Breaking News

ರಾಜ್ಯ

ಮಗನ ಫೋಟೋ ಇಟ್ಕೊಂಡು ಯುವರತ್ನ ಸಿನಿಮಾ ವೀಕ್ಷಣೆ

ಮೈಸೂರು: ನಾಲ್ಕು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಇಂದು ಮಗನ ಫೋಟೋ ಇಟ್ಟುಕೊಂಡೇ ಯುವರತ್ನ ಸಿನಿಮಾ ವೀಕ್ಷಿಸುವ ಮೂಲಕ ಗಮನ ಸೆಳೆದಿದೆ. ನಗರದ ಮುರಳಿಧರ್ ಅವರ ಮಗ ಹರಿಕೃಷ್ಣನ್ ಮೂರು ತಿಂಗಳ ಹಿಂದೆ ಅಕಾಲಿಕ ನಿಧನರಾದ್ದಾರೆ. ಹರಿಕೃಷ್ಣನ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂದು ಮಹದಾಸೆಯಿಂದ ಕಾಯುತ್ತಿದ್ದ. ಆದರೆ ಯುವರತ್ನ ಸಿನಿಮಾ ರಿಲೀಸ್‍ಗೂ ಮುನ್ನ ಸಾವನಪ್ಪಿದ್ದಾರೆ. ಈಜಲು ಹೋಗಿ ನೀರಲ್ಲಿ …

Read More »

5 ಲಕ್ಷ ಬೆಲೆಯ ಅಕ್ರಮ ಗೋವಾ ಮದ್ಯ ತುಂಬಿದ ಲಾರಿ ಪಲ್ಟಿ- ಚಾಲಕ ಪರಾರಿ

ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಲಾರಿ ಪಲ್ಟಿಯಾಗಿದ್ದು, ಚಾಲಕ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಬಳಿ ಇಂದು ಸಂಜೆ ನಡೆದಿದೆ. ಗೋವಾ ಮೂಲಕ ಕಾರವಾರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಲಾರಿ ಚಲಿಸುತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ಪರವಾನಿಗೆ ಇಲ್ಲದ ಗೋವಾ ಮದ್ಯ ರಸ್ತೆಯಲ್ಲೇ ಬಿದ್ದಿದೆ. ಈ ವೇಳೆ ಚಾಲಕ ಹೆದರಿ ಪರಾರಿಯಾಗಿದ್ದಾನೆ. ಒಂದು …

Read More »

ಸಿದ್ರಾಮಣ್ಣ ಬರೀ ಪಾಪದ್ದು, ಅದಕ್ಕೆ ಏನೂ ಗೊತ್ತಾಗಲ್ಲ: ಮಾಜಿ ಸಿಎಂ ಬಗ್ಗೆ ಉಕ್ಕಿ ಹರಿದ ಎಚ್.ಡಿ.ರೇವಣ್ಣ ಪ್ರೀತಿ

ಹಾಸನ, ಏಪ್ರಿಲ್ 4: “ತಾಂಬೂಲ ತಂದಿದ್ದೇವೆ, ದೇವೇಗೌಡ್ರೇ ನಿಮ್ಮ ಕಾಲಿಗೆ ಬೀಳುತ್ತೇವೆ, ಕುಮಾರಸ್ವಾಮಿಯವರೇ ನಿಮ್ಮ ಕಾಲಿಗೆ ಬೀಳುತ್ತೇವೆ, ನೀವೇ ಮುಖ್ಯಮಂತ್ರಿಯಾಗ ಬೇಕೆಂದು ಗೋಗರೆದರು, ಅದಕ್ಕೆ ಗೌಡ್ರು ಒಪ್ಪಿಕೊಂಡರು” ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ, ಹೇಳಿದರು. “ದೇವೇಗೌಡ್ರನ್ನು ಹನ್ನೊಂದು ತಿಂಗಳಲ್ಲಿ ತೆಗೆದರಲ್ವಾ, ಆ ಶಾಪ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ. ಈ ಶಾಪದಿಂದಾಗಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಬೇರೆ ಯಾರೂ ಏನೂ ಮಾಡಬೇಕಾಗಿಲ್ಲ”ಎಂದು ರೇವಣ್ಣ ಅಭಿಪ್ರಾಯ ಪಟ್ಟರು. ‘ “ನಮ್ಮ ಬಳಿ …

Read More »

ನನ್ನ ರಾಜಕೀಯ ಜೀವನಕ್ಕೆ ಅಡ್ಡಿಯಾಗುತ್ತದೆ ಎಂದಾದರೆ ನಾನು ಸಿನಿಮಾರಂಗ ಬಿಡಲೂ ಸಿದ್ಧನಾಗಿದ್ದೇನೆ: ಕಮಲ್ ಹಾಸನ್

ಕೊಯಮತ್ತೂರು, ಏಪ್ರಿಲ್ 5: ನನ್ನ ರಾಜಕೀಯ ಜೀವನಕ್ಕೆ ಅಡ್ಡಿಯಾಗುತ್ತದೆ ಎಂದಾದರೆ ನಾನು ಸಿನಿಮಾರಂಗ ಬಿಡಲೂ ಸಿದ್ಧನಾಗಿದ್ದೇನೆ ಎಂದು ನಟ ಹಾಗೂ ಮಕ್ಕಳನೀದಿ ಮಯ್ಯಂ ಮುಖಂಡ ಕಮಲ್ ಹಾಸನ್ ಹೇಳಿದ್ದಾರೆ. “ನನ್ನ ರಾಜಕೀಯ ಜೀವನಕ್ಕೆ ಅಡ್ಡಿಯಾಗುತ್ತದೆ ಎಂದಾದರೆ ಸದ್ಯಕ್ಕಿರುವ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸಿ ಸಿನಿಮಾ ರಂಗವನ್ನು ಬಿಡುತ್ತೇನೆ” ಎಂದು ಘೋಷಿಸಿದ್ದಾರೆ. ತಮ್ಮ ರಾಜಕೀಯ ಪ್ರವೇಶ ಐತಿಹಾಸಿಕ ಎಂದು ಹೇಳಿರುವ ಅವರು, ರಾಜಕೀಯದಿಂದ ದೂರ ಉಳಿಯಲು ಬಯಸುವ ಶೇ 30ರಷ್ಟು ಮಂದಿಯಲ್ಲಿ ನಾನೂ …

Read More »

ನ್ಯಾಯಾಧೀಶರು ಸಿಟ್ಟಾಗಿದ್ದು ಕುಮಾರಸ್ವಾಮಿ ವಿರುದ್ಧ ಬಂಧನ ವಾರಂಟ್ ಹೊರಡಿಸುವುದಾಗಿ ಎಚ್ಚರಿಕೆ

ರಾಮನಗರ: ನ್ಯಾಯಾಲಯದ ಎಚ್ಚರಿಕೆ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ ಭಾನುವಾರ ರಾತ್ರಿ‌ ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದರು. ಕೆಲವು ದಿನಗಳ ಹಿಂದಷ್ಟೇ ಕುಮಾರಸ್ವಾಮಿ ಬೆಂಗಳೂರಿನ ನ್ಯಾಯಾಲಯವೊಂದರಲ್ಲಿ ಪ್ರಕರಣವೊಂದರ ವಿಚಾರಣೆಗೆ ಗೈರಾಗಿದ್ದರು. ಎಚ್.ಡಿ. ದೇವೇಗೌಡರಿಗೆ ಕೋವಿಡ್ ಸೋಂಕು ತಗುಲಿದ ಕಾರಣ ಕುಮಾರಸ್ವಾಮಿ ಕ್ವಾರಂಟೈನ್ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರು‌ ನ್ಯಾಯಾಲಯಕ್ಕೆ ಬಂದಿಲ್ಲ ಎಂದು ಎಚ್ ಡಿಕೆ ಪರ ವಕೀಲರು‌ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.   ಇದಕ್ಕೆ ನ್ಯಾಯಾಧೀಶರು ಸಿಟ್ಟಾಗಿದ್ದು, …

Read More »

ಪ್ರಧಾನಿ ಮೋದಿ ಬಳಿ ಸೆಲೆಬ್ರಿಟಿಗಳ ಬರ್ತ್ ​ಡೇ ವಿಶ್ ಮಾಡಲು ಸಮಯವಿದೆ, ರೈತರಿಗಾಗಿ ಸಮಯವಿಲ್ಲ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಳ್ಳೂರು ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಶುರುವಾಗಿದೆ. ಸತೀಶ್ ಜಾರಕಿಹೊಳಿ ಮತಯಾಚನೆ ಕೈಗೊಂಡಿದ್ದಾರೆ. ಮರಾಠಾ ಸಮುದಾಯ ಓಲೈಕೆಗೆ ಕಾಂಗ್ರೆಸ್ ಕಸರತ್ತು ಮಾಡಿದ್ದು ಕೇಸರಿ ಪೇಟ ಧರಿಸಿ ಸತೀಶ್ ಜಾರಕಿಹೊಳಿ ಮತಯಾಚನೆ ಕೈಗೊಂಡಿದ್ದಾರೆ. ಮರಾಠಿ ಭಾಷಿಗರೇ ಹೆಚ್ಚಾಗಿರುವ ಯಳ್ಳೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಮತ ಪ್ರಚಾರದಲ್ಲಿ ಸತೀಶ್ ಜಾರಕಿಹೊಳಿ‌ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ. ಪೆಟ್ರೋಲ್​, ಡೀಸೆಲ್​ ಜೊತೆಗೆ …

Read More »

ಸ್ವಂತ ಜಮೀನಿಗೂ ಸರ್ಕಾರದಿಂದ ಅನುದಾನ; ಫಾರ್ಮ್ ಹೌಸ್ ಅಭಿವೃದ್ಧಿಗೆ ಕೋಟ್ಯಂತರ ರೂ. ಬಿಡುಗಡೆ; ಬಿಎಸ್ ವೈ ವಿರುದ್ಧ ಶಾಸಕನ ಗಂಭೀರ ಆರೋಪ

ಮೈಸೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ಕುಟುಂಬ ರಾಜಕಾರಣ ನಡೆಯುತ್ತಿದೆ. ತಮ್ಮ ಕುಟುಂಬದವರಿಗಾದರೆ ಹಣ ಕೇಳಿದ ತಕ್ಷಣ ಅನುದಾನವನ್ನೇ ಬಿಡುಗಡೆ ಮಾಡುತ್ತಾರೆ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಕೇಳಿದರೆ ಹಣವೇ ಇಲ್ಲ ಎನ್ನುತ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್.ಪಿ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಂತ ಜಮೀನಿನ ಕೆಲಸಕ್ಕೂ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಸಿಎಂ ಬಿ ಎಸ್ ವೈ ತಂಗಿಯ ಪುತ್ರ ಅಶೋಕ್ ಅವರದ್ದು …

Read More »

ಸಪ್ಲಾಯರ್ ಕೆಲಸ ಮಾಡಿಲ್ಲ. ಹೀಗಾಗಿ ಸಪ್ಲೈಯರ್ ಗಳಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ಕಿಡಿ‌ ಕಾರಿದ ಯತ್ನಾಳ

ವಿಜಯಪುರ: ಮಂತ್ರಿಯಾಗಲು, ಎಂಎಲ್ ಸಿ ಆಗಲು ಅಶ್ಲೀಲ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವವರಿಂದ ನಾನು ಕಲಿಯಬೇಕಾದುದು ಏನೂ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಮತ್ತೆ ಹರಿ ಹಾಯ್ದಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ, ಸಚಿವರ ಅಶ್ಲೀಲ ಸಿಡಿ ಮಾಡಿದವರು ನಾಲಾಯಕರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.   ಮಂತ್ರಿ ಆಗಲು ನಾನು ಯಾರಿಗೂ …

Read More »

ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಯೋಧರು ಹುತಾತ್ಮ, 18 ಯೋಧರು ನಾಪತ್ತೆ!

ಛತ್ತೀಸ್ ಗಢ್: ಇಲ್ಲಿನ ಸುಕ್ಮಾ- ಬಿಜಾಪುರ ಗಡಿ ಪ್ರದೇಶದಲ್ಲಿ ಶನಿವಾರ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿಎಂಟು ಮಂದಿ ಯೋಧರು ಹುತಾತ್ಮರಾಗಿದ್ದು, 18 ಮಂದಿ ಯೋಧರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಸಿಆರ್‌ಪಿಎಫ್ ನ ಕೋಬ್ರಾ ಪಡೆ, ವಿಶೇಷ ಕಾರ್ಯಾಚರಣೆ ಪಡೆ, ಜಿಲ್ಲಾ ಮೀಸಲು ಗಾರ್ಡ್ಸ್‌ನ 2 ಸಾವಿರ ಸಿಬ್ಬಂದಿ ಛತ್ತೀಸ್‌ಗಡದ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸುಕ್ಮಾ ಜಿಲ್ಲೆಯ ಜಾಗರ್‌ಗುಂಡಾ ಠಾಣೆ …

Read More »

ಮೊದಲು ಯಡಿಯೂರಪ್ಪ ಯತ್ನಾಳ್ ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ: ಸಿದ್ದರಾಮಯ್ಯ

ಬೆಂಗಳೂರು: ಅನ್ನ ಭಾಗ್ಯ ಯೋಜನೆ ವಿಚಾರದ ಬಗ್ಗೆ ಮಾತನಾಡುವಾಗ ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಎಂದಿದೆ. ಅದು ಬೈಗುಳವೇ? ಮೊದಲು ಯಡಿಯೂರಪ್ಪ ಯತ್ನಾಳ್ ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ನಲವತ್ತು ವರ್ಷದ ಅನುಭವವಿದೆ. ಇದು ಯಡಿಯೂರಪ್ಪ ಮನೆ ಹಣ ಅಲ್ಲ, ಸರ್ಕಾರದ ಹಣ ಅಂತ ಹೇಳೋದು ಅಸಂವಿಧಾನಿಕ ಪದವೇ ಎಂದು ಪ್ರಶ್ನಿಸಿದರು. ಜಾರಕಿಹೊಳಿ …

Read More »