Breaking News

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಬಾಲಕಿಯೋರ್ವಳು ಭೇಟಿ ಮಾಡಿ ಬೇಗ ಶಾಲೆ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ

Spread the love

ಧಾರವಾಡ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಬಾಲಕಿಯೋರ್ವಳು ಭೇಟಿ ಮಾಡಿ ಬೇಗ ಶಾಲೆ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ

ಧಾರವಾಡದ ನಿಸರ್ಗ ಲೇಔಟ್‍ಗೆ ಆಗಮಿಸಿದ್ದ ಸಚಿವರಿಗೆ ಸೈಕಲ್‍ನಲ್ಲಿ ಬಂದು ಭೇಟಿ ಮಾಡಿದ ಬಾಲಕಿ ಶ್ರದ್ಧಾ, ಶಾಲೆ ಬೇಗ ಆರಂಭಿಸಿ ಎಂದು ಕೇಳಿಕೊಂಡಿದ್ದಾಳೆ. ಈ ವೇಳೆ ಸಚಿವರು ನಿನ್ನ ನೋಡಿ ನಂಗೆ ಖುಷಿಯಾಯ್ತು ಎಂದರು

 

ನಮಗೆ ಎಲ್ಲಿಯೂ ಶ್ರದ್ಧೆ ಸಿಗುವುದಿಲ್ಲ. ಆದರೆ ಶ್ರದ್ಧಾ ಭೇಟಿಯಾಗಿ ಖುಷಿಯಾದೆ. ಶಾಲೆ ಆರಂಭಿಸಿ ಕೊರೊನಾವನ್ನೇ ಕೇಳಿ ಬಿಡೋಣ ಎಂದ ಸಚಿವ, ಅಲ್ಲೇ ಇದ್ದ ಪ್ರಜ್ವಲ್ ಎಂಬ ವಿದ್ಯಾರ್ಥಿಯನ್ನು ಕೂಡ ಮಾಡತನಾಡಿಸಿದರು.

ಶಾಲೆ ಯಾಕೆ ಆರಂಭ ಮಾಡಬೇಕು ಎಂದು ಹೇಳಿದ ಅವರು, ಸ್ಕೂಲ್ ರಜಾ ಇದ್ದಿದ್ದಕ್ಕೆ ಮಜಾನಾ ಎಂದರು. ಮನೆಯಲ್ಲೇ ಓದಬಹುದಲ್ಲ ಎಂದು ಸಚಿವರು ಪ್ರಶ್ನಿಸಿದ್ದಕ್ಕೆ, ಬಾಲಕ ಗೆಳೆಯರು ಬೇಕು ಎಂದ. ಇದಕ್ಕೆ ನಕ್ಕ ಸಚಿವರು, ಫ್ರೆಂಡ್ಸ್ ಬೇಕಾ ಎಂದು ಬಾಲಕನ ತಲೆ ಮೇಲೆ ಕೈಯಾಡಿಸಿದರು


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ