ಶಿವಮೊಗ್ಗ : ಜಿಲ್ಲೆಯ ಸಾಗರ ಪೊಲೀಸ್ ಠಾಣೆಯ ಸಿಪಿಐ ಅಶೋಕ್ ಕುಮಾರ್ ಎಂಬುವವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಕಳೆದ ನಾಲ್ಕು ವರ್ಷದಿಂದ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಸಂತ್ರಸ್ತೆ ಪ್ರಕರಣವೊಂದರ ಸಲುವಾಗಿ ದೂರು ಸಲ್ಲಿಸಲು ಠಾಣೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಿಪಿಐ ಅವರ ಮೊಬೈಲ್ ನಂಬರ್ ಪಡೆದಿದ್ದಾರೆ. ಆ ನಂತರ ಅವರ ಪರಿಚಯ ಮಾಡಿಕೊಂಡಿದ್ದಾರೆ. ನಂತರ ಸಲುಗೆ ಬೆಳೆಸಿದ್ದಾರೆ ಎಂದು …
Read More »ರಾಜ್ಯದಲ್ಲಿ ‘ಭ್ರಷ್ಟ’ ಮತ್ತು ‘ಪ್ರಾಮಾಣಿಕ ರಾಜಕಾರಣಿಗಳು’ ಎಂಬ ಎರಡು ಗುಂಪುಗಳಿವೆ ಎಂದ ಯತ್ನಾಳ್
ಹಾವೇರಿ: ರಾಜ್ಯದಲ್ಲಿ ಕೋವಿಡ್ ಚರ್ಚೆಗಿಂತಲೂ ಹೆಚ್ಚಾಗಿ ಸಿಡಿ ಕೇಸ್ ಗೆ ಸಂಬಂಧಿಸಿದ ಚರ್ಚೆ ಜೋರಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಸೆಕ್ಸ್ ಸಿಡಿಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಈಗಾಗಲೇ ಮಹಾನಾಯಕನ ಹೆಸರು ಬಾಯಿಬಿಟ್ಟಿದ್ದಾಳೆ. ಇದರ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ‘ಕಾಂಗ್ರೆಸ್ ಮಹಾನಾಯಕ’ ಮತ್ತು ‘ಬಿಜೆಪಿಯ ಯುವರಾಜ’ ಇವರ ಬಳಿ ಸಿ.ಡಿ. ತಯಾರಿಸುವ ಕಾರ್ಖಾನೆಗಳಿವೆ. ಇವರು ಸಿ.ಡಿ.ಗಳನ್ನೂ ಖರೀದಿ ಮಾಡುತ್ತಾರೆ. ಈಗಾಗಲೇ ಕೆಲವೇ ದಿನಗಳಲ್ಲಿ ‘ಬಿಜೆಪಿ …
Read More »ಡಿ.ಕೆ. ಶಿವಕುಮಾರ್ ಮಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ :ಸಿಡಿ ಯುವತಿ ಪೋಷಕರು
ಬೆಳಗಾವಿ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ಯುವತಿ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗ್ತಿದೆ. ಡಿ.ಕೆ. ಶಿವಕುಮಾರ್ ಮಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅವರು ಬೆಂಗಳೂರಿಂದ ಹೊರಟು ತಡರಾತ್ರಿ 3 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳ ಜೊತೆ ನೇರವಾಗಿ ಎಪಿಎಂಸಿ ಠಾಣೆಗೆ ಆಗಮಿಸಿದ್ದಾರೆ. ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ …
Read More »ಡಿಕೆಎಸ್ ವಿರುದ್ಧದ ಆರೋಪದ ಗಂಭೀರ ತನಿಖೆ ನಡೆಸಬೇಕು- ಪ್ರಹ್ಲಾದ್ ಜೋಶಿ
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಿಡಿ ಪ್ರಕರಣದ ಸಂತ್ರಸ್ತೆಯ ಯುವತಿಯ ಪೋಷಕರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು.. ಯುವತಿಯ ಪೋಷಕರು ಡಿ.ಕೆ. ಶಿವಕುಮಾರ್ ಮೇಲೆ ಮಾಡಿರುವ ಆರೋಪ ವಿಚಾರ ಗಂಭೀರದುದ್ದು. ಈಗಾಗಲೇ ಸಿಡಿ ವಿಚಾರವಾಗಿ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಿಗೆ ಸಂಪೂರ್ಣವಾಗಿ ಅಧಿಕಾರ ನೀಡಲಾಗಿದೆ. ಎಸ್ ಐ ಟಿ ಡಿ.ಕೆ. ಶಿವಕುಮಾರ್ ವಿರುದ್ಧ …
Read More »ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸದಿದ್ರೆ 16 ರಾಜ್ಯಗಳ ವಿದ್ಯುತ್ ಸಂಪರ್ಕ ಕಟ್- ರಾಕೇಶ್ ಟಿಕಾಯತ್
ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 16 ರಾಜ್ಯಗಳ ವಿದ್ಯುತ್ ಸಂಪರ್ಕವನ್ನೇ ಕಟ್ ಮಾಡ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ನಡೆಯುತ್ತಿದ್ದ ಮಹಾಪಂಚಾಯತ್ನಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ರಾಕೇಶ್ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. ಮುಂದುವರೆದು ಕೇಂದ್ರದಲ್ಲಿ ಸರ್ಕಾರವೇ ಇಲ್ಲ. ವ್ಯಾಪಾರಿಗಳು ದೇಶವನ್ನ ಆಳುತ್ತಿದ್ದಾರೆ. ಅವರು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿದ್ದಾರೆ. ದೇಶದ ಜನರು ಅವರನ್ನ ಸರ್ಕಾರದಿಂದ …
Read More »40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ: ಹಳಸಿದ ಆಹಾರ ಸೇವನೆಯಿಂದ ವಾಂತಿಭೇದಿ ಶಂಕೆ
ಗುಂಡ್ಲುಪೇಟೆ/ಚಾಮರಾಜನಗರ: ತಾಲ್ಲೂಕಿನ ಚೆನ್ನವಡೆಯನಪುರದಲ್ಲಿ ಶುಕ್ರವಾರ 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿರುವುದು ಕಲುಷಿತ ನೀರು ಸೇವನೆಯಿಂದಲ್ಲ, ಹಳಸಿದ ಆಹಾರ ಸೇವನೆಯಿಂದ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ನಾಗಯ್ಯ ಅವರ ನೂತನ ಮನೆಯ ಗೃಹ ಪ್ರವೇಶ ಸಮಾರಂಭ ಮಾ.25ರಂದು ಗುರುವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಸುಮಾರು 300 ಜನ ಊಟ ಮಾಡಿದ್ದಾರೆ. ಆದರೆ ರಾತ್ರಿ ವೇಳೆ ಊಟ ಮಾಡಿದ 40 ಜನರಿಗೆ …
Read More »ಪೊಲೀಸರೆದುರೇ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ ರೈತರ ಗುಂಪು!
ಮುಕ್ತ್ಸಾರ್: ಉದ್ರಿಕ್ತ ರೈತರ ಗುಂಪೊಂದು ಬಿಜೆಪಿ ಶಾಸಕನ ಮೇಲೆ ಮುತ್ತಿಗೆ ಹಾಕಿ ಬಟ್ಟೆ ಹಾರಿದು ಹಾಕಿದ ಘಟನೆ ಪಂಜಾಬ್ ರಾಜ್ಯದ ಮುಕ್ತ್ಸಾರ್ ಜಿಲ್ಲೆಯ ಮಾಲೌಟ್ ನಲ್ಲಿ ಶನಿವಾರ ನಡೆದಿದೆ. ಅಬೋಹರ್ ಬಿಜೆಪಿ ಶಾಸಕ ಅರುಣ್ ನಾರಂಗ್ ಹಲ್ಲೆಗೊಳಗಾದವರು. ಮಲೌಟ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಶಾಸಕ ಹೋದಾಗ ರೈತರ ಗುಂಪು ಹಲ್ಲೆ ನಡೆಸಿದೆ. ಪ್ರತಿಭಟನಾ ನಿರತ ರೈತರು, ಶಾಸಕ ಅರುಣ್ ನಾರಂಗ್ ಗಾಗಿ ಬಿಜೆಪಿ ಕಚೇರಿಯ ಮುಂದೆ ಕಾದು ಕುಳಿತಿದ್ದರು. ಅರುಣ್ …
Read More »ಅಚ್ಛೇ ದಿನ್ ಬರುತ್ತದೆ ಎಂದು ಕಾಯುತ್ತಾ ಕೂರಬೇಡಿ, ಅಚ್ಛೇ ದಿನ್ ಬರುವುದಿಲ್ಲ: ಸಿದ್ದರಾಮಯ್ಯ
ಬೆಂಗಳೂರು: ಅಚ್ಛೇ ದಿನ್ ಬರುತ್ತದೆ ಎಂದು ಕಾಯುತ್ತಾ ಕೂರಬೇಡಿ. ಅಚ್ಛೇ ದಿನ್ ಯಾವತ್ತೂ ಬರುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. ತಮಿಳುನಾಡಿನ ಥಳಿ, ಹೊಸೂರು ಹಾಗೂ ವೇಪನಪಲ್ಲಿ ವಿಧಾನಸಭೆ ಕ್ಷೇತ್ರಗಳಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡಿನ ಜನತೆ ಈವರೆಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅವರಿಗೆ ನಮೋ ನಮಃ ಎಂದು ತಿಳಿಸಿದರು. ಎಐಎಡಿಎಂಕೆ ಹೆಗಲ ಮೇಲೆ ಕುಳಿತು ಬಿಜೆಪಿ ತಮಿಳುನಾಡಿನಲ್ಲಿ …
Read More »ಯಶಸ್ವಿ ಶಸ್ತ್ರಚಿಕಿತ್ಸೆ: ಯುವತಿ ಹೊಟ್ಟೆಯಲ್ಲಿದ್ದ 8 ಕೆ.ಜಿ. ಗಡ್ಡೆ ಹೊರಕ್ಕೆ
ಸಾಗರ: ಇಲ್ಲಿನ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು 21 ವರ್ಷದ ಯುವತಿಯ ಹೊಟ್ಟೆಯಲ್ಲಿದ್ದ 8 ಕೆ.ಜಿ. ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಪ್ರಸೂತಿ ತಜ್ಞರಾದ ಡಾ. ಪ್ರತಿಮಾ ಅವರ ಬಳಿ ಸೊರಬ ತಾಲ್ಲೂಕಿನ ಯುವತಿಯೊಬ್ಬರು ತೀವ್ರವಾಗಿ ಕಾಡುತ್ತಿದ್ದ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಯುವತಿಯನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಅದನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತಿರುಗುವ …
Read More »ಶೀಘ್ರವೇ `ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್’ ರೈಲು
ಹುಬ್ಬಳ್ಳಿ : ರಾಜ್ಯದ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಆರಂಭಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಮ್ಮತಿ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ ಬೆಂಗಳೂರು ಮಧ್ಯೆ ಸೂಪರ್ ಫಾಸ್ಟ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲು ಪ್ರಯಾಣದ ಅವಧಿ 8 …
Read More »
Laxmi News 24×7