ್ಲಿ ಯಾವುದೇ ತರಾತುರಿಯಿಲ್ಲ. ಎಲ್ಲ ಮಾನದಂಡಗಳನ್ನು ಪೂರೈಸಿದ ಬಳಿಕವಷ್ಟೇ ಲಸಿಕೆಗೆ ಮಾನ್ಯತೆ …
Read More »
Laxmi News 24×7